ಅಯೋಧ್ಯೆ: ಇಲ್ಲಿನ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಎಲ್ಲಾ ಎಂಟು ಜನ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 18ರವರೆಗೆ ವಿಸ್ತರಿಸಿ ಅಯೋಧ್ಯೆಯ ವಿಶೇಷ ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಧೀಶ ರಜತ್ ವರ್ಮಾ ಅವರಿದ್ದ ಪೀಠವು ಈ ಆದೇಶವನ್ನು ಹೊರಡಿಸಿದೆ ಎಂದು ಆರೋಪಿಗಳ ಪರ ವಕೀಲ ಕುಲ್ ಶೇಖರ್ ಸಿಂಗ್ ಅವರು ತಿಳಿಸಿದ್ದಾರೆ.
ರಾಮಮಂದಿರದಲ್ಲಿ ಭಕ್ತರು ನೀಡುತ್ತಿದ್ದ ಕಾಣಿಕೆ ಎಣಿಕೆ ಪ್ರಕ್ರಿಯೆಯಲ್ಲಿ ತೊಡಗಿದ್ದ ಸಿಬ್ಬಂದಿಯೇ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ ನೀಡಿದ ಪ್ರಾಥಮಿಕ ವರದಿ ಆಧಾರದ ಮೇಲೆ ಜೂನ್ 25 ರಂದು ಎಫ್‌ಐಆರ್ ದಾಖಲಾಗಿತ್ತು. ತನಿಖೆ ಚುರುಕುಗೊಳಿಸಿದ ಪೊಲೀಸರು ಎಂಟು ಜನರನ್ನು ಬಂಧಿಸಿದ್ದರು.
ದೇಶದ 17 ರಾಜ್ಯಗಳಲ್ಲಿ ಎಸ್‌ಐಆರ್: 5.57 ಕೋಟಿ ಮತದಾರರು ಹೊರಕ್ಕೆಜನರ ಮನೆಬಾಗಿಲಿಗೆ ಸರ್ಕಾರ: 'ಪ್ರಜಾಸೇವೆ' ಅಭಿಯಾನ ಆರಂಭಪ್ರಕರಣದಲ್ಲಿ ಇಲ್ಲಿಯವರೆಗೆ ಪ್ರಾಸಿಕ್ಯೂಷನ್ ಸುಮಾರು ₹79.85 ಲಕ್ಷ ನಗದು ಹಾಗೂ ಮೌಲ್ಯಯುತ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಅವಿನಾಶ್ ಶುಕ್ಲಾ, ಅನುಕಲ್ಪ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮ್ ಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮಶಂಕರ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಲ್ಲಿ ಹೆಚ್ಚಿನವರು ಕಾಣಿಕೆ ಎಣಿಕೆ ಕೆಲಸಕ್ಕೆ ನಿಯೋಜನೆಗೊಂಡಿದ್ದ ಬ್ಯಾಂಕ್ ಉದ್ಯೋಗಿಗಳಾಗಿದ್ದರೆ, ಸುಭಾಷ್ ಶ್ರೀವಾಸ್ತವ ಅವರು ಕಾಣಿಕೆ ಎಣಿಕೆ ಪ್ರಕ್ರಿಯೆಯ ಉಸ್ತುವಾರಿಯಾಗಿದ್ದರು. ರಾಮಶಂಕರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಒಳನೋಟ: ಸೋಜಿಗದ ಉಪ್ಪಿನ ಆಗರಕೆಂಪೇಗೌಡ ಗೋಪುರಕ್ಕೆ ಅಪಾಯ: ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ಎಚ್ಚರಿಕೆಬ್ಯಾಂಕ್ ಖಾತೆ ಮುಟ್ಟುಗೋಲು ವಾಪಸಾತಿಗೆ ಮನವಿ
ಆರೋಪಿ ಸುಭಾಷ್ ಶ್ರೀವಾಸ್ತವ ಅವರ ಕೆನರಾ ಬ್ಯಾಂಕ್ ಖಾತೆಗೆ ಅವರ ನಿವೃತ್ತಿ ವೇತನ ಜಮೆಯಾಗುತ್ತಿದೆ. ಕುಟುಂಬದ ನಿರ್ವಹಣೆಗೆ ಅದೇ ಆಧಾರವಾಗಿದೆ. ಹೀಗಾಗಿ ಅವರ ಬ್ಯಾಂಕ್ ಖಾತೆಯ ಮೇಲಿನ ಮುಟ್ಟುಗೋಲನ್ನು ತೆರವುಗೊಳಿಸಬೇಕೆಂದು ವಕೀಲರು ಕೋರಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಸೆಪ್ಟೆಂಬರ್ 9ಕ್ಕೆ ಮುಂದೂಡಿದೆ.

