Dailyhunt Logo
  • Light mode
    Follow system
    Dark mode
    • Play Story
    • App Story
Explainer: ಡಿಜಿಟಲ್ ‌ಚಳವಳಿಯಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ ಸಿಜೆಪಿ!

Explainer: ಡಿಜಿಟಲ್ ‌ಚಳವಳಿಯಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ ಸಿಜೆಪಿ!

ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ತಮಾಷೆಗಾಗಿ ಅಥವಾ ಮೀಮ್ಸ್‌ಗಾಗಿ ಆರಂಭವಾಗುವ ಕೆಲವು ವಿಷಯಗಳು ಕೆಲವೊಮ್ಮೆ ದೇಶದ ದೊಡ್ಡ ರಾಜಕೀಯ ವಿದ್ಯಮಾನವಾಗಿ ಬದಲಾಗುತ್ತವೆ. ಇದಕ್ಕೆ ಇತ್ತೀಚಿನ ಉದಾಹರಣೆ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ). ಕೆಲವೇ ದಿನಗಳಲ್ಲಿ ಭಾರತದ ಇಂಟರ್ನೆಟ್ ಜಗತ್ತಿನಲ್ಲಿ ಕೋಲಾಹಲ ಸೃಷ್ಟಿಸಿರುವ ಈ ಡಿಜಿಟಲ್ ಅಭಿಯಾನ, ಪ್ರಸ್ತುತ ದೇಶದ ಯುವಜನತೆಯ ಅಸಮಾಧಾನ ಮತ್ತು ಆಕ್ರೋಶದ ಪ್ರತಿಬಿಂಬವಾಗಿ ಹೊರಹೊಮ್ಮಿದೆ.

ಈ ಚಳವಳಿ ಆರಂಭವಾಗಲು ಕಾರಣವೇನು?

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು ನ್ಯಾಯಾಲಯದ ವಿಚಾರಣೆಯೊಂದರ ಸಂದರ್ಭದಲ್ಲಿ ಆಡಿದ ಮಾತುಗಳೇ ಈ ಅಭಿಯಾನಕ್ಕೆ ಕಿಡಿ ಹೊತ್ತಿಸಿದವು. ನಿರುದ್ಯೋಗಿ ಯುವಕರನ್ನು 'ಜಿರೆಳೆಗಳು' ಎಂದು ಸಿಜೆಐ ಕರೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.

ನ್ಯಾಯಾಧೀಶರ ಸ್ಪಷ್ಟನೆ: ತಮ್ಮ ಹೇಳಿಕೆ ತಪ್ಪಾಗಿ ಬಿಂಬಿತವಾಗಿದೆ ಎಂದು ಸಿಜೆಐ ಸ್ಪಷ್ಟನೆ ನೀಡಿದರು. ತಾವು ದೇಶದ ಯುವಕರನ್ನು ಉದ್ದೇಶಿಸಿ ಆ ಮಾತು ಹೇಳಿಲ್ಲ, ಬದಲಿಗೆ ನಕಲಿ ಮತ್ತು ಬೋಗಸ್ ಪದವಿ ಪಡೆದು ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವವರ ಬಗ್ಗೆ ಮಾತನಾಡಿದ್ದಾಗಿ ತಿಳಿಸಿದರು. ಆದರೆ, ಅಷ್ಟರಲ್ಲಾಗಲೇ ಈ ಹೇಳಿಕೆ ಹರಿದಾಡಿ ಯುವಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ಕಾಕ್ರೋಚ್ ಜನತಾ ಪಾರ್ಟಿ ಬಗ್ಗೆ ಪ‍ರೋಕ್ಷವಾಗಿ ಕಿಡಿಕಾರಿದ ನಿರ್ಮಲಾ ಸೀತಾರಾಮನ್ಉತ್ತರ ಪ್ರದೇಶದಲ್ಲಿ ರಣ ಬಿಸಿಲು: 47 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು

'ಕಾಕ್ರೋಚ್' (ಜಿರಳೆ) ಸಂಕೇತದ ಹಿಂದಿರುವ ರಹಸ್ಯವೇನು?

ಅಭಿಜೀತ್ ದೀಪ್ಕೆ ಎಂಬುವವರು ಆನ್‌ಲೈನ್‌ನಲ್ಲಿ ಈ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಅಭಿಯಾನವನ್ನು ಹುಟ್ಟಿ ಹಾಕಿದರು. ಜಿರೆಳೆ ಎನ್ನುವುದು ಸಾಮಾನ್ಯವಾಗಿ ಯಾರೂ ಇಷ್ಟಪಡದ, ಆದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ತಡೆದುಕೊಂಡು ಬದುಕಬಲ್ಲ ಜೀವಿಯಾಗಿದೆ.

