ಅಮೆರಿಕದ ಕನ್ನಡಿಗ ಸಂಘಟನೆಗಳ ಒಕ್ಕೂಟ 'ಅಕ್ಕ' ಸಂಸ್ಥೆ 25 ವರ್ಷಗಳನ್ನು ಪೂರೈಸುತ್ತಿದ್ದು, ಸೆಪ್ಟೆಂಬರ್‌ನಲ್ಲಿ ಫಿಲಡೆಲ್ಫಿಯಾದಲ್ಲಿ ಬೆಳ್ಳಿ ಹಬ್ಬದ ವಿಶ್ವ ಕನ್ನಡ ಸಮ್ಮೇಳನ ಆಯೋಜನೆಗೊಂಡಿದೆ. ವಿವಿಧ ಕಾರ್ಯಕ್ರಮಗಳಿಗೆ ಸಮ್ಮೇಳನ ಸಾಕ್ಷಿಯಾಗಲಿದ್ದು, 'ಅಕ್ಕ ಸಿರಿಪೇಟೆ' ಪ್ರಮುಖ ಆಕರ್ಷಣೆಗಳಲ್ಲಿ ಒಂದು.
'ಸಿರಿಪೇಟೆ'ಯನ್ನು ಕೇವಲ ವಸ್ತುಗಳನ್ನು ಖರೀದಿಸುವ ಮಾರುಕಟ್ಟೆಯಾಗಿ ರೂಪಿಸದೆ, ವ್ಯಾಪಾರ, ವೃತ್ತಿಪರ ಸೇವೆ, ಶಿಕ್ಷಣ, ಹೂಡಿಕೆ, ಸಾಹಿತ್ಯ ಮತ್ತು ಸಮುದಾಯ ಸೇವೆಯ ಪರಿಚಯಕ್ಕೂ ವೇದಿಕೆಯಾಗಿಸುವ ಉದ್ದೇಶ ಹೊಂದಿದ್ದೇವೆ' ಎಂದು ಸಮ್ಮೇಳನದ ಪ್ರದರ್ಶನ ಮತ್ತು ವಿತರಕರ ಸಂಬಂಧಗಳ ತಂಡದ ಅಧ್ಯಕ್ಷ ಸ್ವರೂಪ್ ಶಂಕರ್ ಹೇಳಿದರು.
ಈ ಬಾರಿ 60ಕ್ಕೂ ಹೆಚ್ಚು ವ್ಯಾಪಾರಿಗಳು, ಉದ್ಯಮಿಗಳು, ವೃತ್ತಿಪರರು, ಸಂಸ್ಥೆಗಳು ಮತ್ತು ಸೇವಾ ಪೂರೈಕೆದಾರರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.
ಅರಮನೆಯ ವೈಭವ
'ಅಕ್ಕ ಸಿರಿಪೇಟೆ 2026'ರ ಉದ್ಘಾಟನೆ ಸೆಪ್ಟೆಂಬರ್ 4ರಂದು ಸಂಜೆ 5.30ಕ್ಕೆ ನಡೆಯಲಿದೆ. ಫಿಲಡೆಲ್ಫಿಯಾದ ಪೆನ್ಸಿಲ್ವೇನಿಯಾ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಅಕ್ಕದ ನಾಯಕರು, ಗಣ್ಯರು, ಸಮುದಾಯದ ಮುಖಂಡರು, ಪ್ರಾಯೋಜಕರು, ಉದ್ಯಮಿಗಳು ಮತ್ತು ಸಮ್ಮೇಳನದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 'ಮೈಸೂರು ಅರಮನೆಯ ಪರಂಪರೆಯನ್ನು ಪರಿಚಯಿಸುವ ಈ ಉದ್ಘಾಟನಾ ಕಾರ್ಯಕ್ರಮವು ಕರ್ನಾಟಕದ ಸಂಸ್ಕೃತಿಯನ್ನು ಅಮೆರಿಕದ ಕನ್ನಡಿಗರ ಇಂದಿನ ಬದುಕು ಮತ್ತು ಉದ್ಯಮಶೀಲತೆಯೊಂದಿಗೆ ಬೆಸೆಯುವ ಪ್ರಯತ್ನವಾಗಿದೆ' ಎಂದು ಸ್ವರೂಪ್ ವಿವರಿಸಿದರು.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
'ಅಕ್ಕ' ಸಮ್ಮೇಳನದಲ್ಲಿ ಕರ್ನಾಟಕದ ಸಿರಿಪೇಟೆ: ಪರಂಪರೆ, ಉದ್ಯಮ ಮತ್ತು ಅವಕಾಶಗಳ ಸಂಗಮ
ಒಂದು ಸಾಲಿನಲ್ಲಿಅಮೆರಿಕದ 'ಅಕ್ಕ' ಸಂಘಟನೆಯ ರಜತ ಮಹೋತ್ಸವದ ಅಂಗವಾಗಿ ನಡೆಯಲಿರುವ 'ಸಿರಿಪೇಟೆ' ಕನ್ನಡ ಸಂಸ್ಕೃತಿ, ಉದ್ಯಮ ಮತ್ತು ಸಮುದಾಯದ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸಲಿದೆ.
