Dailyhunt Logo
  • Light mode
    Follow system
    Dark mode
    • Play Story
    • App Story
Explainer | ಉಗ್ರವಾದ: ತಾನೇ ಸಾಕಿದ ಹಾವಿಗೆ ಬಲಿಯಾಗುತ್ತಿದೆಯೇ ಪಾಕಿಸ್ತಾನ?

Explainer | ಉಗ್ರವಾದ: ತಾನೇ ಸಾಕಿದ ಹಾವಿಗೆ ಬಲಿಯಾಗುತ್ತಿದೆಯೇ ಪಾಕಿಸ್ತಾನ?

ಭಾರತ ಮತ್ತು ಅಫ್ಗಾನಿಸ್ತಾನದ ವಿರುದ್ಧ ಭಯೋತ್ಪಾದನೆಯನ್ನು ತನ್ನ ವಿದೇಶಾಂಗ ನೀತಿಯ ರಹಸ್ಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದ ಪಾಕಿಸ್ತಾನ, ಇಂದು ತಾನೇ ಸೃಷ್ಟಿಸಿದ ಭಸ್ಮಾಸುರನಿಗೆ ಬಲಿಯಾಗುತ್ತಿದೆ. ಪಾಕಿಸ್ತಾನದ ನೀತಿ ನಿರೂಪಕರು ಮತ್ತು ಸೇನೆ ಸೃಷ್ಟಿಸಿ, ತರಬೇತಿ ನೀಡಿ, ಧನಸಹಾಯ ಮಾಡಿದ ಉಗ್ರ ಸಂಘಟನೆಗಳು ಇಂದು ಆ ದೇಶದ ನಿಯಂತ್ರಣದಿಂದ ಜಾರಿವೆ .

ಇತ್ತೀಚೆಗೆ 'ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ' ಸಂಘಟನೆಯಿಂದ ವಿಭಜನೆಗೊಂಡ 'ಜಮಾತ್-ಉಲ್-ಅಹ್ರಾರ್' ಗುಂಪು, ಕರಾಚಿಯ ಭದ್ರತಾ ಪಡೆಗಳ (ರೇಂಜರ್ಸ್) ಪ್ರಾದೇಶಿಕ ಪ್ರಧಾನ ಕಚೇರಿಯ ಮೇಲೆ ಭೀಕರ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೇನೆಯು ಅಫ್ಗಾನಿಸ್ತಾನದ ಗಡಿ ಭಾಗಗಳಲ್ಲಿ ದಾಳಿ ನಡೆಸಿ ನಾಗರಿಕರು ಸೇರಿದಂತೆ 29 ಜನರನ್ನು ಕೊಂದಿದೆ.

ಉಗ್ರರ ತಾಣಗಳನ್ನು ಧ್ವಂಸಗೊಳಿಸುವವರೆಗೆ ಪಾಕ್‌ನೊಂದಿಗೆ ಸಂವಾದ ಬೇಡ: ಮನೀಶ್ ತಿವಾರಿಶಾಂತಿ ಮಾತುಕತೆ ವೇಳೆ ಅರಾಘ್ಚಿ, ಖಾಲೀಬಾಫ್ ಹತ್ಯೆಗೆ ಇಸ್ರೇಲ್ ಸಂಚು: ಅಮೆರಿಕ ಶಂಕೆ

ಪಾಕಿಸ್ತಾನ ಈ ಬಿಕ್ಕಟ್ಟಿಗೆ ಸಿಲುಕಲು ಮುಖ್ಯ ಕಾರಣಗಳೇನು?

'ವ್ಯೂಹಾತ್ಮಕ' ಭ್ರಮೆ: ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ಸಂಸ್ಥೆಗಳು ಭಾರತ ಮತ್ತು ಅಫ್ಗಾನಿಸ್ತಾನವನ್ನು ಅಸ್ಥಿರಗೊಳಿಸಲು ಕೆಲವು ಜಿಹಾದಿ ಗುಂಪುಗಳನ್ನು ತಮ್ಮ ಆಸ್ತಿಯಂತೆ ಬಳಸಿಕೊಂಡವು. ಈ ಪ್ರಕ್ರಿಯೆಯಲ್ಲಿ ಉಗ್ರರಿಗೆ ಮುಕ್ತವಾಗಿ ಬೆಳೆಯಲು ಜಾಗ ನೀಡಿ, ಜಾಲವನ್ನು ವಿಸ್ತರಿಸಿಕೊಳ್ಳಲು ವ್ಯವಸ್ಥೆಯೇ ನೆರವಾಯಿತು.

ನಿಯಂತ್ರಣ ತಪ್ಪಿದ ಉಗ್ರ ಸಂಘಟನೆಗಳು: ಕಾಲಕ್ರಮೇಣ ಈ ಉಗ್ರ ಗುಂಪುಗಳು ಹೆಚ್ಚು ಮಹತ್ವಾಕಾಂಕ್ಷೆಯುಳ್ಳವುಗಳಾದವು. ತಮ್ಮನ್ನು ಬೆಳೆಸಿದ ಸರ್ಕಾರದ ಮೇಲೆಯೇ ಭ್ರಮನಿರಸನಗೊಂಡು, ಪಾಕಿಸ್ತಾನದ ಸಾರ್ವಭೌಮತ್ವಕ್ಕೆ ಸವಾಲು ಹಾಕಲು ಆರಂಭಿಸಿದವು.

ಪ್ರಜಾಪ್ರಭುತ್ವ ವಿರೋಧಿ ನಿಲುವು: ಇದರಲ್ಲಿ ಅತ್ಯಂತ ದೊಡ್ಡ ಸವಾಲಾಗಿ ಪರಿಣಮಿಸಿದ್ದು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ. ಈ ಸಂಘಟನೆಯು ಪಾಕಿಸ್ತಾನದ ಪ್ರಸ್ತುತ ಸಂವಿಧಾನ, ಕಾನೂನು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಅದರ ಜಾಗದಲ್ಲಿ 'ಶರಿಯಾ' ಆಧಾರಿತ ಆಡಳಿತ ತರಲು ಬಯಸಿದೆ.

ಭಾರತದ ಪಾಸ್‌ಪೋರ್ಟ್‌ ರ‍್ಯಾಂಕಿಂಗ್ ಕುಸಿತ: ಆದರೂ 56 ದೇಶಗಳಿಗೆ ಮುಕ್ತ ಪ್ರವೇಶವೆನೆಜುವೆಲಾ ಭೂಕಂಪ: ನನ್ನ ಹೆಂಡತಿಗೆ ಹೇಳಬೇಡಿ... ಕಣ್ಣೀರಾಗಿಸಿದ ಮಾತು

ಉಗ್ರವಾದದ ಮರುಹುಟ್ಟಿಗೆ ಸಿಕ್ಕ ಪೂರಕ ವಾತಾವರಣ

2021ರ ಆಗಸ್ಟ್‌ನಲ್ಲಿ ಅಫ್ಗಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ, ಪಾಕಿಸ್ತಾನದ 'ತೆಹ್ರೀಕ್-ಎ-ತಾಲಿಬಾನ್' ಪಾಕಿಸ್ತಾನ ಉಗ್ರರಿಗೆ ಹೊಸ ಶಕ್ತಿ ಬಂದಂತಾಗಿದೆ. ಅವರು ಇತರ ಸಣ್ಣಪುಟ್ಟ ಗುಂಪುಗಳೊಂದಿಗೆ ಮೈತ್ರಿ ಮಾಡಿಕೊಂಡು ಪಾಕಿಸ್ತಾನ ಸರ್ಕಾರದ ಮೇಲಿನ ದಾಳಿಯನ್ನು ತೀವ್ರಗೊಳಿಸಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಬಡತನ ಮತ್ತು ತೀವ್ರ ನಿರುದ್ಯೋಗದ ಸಮಸ್ಯೆಯನ್ನು ಉಗ್ರರು ತಮ್ಮ ಸಂಘಟನೆಗೆ ಯುವಕರನ್ನು ನೇಮಕ ಮಾಡಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ.

ಪಾಕಿಸ್ತಾನದ ಹಿಂದುಳಿದ ಮತ್ತು ನಿರ್ಲಕ್ಷಿತ ಗಡಿ ಪ್ರದೇಶಗಳ ಜನರ ಆಕ್ರೋಶವನ್ನು ಉಗ್ರರು ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ.

ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ 2,640 ಕಿಲೋಮೀಟರ್ ಉದ್ದದ 'ಡ್ಯುರಾಂಡ್ ರೇಖೆ' ದುರ್ಗಮ ಬೆಟ್ಟಗುಡ್ಡಗಳಿಂದ ಕೂಡಿದೆ. ಇಲ್ಲಿ ಸರ್ಕಾರದ ನಿಯಂತ್ರಣ ತುಂಬಾ ಕಡಿಮೆ ಇರುವುದರಿಂದ, ಪಾಕ್ ಸೇನೆ ಎಷ್ಟು ಕಾರ್ಯಾಚರಣೆ ನಡೆಸಿದರೂ ಉಗ್ರರು ಸುಲಭವಾಗಿ ಅಡಗಿ ಕುಳಿತು ಮರುಸಂಘಟನೆಗೊಳ್ಳುತ್ತಿದ್ದಾರೆ.

ಕಲ್ಯಾಣ್ ಕುಮಾರ್‌ನಿಂದ ಪವನ್ ಕಲ್ಯಾಣ್.. ಆಂಧ್ರ DCM ಹೆಸರಿನ ಹಿಂದಿದೆ ರೋಚಕ ಕಥೆGold And Silver Price: ಮತ್ತೆ ಏರಿಕೆ ಕಂಡ ಚಿನ್ನ, ಬೆಳ್ಳಿ ದರ

ಪಾಕಿಸ್ತಾನವನ್ನು ಕಾಡುತ್ತಿರುವ ಪ್ರಮುಖ ಉಗ್ರ ಸಂಘಟನೆಗಳು

ಪ್ರಸ್ತುತ ಪಾಕಿಸ್ತಾನದಲ್ಲಿ ಎರಡು ವಿಭಿನ್ನ ಸದ್ಧಾಂತಿಕ ಹಿನ್ನೆಲೆಯ ಉಗ್ರ ಸಂಘಟನೆಗಳು ಸಕ್ರಿಯವಾಗಿವೆ.

*ಇಸ್ಲಾಮಿಕ್ ಮತ್ತು ಮೂಲಭೂತವಾದಿ ಸಂಘಟನೆ: ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ, ಲಷ್ಕರ್-ಎ-ಝಾಂಗ್ವಿ, ಸಿಪಾಹ-ಎ-ಸಹಾಬಾ, ಅಹ್ಲೆ ಸುನ್ನತ್ ವಲ್ ಜಮಾತ್.

ಈ ಸಂಘಟನೆಗಳ ಪ್ರಮುಖ ಉದ್ದೇಶ, ಪ್ರಜಾಪ್ರಭುತ್ವವನ್ನು ಕಿತ್ತೊಗೆದು ಇಸ್ಲಾಮಿಕ್ ಶರಿಯಾ ಕಾನೂನು ಜಾರಿ ಮಾಡುವುದು.

*ಬಲೂಚ್ ಪ್ರತ್ಯೇಕತಾವಾದಿ ಗುಂಪುಗಳು: ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (ಬಿಎಲ್‌ಎ - ಮಜೀದ್ ಬ್ರಿಗೇಡ್ ಸೇರಿ), ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ , ಬಲೂಚ್ ರಿಪಬ್ಲಿಕನ್ ಗಾರ್ಡ್ಸ್ , ಸಿಂಧೂದೇಶ್ ರೆವಲ್ಯೂಷನರಿ ಆರ್ಮಿ.

ಇವುಗಳ ಪ್ರಮುಖ ಉದ್ದೇಶ, ಪಾಕಿಸ್ತಾನದಿಂದ ಬಲೂಚಿಸ್ತಾನ್ ಪ್ರಾಂತ್ಯವನ್ನು ಮುಕ್ತಗೊಳಿಸಿ ಪ್ರತ್ಯೇಕ ದೇಶ ಮಾಡುವುದು.

ಯಾವ ಉಗ್ರವಾದವನ್ನು ಪಾಕಿಸ್ತಾನ ತನ್ನ ನೆರೆಹೊರೆಯ ದೇಶಗಳ ವಿರುದ್ಧ ಅಸ್ತ್ರವಾಗಿ ಬಳಸಿತ್ತೋ, ಇಂದು ಅದೇ ಉಗ್ರವಾದ ಆ ದೇಶದ ನೂರಾರು ಸೈನಿಕರು, ಪೊಲೀಸರು ಮತ್ತು ಅಮಾಯಕ ನಾಗರಿಕರ ಜೀವ ಬಲಿಪಡೆಯುತ್ತಿದೆ. ಇಸ್ಲಾಂ ಹೆಸರಿನಲ್ಲಿ ಸೃಷ್ಟಿಯಾದ ದೇಶವೊಂದು ಇಂದು ಅದೇ ಇಸ್ಲಾಂ ಹೆಸರಿನಲ್ಲಿ ಹುಟ್ಟಿಕೊಂಡ ಉಗ್ರರಿಂದ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ.

ಆಧಾರ: ಡಿಎನ್‌ಎ ವೆಬ್‌ಸೈಟ್

Dailyhunt
Disclaimer: This content has not been generated, created or edited by Dailyhunt. Publisher: Prajavani