ತಮ್ಮನ್ನು ಜಿರೆಳೆಗಳಿಗೆ ಹೋಲಿಸಿದ್ದನ್ನೇ ಅಸ್ತ್ರವಾಗಿಸಿಕೊಂಡ ಯುವಕರು, ನಾವು ವ್ಯವಸ್ಥೆಯಿಂದ ನಿರ್ಲಕ್ಷಿಸಲ್ಪಟ್ಟ ತಲೆಮಾರು ಇರಬಹುದು. ಆದರೆ, ನಮ್ಮನ್ನು ಅಷ್ಟು ಸುಲಭವಾಗಿ ಅಳಿಸಿಹಾಕಲು ಅಥವಾ ನಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ತೋರಿಸಲು ಈ ಹೆಸರನ್ನು ಹೆಮ್ಮೆಯಿಂದ ಬಳಸಲಾರಂಭಿಸಿದರು. ಪರಿಣಾಮವಾಗಿ, ಸಿಜೆಪಿ ಇನ್‌ಸ್ಟಾಗ್ರಾಮ್ ಖಾತೆಯು ಕೆಲವೇ ದಿನಗಳಲ್ಲಿ 22 ದಶಲಕ್ಷಕ್ಕೂ (2.2 ಕೋಟಿ) ಹೆಚ್ಚು ಫಾಲೋವರ್ಸ್ ಪಡೆಯಿತು.

ಮತ್ತೆ ಶಾಲೆ ಶುರು; ಮಕ್ಕಳಲ್ಲಿ ಮೂಡಿಸಬೇಕು ಒಂದಷ್ಟು ಹುರುಪುVIDEO: ದೇಶಕ್ಕೆ ಕಾಕ್ರೋಚ್‌ಗಳ ಅಗತ್ಯವಿದೆ ಎಂದ ಯುವಜನ

ಯುವಜನರು ಇಷ್ಟೊಂದು ಬೆಂಬಲ ನೀಡುತ್ತಿರುವುದಕ್ಕೆ ಅಸಲಿ ಕಾರಣವೇನು?

ಇದು ಕೇವಲ ಒಂದು ಹೇಳಿಕೆಯ ವಿರುದ್ಧದ ಆಕ್ರೋಶವಲ್ಲ. ಇದರ ಹಿಂದೆ ದೇಶದ ಯುವ ಸಮೂಹದಲ್ಲಿ ಹಲವು ದಿನಗಳಿಂದ ಇದ್ದ ಅಸಮಾಧಾನವಿದೆ.

ನೀಟ್-ಯುಜಿ 2026 ಹಗರಣ: ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ದೇಶದಾದ್ಯಂತ ವಿದ್ಯಾರ್ಥಿಗಳನ್ನು ಕಂಗೆಡಿಸಿದೆ.

ವ್ಯವಸ್ಥೆಯ ಮೇಲಿನ ಅಪನಂಬಿಕೆ: ನಿರಂತರ ಪರೀಕ್ಷಾ ಹಗರಣಗಳು, ನೇಮಕಾತಿ ಪ್ರಕ್ರಿಯೆಗಳ ವಿಳಂಬ, ಭ್ರಷ್ಟಾಚಾರ ಮತ್ತು ಹೆಚ್ಚುತ್ತಿರುವ ನಿರುದ್ಯೋಗದಿಂದಾಗಿ ಯುವಕರು ಮಾನಸಿಕ ಒತ್ತಡ ಹಾಗೂ ಖಿನ್ನತೆಗೆ ಒಳಗಾಗಿದ್ದಾರೆ. ತಾವು ಪಡುವ ಶ್ರಮಕ್ಕೆ ಮೌಲ್ಯವಿಲ್ಲದಂತಾಗಿದೆ ಎಂಬ ಭಾವನೆ ಮೂಡಿದೆ.

ಸಿಜೆಪಿ ಕೈಗೊಂಡ ಮೊದಲ ಹೆಜ್ಜೆ: ನೀಟ್ ಹಗರಣದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸಿಜೆಪಿ ಆನ್‌ಲೈನ್ ಸಹಿ ಅಭಿಯಾನ ಆರಂಭಿಸಿತು. ಇದಕ್ಕೆ ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ಬೆಂಬಲ ಸೂಚಿಸಿದರು.