ಪ್ರಮುಖ ಪ್ರಶ್ನೋತ್ತರ
ಅಕ್ಕ ಸಿರಿಪೇಟೆ ಎಂದರೆ ಏನು?
ಇದು ಅಕ್ಕ ಸಮ್ಮೇಳನದಲ್ಲಿ ಆಯೋಜಿಸಲಾದ ಪ್ರಮುಖ ಪ್ರದರ್ಶನವಾಗಿದ್ದು, ಕೇವಲ ವಸ್ತುಗಳ ಮಾರುಕಟ್ಟೆಯಾಗಿರದೆ ವ್ಯಾಪಾರ, ಶಿಕ್ಷಣ, ಸಾಹಿತ್ಯ ಮತ್ತು ಸಮುದಾಯ ಸೇವೆಗಳ ಮಾಹಿತಿಯನ್ನು ಒದಗಿಸುವ ವೇದಿಕೆಯಾಗಿದೆ.
ಈ ಕಾರ್ಯಕ್ರಮವು ಯಾವಾಗ ಮತ್ತು ಎಲ್ಲಿ ನಡೆಯಲಿದೆ?
ಈ ಕಾರ್ಯಕ್ರಮವು ಸೆಪ್ಟೆಂಬರ್ 4ರಂದು ಫಿಲಡೆಲ್ಫಿಯಾದ ಪೆನ್ಸಿಲ್ವೇನಿಯಾ ಕನ್ವೆನ್ಶನ್ ಸೆಂಟರ್‌ನಲ್ಲಿ ಆಯೋಜನೆಗೊಂಡಿದ್ದು, ಮೈಸೂರಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉದ್ಘಾಟಿಸಲಿದ್ದಾರೆ.
ಸಿರಿಪೇಟೆಯಲ್ಲಿ ಸಂದರ್ಶಕರಿಗೆ ಏನೆಲ್ಲಾ ಸಿಗಲಿದೆ?
ಸಾಂಪ್ರದಾಯಿಕ ಉಡುಪುಗಳು ಮತ್ತು ಆಭರಣಗಳ ಜೊತೆಗೆ ಕನ್ನಡ ಸಾಹಿತ್ಯ ಪುಸ್ತಕಗಳು, ಶಿಕ್ಷಣ ಮಾರ್ಗದರ್ಶನ, ಹಣಕಾಸು ಯೋಜನೆ, ರಿಯಲ್ ಎಸ್ಟೇಟ್ ಮತ್ತು ಇಬಿ-5 ವೀಸಾ ಹೂಡಿಕೆಯ ಮಾಹಿತಿ ಇಲ್ಲಿ ಲಭ್ಯವಿದೆ.
ಈ ಕಾರ್ಯಕ್ರಮದ ಮುಖ್ಯ ಉದ್ದೇಶವೇನು?
ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರನ್ನು ಅವರ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಬೆಸೆಯುವುದು ಮತ್ತು ಉದ್ಯಮಶೀಲತೆ, ವೃತ್ತಿಪರ ಅವಕಾಶಗಳ ವಿನಿಮಯಕ್ಕೆ ವೇದಿಕೆಯನ್ನು ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಯಾವೆಲ್ಲಾ ಸಂಸ್ಥೆಗಳು ಅಥವಾ ವ್ಯಕ್ತಿಗಳು ಇಲ್ಲಿ ಭಾಗವಹಿಸುತ್ತಿದ್ದಾರೆ?
60ಕ್ಕೂ ಹೆಚ್ಚು ವ್ಯಾಪಾರಿಗಳು, ಉದ್ಯಮಿಗಳು, ವೃತ್ತಿಪರ ಸಂಸ್ಥೆಗಳು, ಎನ್‌ಜಿಒಗಳು ಮತ್ತು ಸೇವಾ ಪೂರೈಕೆದಾರರು ತಮ್ಮ ಸೇವೆಗಳನ್ನು ಪರಿಚಯಿಸಲು ಈ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದಾರೆ.
ಪ್ರಮುಖ ಅಂಕಿಅಂಶಗಳು
25ಅಕ್ಕ ಸಂಸ್ಥೆಯ ವಯಸ್ಸು60ಕ್ಕೂ ಹೆಚ್ಚುಪ್ರದರ್ಶನದಲ್ಲಿ ಭಾಗವಹಿಸುವವರ ಸಂಖ್ಯೆಸೆಪ್ಟೆಂಬರ್ 4ಉದ್ಘಾಟನಾ ದಿನಾಂಕ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಸಿರಿಪೇಟೆ
ಪ್ರದರ್ಶನದಲ್ಲಿ ಏನೆಲ್ಲಾ ಇರಲಿದೆ?
ಸಿರಿಪೇಟೆಯಲ್ಲಿ ವಿವಿಧ ಕ್ಷೇತ್ರಗಳ ವ್ಯಾಪಾರ ಮತ್ತು ಸೇವೆಗಳು ಒಂದೇ ಸ್ಥಳದಲ್ಲಿ ಸಿಗಲಿದೆ. ಸೀರೆ, ಸಾಂಪ್ರದಾಯಿಕ ಉಡುಪು ಮತ್ತು ಆಭರಣಗಳಿಂದ ಹಿಡಿದು ಭಾರತೀಯ ತಿಂಡಿ-ತಿನಿಸುಗಳವರೆಗೆ ಹಲವು ವಸ್ತುಗಳು ಇಲ್ಲಿ ದೊರೆಯಲಿವೆ. ಕನ್ನಡ ಪುಸ್ತಕ ಮತ್ತು ಸಾಹಿತ್ಯಕ್ಕೂ ಸ್ಥಳ ಕಲ್ಪಿಸಲಾಗಿದೆ.
ಇದರ ಜತೆಗೆ ಶಿಕ್ಷಣ ಮಾರ್ಗದರ್ಶನ ನೀಡುವ ಸಂಸ್ಥೆಗಳು, ಹಣಕಾಸು ಯೋಜನೆ ಮತ್ತು ಸಲಹಾ ಸೇವೆ ನೀಡುವ ವೃತ್ತಿಪರರು, ರಿಯಲ್ ಎಸ್ಟೇಟ್ ಮತ್ತು ಇತರ ಹೂಡಿಕೆ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಮೆರಿಕ ಮತ್ತು ಭಾರತದಲ್ಲಿನ ಹೂಡಿಕೆ ಅವಕಾಶಗಳ ಜತೆಗೆ ಇಬಿ-5 ವೀಸಾ ಹೂಡಿಕೆಗೆ ಸಂಬಂಧಿಸಿದ ಮಾಹಿತಿಯನ್ನೂ ಪಡೆಯಲು ಅವಕಾಶವಿರಲಿದೆ. ಅಮೆರಿಕದಲ್ಲಿ ನೆಲಸಿರುವ ಕುಟುಂಬಗಳಿಗೆ ಸಂಬಂಧಿಸಿದ ಎಸ್ಟೇಟ್ ಪ್ಲಾನಿಂಗ್, ವಲಸೆ ಮತ್ತು ಪ್ರಾಯೋಜಕತ್ವದಂತಹ ವಿಷಯಗಳ ಕುರಿತು ಮಾಹಿತಿ ನೀಡುವ ವೃತ್ತಿಪರರೂ ಸಿರಿಪೇಟೆಯಲ್ಲಿ ಇರಲಿದ್ದಾರೆ.
ಹೀಗಾಗಿ, ಸಿರಿಪೇಟೆಯಲ್ಲಿ ವ್ಯಾಪಾರಕ್ಕೆ ಮಾತ್ರವಲ್ಲದೆ, ಕುಟುಂಬದ ವಿವಿಧ ಅಗತ್ಯಗಳಿಗೆ ಬೇಕಾದ ಮಾಹಿತಿ ಮತ್ತು ಸೇವೆಗಳನ್ನು ಒಂದೇ ಕಡೆ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
ಅಮೆರಿಕದಲ್ಲಿ ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ: ಪಿ. ಶೇಷಾದ್ರಿಸಂಪೂರ್ಣ ಕುಟುಂಬಕ್ಕೆ ಉಪಯೋಗ
ಕುಟುಂಬದ ವಿವಿಧ ವಯೋಮಾನದವರನ್ನು ಗಮನದಲ್ಲಿಟ್ಟುಕೊಂಡು ಸಿರಿಪೇಟೆಯ ವಿನ್ಯಾಸ ಮಾಡಲಾಗಿದೆ. 'ಸೀರೆ ಖರೀದಿಸಲು ಬರುವ ತಾಯಿ, ಆಭರಣ ನೋಡಲು ಬರುವ ಮಗಳು, ಮಕ್ಕಳ ಶಿಕ್ಷಣದ ಬಗ್ಗೆ ಮಾಹಿತಿ ಪಡೆಯಲು ಬಯಸುವ ಪೋಷಕರು, ಹಣಕಾಸು ಯೋಜನೆ ಕುರಿತು ತಿಳಿದುಕೊಳ್ಳಲು ಬಯಸುವ ಯುವ ವೃತ್ತಿಪರರು, ಹೂಡಿಕೆ ಅವಕಾಶಗಳನ್ನು ಹುಡುಕುತ್ತಿರುವ ಉದ್ಯಮಿಗಳು; ಹೀಗೆ ವಿಭಿನ್ನ ಅಗತ್ಯಗಳಿರುವವರಿಗೆ ಸಂಬಂಧಿಸಿದ ಸೇವೆಗಳು ಮತ್ತು ಸಂಪರ್ಕಗಳು ಸಿಗುವಂತೆ ರೂಪಿಸಲಾಗಿದೆ' ಎಂದು ಸಮಿತಿಯ ಉಪಾಧ್ಯಕ್ಷ ಸಿರಿಗೌಡ ತಿಳಿಸಿದರು.
ಕನ್ನಡ ಪುಸ್ತಕಗಳನ್ನು ಪರಿಚಯಿಸುವ ಮೂಲಕ ಯುವ ಪೀಳಿಗೆಯನ್ನು ಕನ್ನಡ ಭಾಷೆ ಮತ್ತು ಸಾಹಿತ್ಯದೊಂದಿಗೆ ಸಂಪರ್ಕದಲ್ಲಿಡುವ ಪ್ರಯತ್ನವೂ ಇದೆ. 'ಎನ್‌ಜಿಒಗಳು ಮತ್ತು ಸಮುದಾಯ ಸಂಸ್ಥೆಗಳಿಗೂ ತಮ್ಮ ಕೆಲಸವನ್ನು ಪರಿಚಯಿಸಿಕೊಳ್ಳಲು ಹಾಗೂ ಆಸಕ್ತರನ್ನು ತಮ್ಮೊಂದಿಗೆ ಸಂಪರ್ಕಿಸಲು ವೇದಿಕೆ ಕಲ್ಪಿಸಲಾಗಿದೆ' ಎಂದು ಸಿರಿಗೌಡ ಹೇಳಿದರು.
ಹ್ಯಾರಿ-ಮೇಘನ್ ಮತ್ತೆ ಬ್ರಿಟನ್‌ಗೆ: ಹಳೆಯ ಬಿರುಕುಗಳ ನಡುವೆ ಹೊಸ ಅಧ್ಯಾಯವೇ?ವ್ಯಾಪಾರದಾಚೆಗಿನ ಸಿರಿಪೇಟೆ
'ಸಿರಿಪೇಟೆ' ಎಂಬ ಹೆಸರು ಸಮೃದ್ಧಿ ಮತ್ತು ಚಟುವಟಿಕೆಯಿಂದ ಕೂಡಿದ ಮಾರುಕಟ್ಟೆ ಎಂಬ ಅರ್ಥವನ್ನು ನೀಡುತ್ತದೆ. ಅಕ್ಕ ಸಮ್ಮೇಳನದಲ್ಲಿ ಈ ಮಾರುಕಟ್ಟೆಯನ್ನು ಕರ್ನಾಟಕದ ಪರಂಪರೆ ಮತ್ತು ವಿದೇಶದಲ್ಲಿರುವ ಕನ್ನಡಿಗರ ಇಂದಿನ ಬದುಕಿನ ನಡುವೆ ಸಂಪರ್ಕ ಕಲ್ಪಿಸುವ ವೇದಿಕೆಯಾಗಿ ರೂಪಿಸಲಾಗಿದೆ. ಇಲ್ಲಿ ಕರ್ನಾಟಕದ ಸಂಪ್ರದಾಯ ಮತ್ತು ಕರಕುಶಲತೆಗೆ ಸಂಬಂಧಿಸಿದ ವ್ಯಾಪಾರಗಳ ಜೊತೆಗೆ ಹಣಕಾಸು, ಶಿಕ್ಷಣ, ರಿಯಲ್ ಎಸ್ಟೇಟ್, ತಂತ್ರಜ್ಞಾನ, ವಲಸೆ ಹಾಗೂ ವಿವಿಧ ವೃತ್ತಿಪರ ಸೇವೆಗಳ ಕ್ಷೇತ್ರಗಳೂ ಭಾಗಿಯಾಗಲಿವೆ.
ವಿಶ್ಲೇಷಣೆ |ಯುಕೆ ಜೊತೆ ವ್ಯಾಪಾರ ಒಪ್ಪಂದ: ಭಾರತದ ರಫ್ತು ಆರ್ಥಿಕತೆಗೆ ಹೊಸ ದಿಕ್ಕುಕನ್ನಡಿಗರ ಬೆಳ್ಳಿ ಹಬ್ಬದ ಭಾಗ
ಅಕ್ಕ ಸಂಸ್ಥೆ ಉತ್ತರ ಅಮೆರಿಕದ ಕನ್ನಡ ಸಮುದಾಯವನ್ನು ಒಗ್ಗೂಡಿಸಿ 25 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಈ ವರ್ಷದ ಸಮ್ಮೇಳನ ನಡೆಯುತ್ತಿದೆ. ಆ ಬೆಳ್ಳಿ ಹಬ್ಬದ ಪ್ರಮುಖ ಭಾಗವಾಗಿ ಸಿರಿಪೇಟೆ ರೂಪುಗೊಳ್ಳುತ್ತಿದೆ. ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುವ ವಸ್ತುಗಳ ಜತೆಗೆ, ಇಂದಿನ ಕನ್ನಡಿಗರ ಉದ್ಯಮ, ವೃತ್ತಿ ಮತ್ತು ಸೇವಾ ಕ್ಷೇತ್ರದ ಬೆಳವಣಿಗೆಯನ್ನೂ ಒಂದೇ ವೇದಿಕೆಯಲ್ಲಿ ಪರಿಚಯಿಸುವುದು ಇದರ ಉದ್ದೇಶ.
ಸೆಪ್ಟೆಂಬರ್ 4ರಂದು ಸಂಜೆ ಆರಂಭವಾಗಲಿರುವ 'ಅಕ್ಕ ಸಿರಿಪೇಟೆ 2026' ಸೆಪ್ಟೆಂಬರ್‌ನಲ್ಲಿ ನಡೆಯುವ ಬೆಳ್ಳಿ ಹಬ್ಬದ ಸಮ್ಮೇಳನದ ಸಂದರ್ಭದಲ್ಲಿ ವ್ಯಾಪಾರ ಮತ್ತು ಖರೀದಿಯ ಜಾಗವನ್ನು ಮೀರಿ, ಕನ್ನಡಿಗರ ನಡುವೆ ಸಂಪರ್ಕ, ಮಾಹಿತಿ ಮತ್ತು ಅವಕಾಶಗಳ ವಿನಿಮಯಕ್ಕೆ ಒಂದು ವೇದಿಕೆಯಾಗಲಿದೆ.
ಗಯಾನಾದಲ್ಲಿ ಕನ್ನಡಿಗನ ಕೃಷಿ ಸಾಧನೆ: ನಿಪ್ಪಾಣಿಯ ಅಭಿಲಾಷ್ ಯಶೋಗಾಥೆ