ಸುಂದರವಾಗಿ ಕಾಣಬೇಕೆಂಬ ಚೀನಿಯರ ಆಸೆಗೆ ಕತ್ತೆಗಳ ಜೀವಕ್ಕೆ ಬಂತು ಕುತ್ತು!ಮೇ 31 ರವರೆಗೆ ಕೊಡೈಕೆನಾಲ್‌ಗೆ ಉಚಿತ ಪ್ರವೇಶ; ಇವೆಲ್ಲಾ ಜಾಗಗಳನ್ನು ನೋಡಬಹುದು

ಸರ್ಕಾರದ ಕ್ರಮ- ಅಭಿಯಾನದ ಸದ್ಯದ ಸ್ಥಿತಿ

ಈ ಡಿಜಿಟಲ್ ಕ್ರಾಂತಿ ವೇಗ ‍ಪಡೆಯುತ್ತಿದ್ದಂತೆ ಸರ್ಕಾರದ ಗಮನ ಇದರತ್ತ ನೆಟ್ಟಿತು. ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು 'ಕಾಕ್ರೋಚ್ ಜನತಾ ಪಾರ್ಟಿ'ಯ ಎಕ್ಸ್ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ಸದಸ್ಯರಾಗಿ ನೊಂದಾಯಿಸಿಕೊಂಡಿದ್ದ ಸಿಜೆಪಿ ವೆಬ್‌ಸೈಟ್ ಕೂಡ ಸ್ಥಗಿತಗೊಂಡಿದೆ.

ತಮ್ಮ ವೈಯಕ್ತಿಕ ಮತ್ತು ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯೂ ಹ್ಯಾಕ್ ಆಗಿವೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' ಸಂಸ್ಥಾಪಕ ಅಭಿಜೀತ್ ದೀಪ್ಕೆ ಆರೋಪಿಸಿದ್ದಾರೆ. ಈ ನಡುವೆ ಯುವಕರಿಗೆ ಸಂದೇಶ ಸಾರಿರುವ ಅವರು 'ಜಿರೆಳೆಗಳು ಎಂದಿಗೂ ಸಾಯುವುದಿಲ್ಲ. ನಮ್ಮ ಭವಿಷ್ಯಕ್ಕಾಗಿ ನಾವು ಧ್ವನಿ ಎತ್ತುತ್ತಿರುವುದೇ ನಮ್ಮ ಅಪರಾಧವಾಗಿದೆ. ನಾವು ಹೊಸ ವೇದಿಕೆಯೊಂದಿಗೆ ಶೀಘ್ರದಲ್ಲೇ ಮರಳಲಿದ್ದೇವೆ' ಎಂದು ಹೇಳಿರುವುದಾಗಿ 'ಇಂಡಿಯಾ ಟುಡೇ' ವರದಿ ಮಾಡಿದೆ.

ಜಪಾನ್‌ನಲ್ಲಿ ನಡೆದ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ ಮೋಡಿಪಶ್ಚಿಮ ಬಂಗಾಳ: ಗೋಹತ್ಯೆ ತಡೆಗೆ ಮುಸ್ಲಿಮರ ಸಹಮತ, ಹಿಂದೂ ವ್ಯಾಪಾರಿಗಳಿಗೇಕೆ ಆತಂಕ?

ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾರಾ?

ಸದ್ಯಕ್ಕೆ ಯಾವುದೇ ರೀತಿಯ ತರಾತುರಿಯ ನಿರ್ಧಾರ ಅಥವಾ ರಸ್ತೆಗಿಳಿದು ಪ್ರತಿಭಟನೆ ನಡೆಸದಂತೆ ಸಿಜೆಪಿ ತನ್ನ ಬೆಂಬಲಿಗರಲ್ಲಿ ಮನವಿ ಮಾಡಿದೆ. ಇದು ಸುದೀರ್ಘ ಹೋರಾಟವಾಗಿದ್ದು, ಯಾವುದೇ ಆತುರದ ಹೆಜ್ಜೆಯಿಂದಾಗಿ ಅಧಿಕಾರಿಗಳು ಈ ಚಳವಳಿಗೆ 'ಅರಾಜಕತೆ'ಯ ಹಣೆಪಟ್ಟಿ ಕಟ್ಟಲು ಅವಕಾಶ ನೀಡಬಾರದು ಎಂದು ಎಚ್ಚರಿಸಿದೆ.

ಭಾರತದಲ್ಲಿ ಇಂಟರ್ನೆಟ್ ರಾಜಕೀಯ ಮತ್ತು ಡಿಜಿಟಲ್ ಪ್ರತಿಭಟನೆಗಳ ಸ್ವರೂಪ ಹೇಗೆ ಬದಲಾಗುತ್ತಿದೆ ಎಂಬುದಕ್ಕೆ 'ಕಾಕ್ರೋಚ್ ಜನತಾ ಪಾರ್ಟಿ' ಸ್ಪಷ್ಟ ಉದಾಹರಣೆ. ಮೀಮ್ಸ್ ಮತ್ತು ಹಾಸ್ಯದ ಮೂಲಕ ಆರಂಭವಾದ ಈ ಚಳವಳಿ, ಇಂದು ವ್ಯವಸ್ಥೆಯ ವಿರುದ್ಧ ಯುವಜನತೆ ಹೊಂದಿರುವ ನಿರಾಸೆ ಮತ್ತು ಆಕ್ರೋಶದ ಸಂಕೇತವಾಗಿ ಮಾರ್ಪಟ್ಟಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani