ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಫಿಫಾ ವಿಶ್ವಕಪ್: ಗುಂಪು ಹಂತದ ಅಂತಿಮ ಪಂದ್ಯಗಳು ಏಕಕಾಲಕ್ಕೆ ನಡೆಯುತ್ತವೆ ಏಕೆ?
ಒಂದು ಸಾಲಿನಲ್ಲಿಫಿಫಾ ವಿಶ್ವಕಪ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ತಡೆಗಟ್ಟಲು ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಗುಂಪು ಹಂತದ ಅಂತಿಮ ಪಂದ್ಯಗಳನ್ನು ಏಕಕಾಲಕ್ಕೆ ನಡೆಸಲಾಗುತ್ತದೆ.
ಪ್ರಮುಖ ಪ್ರಶ್ನೋತ್ತರ
ಫಿಫಾ ಗುಂಪು ಹಂತದ ಅಂತಿಮ ಪಂದ್ಯಗಳನ್ನು ಏಕಕಾಲಕ್ಕೆ ಏಕೆ ನಡೆಸುತ್ತದೆ?
ಪಂದ್ಯದ ಫಲಿತಾಂಶಗಳ ಮೇಲೆ ಪ್ರಭಾವ ಬೀರುವುದನ್ನು ಮತ್ತು ಮ್ಯಾಚ್ ಫಿಕ್ಸಿಂಗ್ ಅನ್ನು ತಡೆಯಲು ತಂಡಗಳ ಕೊನೆಯ ಲೀಗ್ ಪಂದ್ಯಗಳನ್ನು ಏಕಕಾಲದಲ್ಲಿ ನಡೆಸಲಾಗುತ್ತದೆ.
ಡಿಸ್‌ಗ್ರೇಸ್ ಆಫ್ ಗಿಜಾನ್ ಎಂದರೇನು?
1982ರ ಫಿಫಾ ವಿಶ್ವಕಪ್‌ನಲ್ಲಿ ಪಶ್ಚಿಮ ಜರ್ಮನಿ ಮತ್ತು ಆಸ್ಟ್ರಿಯಾ ತಂಡಗಳು ಅಲ್ಜೀರಿಯಾವನ್ನು ಹೊರಹಾಕಲು ಪಂದ್ಯದ ಫಲಿತಾಂಶವನ್ನು ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದ ವಿವಾದಾತ್ಮಕ ಘಟನೆಯೇ ಇದು.
1982ರ ವಿಶ್ವಕಪ್ ವಿವಾದವು ಫಿಫಾ ನಿಯಮಗಳಲ್ಲಿ ಬದಲಾವಣೆ ತಂದಿತೇ?
ಹೌದು, ಅಂದು ನಡೆದ ಘಟನೆಯಿಂದ ಎಚ್ಚೆತ್ತ ಫಿಫಾ, ಮತ್ತೆ ಅಂತಹ ಘಟನೆ ಸಂಭವಿಸದಂತೆ ತಡೆಯಲು ಅಂತಿಮ ಪಂದ್ಯಗಳನ್ನು ಒಂದೇ ಸಮಯದಲ್ಲಿ ಆಯೋಜಿಸುವ ಕಡ್ಡಾಯ ನಿಯಮ ಜಾರಿಗೆ ತಂದಿತು.
ಪಂದ್ಯಗಳನ್ನು ಏಕಕಾಲದಲ್ಲಿ ನೋಡುವುದು ಏಕೆ ಕಷ್ಟಕರ?
ಒಂದೇ ಸಮಯದಲ್ಲಿ ಎರಡು ಪ್ರಮುಖ ಪಂದ್ಯಗಳು ನಡೆಯುವುದರಿಂದ ಪ್ರೇಕ್ಷಕರು ಎರಡನ್ನೂ ಏಕಕಾಲದಲ್ಲಿ ನೋಡಬೇಕಾದ ಅನಿವಾರ್ಯತೆ ಎದುರಾಗುತ್ತದೆ, ಇದು ಅಭಿಮಾನಿಗಳಿಗೆ ಗೊಂದಲಕ್ಕೀಡಾಗಿದೆ.
ಪ್ರಮುಖ ಅಂಕಿಅಂಶಗಳು
241982ರ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ತಂಡಗಳ ಸಂಖ್ಯೆ1982ವಿವಾದ ಸೃಷ್ಟಿಸಿದ ಪಶ್ಚಿಮ ಜರ್ಮನಿ ಮತ್ತು ಆಸ್ಟ್ರಿಯಾ ಪಂದ್ಯ ನಡೆದ ವರ್ಷ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಬೆಂಗಳೂರು: 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪ್ರತಿ ಗುಂಪಿನ ಅಂತಿಮ ಪಂದ್ಯಗಳು ಏಕಕಾಲಕ್ಕೆ ನಡೆಯುತ್ತಿವೆ. ಇದು ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದ್ದು, ಏಕಕಾಲದಲ್ಲಿ ಎರಡೆರಡು ಪಂದ್ಯಗಳನ್ನು ನೋಡಬೇಕಾದ ಕ್ಲಿಷ್ಟಕರ ಪರಿಸ್ಥಿತಿ ಎದುರಾಗಿದೆ.
ಆದರೆ ಫಿಫಾ, ಎಲ್ಲ ಗುಂಪಿನ ಅಂತಿಮ ಪಂದ್ಯಗಳನ್ನು ಏಕಕಾಲಕ್ಕೆ ಆಯೋಜಿಸಲು ಬಲವಾದ ಕಾರಣವೊಂದಿದೆ. ಅದನ್ನು ತಿಳಿಯಲು ನೀವು ಇಟಲಿ ಜಯ ಗಳಿಸಿದ್ದ 1982ರ ಫಿಫಾ ವಿಶ್ವಕಪ್‌ನ ಇತಿಹಾಸಕ್ಕೆ ಹಿಂತಿರುಗಬೇಕಾಗುತ್ತದೆ.
ಕಣಕ್ಕಿಳಿದ ನೇಮರ್, ವಿನಿಷಿಯಸ್ ಕಾಲ್ಚಳಕ: ಸ್ಕಾಟ್ಲೆಂಡ್ ಮಣಿಸಿದ ಬ್ರೆಜಿಲ್FIFA World Cup: ಸ್ವಿಟ್ಜರ್ಲೆಂಡ್, ಕೆನಡಾ, ಮೊರಕ್ಕೊ, ಬೊಸ್ನಿಯಾ ನಾಕೌಟ್‌ಗೆ1982ರ ಟೂರ್ನಿಯಲ್ಲಿ ಮೊದಲ ಬಾರಿಗೆ 24 ತಂಡಗಳು ಭಾಗವಹಿಸಿದ್ದವು. ಅವುಗಳನ್ನು ತಲಾ ನಾಲ್ಕು ತಂಡಗಳಂತೆ ಆರು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆಯುತ್ತಿದ್ದವು. ಗ್ರೂಪ್ ಎರಡರಲ್ಲಿ ಆಗಿನ ಪಶ್ಚಿಮ ಜರ್ಮನಿ (ಈಗಿನ ಜರ್ಮನಿ), ಆಸ್ಟ್ರಿಯಾ, ಅಲ್ಜೀರಿಯಾ ಮತ್ತು ಚಿಲಿ ತಂಡಗಳಿದ್ದವು.
ಅಲ್ಜೀರಿಯಾ ತಂಡವು ಪಶ್ಚಿಮ ಜರ್ಮನಿಯನ್ನು 2-1 ರಿಂದ ಸೋಲಿಸುವ ಮೂಲಕ ತನ್ನ ಗುಂಪು ಹಂತದ ಆಟವನ್ನು ಅದ್ಭುತವಾಗಿ ಆರಂಭಿಸಿತು. ಆದರೆ ಆಸ್ಟ್ರಿಯಾ ವಿರುದ್ಧ 0-2 ರಿಂದ ಸೋಲನ್ನನುಭವಿಸಿತು. ನಂತರ ಜೂನ್ 24 ರಂದು ನಡೆದ ತನ್ನ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಚಿಲಿ ವಿರುದ್ಧ 3-2 ರಿಂದ ಗೆದ್ದು ಭರ್ಜರಿ ಪುನರಾಗಮನ ಮಾಡಿತ್ತು.
ಜೂನ್ 25 ರಂದು ಪಶ್ಚಿಮ ಜರ್ಮನಿ ಮತ್ತು ಆಸ್ಟ್ರಿಯಾ ನಡುವೆ ನಡೆಯಬೇಕಿದ್ದ ಪಂದ್ಯದೊಂದಿಗೆ ಈ ಗುಂಪಿನ ಆಟ ಮುಕ್ತಾಯಗೊಳ್ಳಬೇಕಿತ್ತು. ಆ ಪಂದ್ಯಕ್ಕೂ ಮುನ್ನ ಪಶ್ಚಿಮ ಜರ್ಮನಿ ಒಂದು ಗೆಲುವು ಮತ್ತು ಒಂದು ಸೋಲಿನೊಂದಿಗೆ ಎರಡು ಅಂಕಗಳನ್ನು ಪಡೆದಿತ್ತು. ಇತ್ತ ಆಸ್ಟ್ರಿಯಾ ತನ್ನ ಎರಡೂ ಪಂದ್ಯಗಳನ್ನು ಗೆದ್ದು ನಾಲ್ಕು ಅಂಕಗಳನ್ನು ಗಳಿಸಿತ್ತು. ಮತ್ತೊಂದೆಡೆ, ಅಲ್ಜೀರಿಯಾ ತನ್ನ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು ನಾಲ್ಕು ಅಂಕಗಳನ್ನು ಹೊಂದಿತ್ತು.
ಅಂಕಗಳ ಲೆಕ್ಕಾಚಾರದಲ್ಲಿ ಅಲ್ಜೀರಿಯಾ ಮತ್ತು ಆಸ್ಟ್ರಿಯಾ ಎರಡೂ ತಂಡಗಳು ಮುನ್ನಡೆಯಲ್ಲಿದ್ದವು. ಇತ್ತಂಡಗಳೂ ಮುಂದಿನ ಹಂತಕ್ಕೆ ತೇರ್ಗಡೆಯಾಗುವ ನೆಚ್ಚಿನ ತಂಡಗಳಾಗಿತ್ತು. ಅಲ್ಲದೆ ಅಂತಿಮ ಪಂದ್ಯದಲ್ಲಿ ಪಶ್ಚಿಮ ಜರ್ಮನಿಯು ಸೋತರೆ ಅಥವಾ ಡ್ರಾ ಆದರೆ ಟೂರ್ನಿಯಿಂದ ಹೊರಬೀಳುತ್ತಿತ್ತು.
ಯುರೋಪಿನ ಉಭಯ ತಂಡಗಳಾದ ಆಸ್ಟ್ರಿಯಾ (3 ಗೋಲುಗಳ ವ್ಯತ್ಯಾಸ, ಅಂದರೆ ಮೂರು ಗೋಲು ಗಳಿಸಿ ಯಾವುದೇ ಗೋಲು ಬಿಟ್ಟುಕೊಟ್ಟಿರಲಿಲ್ಲ) ಮತ್ತು ಪಶ್ಚಿಮ ಜರ್ಮನಿ (2 ಗೋಲುಗಳ ವ್ಯತ್ಯಾಸ, ಅಂದರೆ ಐದು ಗೋಲು ಗಳಿಸಿ ಮೂರು ಗೋಲು ಬಿಟ್ಟುಕೊಟ್ಟಿತ್ತು) ಕಣಕ್ಕಿಳಿದಿದ್ದವು.
ಒಂದು ವೇಳೆ ಪಶ್ಚಿಮ ಜರ್ಮನಿಯು 1-0 ಅಂತರದಿಂದ ಗೆದ್ದರೆ ಪಶ್ಚಿಮ ಜರ್ಮನಿ ಹಾಗೂ ಆಸ್ಟ್ರಿಯಾ ಮುಂದಿನ ಹಂತಕ್ಕೆ ಪ್ರವೇಶಿಸುತ್ತಿತ್ತು. ಯಾಕೆಂದರೆ ಅಲ್ಜೀರಿಯಾ ಗೋಲುಗಳ ವ್ಯತ್ಯಾಸ ಶೂನ್ಯವಾಗಿತ್ತು. ಪಂದ್ಯಕ್ಕೂ ಮುನ್ನವೇ ಈ ಎಲ್ಲ ಲೆಕ್ಕಾಚಾರಗಳ ಬಗ್ಗೆ ಉಭಯ ತಂಡಗಳಿಗೂ ತಿಳಿದಿತ್ತು.
ಪಂದ್ಯದ 10ನೇ ನಿಮಿಷದಲ್ಲೇ ಪಶ್ಚಿಮ ಜರ್ಮನಿಯ ಹಾರ್ಸ್ಟ್ ಹ್ರುಬೆಷ್ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ಆ ಗೋಲಿನ ನಂತರ, ಎರಡೂ ತಂಡಗಳು ಪಂದ್ಯದ ವೇಗವನ್ನು ತಗ್ಗಿಸಿದವು ಮತ್ತು ಗೋಲು ಗಳಿಸುವ ಯಾವುದೇ ಆಸಕ್ತಿಯನ್ನು ತೋರಿಸಲಿಲ್ಲ. ಇದರಿಂದಾಗಿ ಗೋಲುಗಳ ವ್ಯತ್ಯಾಸದ ಆಧಾರದ ಮೇಲೆ ಅಲ್ಜೀರಿಯಾ ಟೂರ್ನಿಯಿಂದ ಹೊರಬೀಳುವಂತಾಯಿತು.
ಪಂದ್ಯ ಮುಕ್ತಾಯಗೊಂಡಾಗ ಪಶ್ಚಿಮ ಜರ್ಮನಿ (+3 ಗೋಲುಗಳ ವ್ಯತ್ಯಾಸ, ಆರು ಗೋಲು ಗಳಿಸಿ ಮೂರು ಬಿಟ್ಟುಕೊಟ್ಟಿತ್ತು) ಮತ್ತು ಆಸ್ಟ್ರಿಯಾ (+2 ಗೋಲುಗಳ ವ್ಯತ್ಯಾಸ, ನಾಲ್ಕು ಗೋಲು ಗಳಿಸಿ ಎರಡು ಬಿಟ್ಟುಕೊಟ್ಟಿತ್ತು) ಮುಂದಿನ ಸುತ್ತಿಗೆ ಅರ್ಹತೆ ಪಡೆದವು. ಪಶ್ಚಿಮ ಜರ್ಮನಿ, ಆಸ್ಟ್ರಿಯಾ ಮತ್ತು ಅಲ್ಜೀರಿಯಾ ಮೂರೂ ತಂಡಗಳು ತಲಾ ನಾಲ್ಕು ಅಂಕಗಳನ್ನು ಹೊಂದಿದ್ದರೂ, ಉತ್ತಮ ಗೋಲು ವ್ಯತ್ಯಾಸದ ಕಾರಣ ಮೊದಲ ಎರಡು ತಂಡಗಳಿಗೆ ಲಾಭವಾಯಿತು.
ಪಂದ್ಯ ಮುಗಿದ ನಂತರ, ಆಸ್ಟ್ರಿಯಾ ಮತ್ತು ಪಶ್ಚಿಮ ಜರ್ಮನಿ ಎರಡೂ ತಂಡಗಳು ತಾವಿಬ್ಬರೂ ಎರಡನೇ ಸುತ್ತಿಗೆ ತಲುಪಲು ಪಂದ್ಯದ ಫಲಿತಾಂಶವನ್ನು ಮೊದಲೇ ಫಿಕ್ಸ್ (ಮ್ಯಾಚ್ ಫಿಕ್ಸಿಂಗ್) ಮಾಡಿಕೊಂಡಿದ್ದವು ಎಂಬ ಆರೋಪ ಎದುರಿಸಿದವು.
ಮುಂದಿನ ದಿನಗಳಲ್ಲಿ, ಸ್ಪೇನ್‌ನ ಗಿಜಾನ್‌ನಲ್ಲಿ ನಡೆದ ಈ ಪಂದ್ಯವನ್ನು ಇತಿಹಾಸದಲ್ಲಿ 'ಡಿಸ್‌ಗ್ರೇಸ್ ಆಫ್ ಗಿಜಾನ್' ಎಂದು ಕರೆಯಲಾಯಿತು. ಈ ವಿವಾದಾತ್ಮಕ ಪಂದ್ಯದ ನಂತರವೇ ಫಿಫಾ ಪಂದ್ಯಗಳ ವೇಳಾಪಟ್ಟಿಗೆ ಸಂಬಂಧಿಸಿದ ನಿಯಮಗಳನ್ನು ಪರಿಷ್ಕರಿಸಿತು. ಮತ್ತೊಮ್ಮೆ ಎಲ್ಲಿಯೂ ಇಂತಹ ಘಟನೆ ಮರುಕಳಿಸದಂತೆ ತಡೆಯಲು, ಪ್ರತಿ ಗುಂಪಿನ ಕೊನೆಯ ಲೀಗ್ ಹಂತದ ಪಂದ್ಯಗಳನ್ನು ಕಡ್ಡಾಯವಾಗಿ ಏಕಕಾಲದಲ್ಲಿ (ಒಂದೇ ಸಮಯದಲ್ಲಿ) ನಡೆಸುವ ನಿಯಮವನ್ನು ಜಾರಿಗೆ ತಂದಿತು.
(ಆಧಾರ: ಎಎನ್‌ಐ, ಇತರೆ ಮೂಲಗಳು)
ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಸಾಧಕರು: ಮೆಸ್ಸಿ ಸನಿಹಕ್ಕೆ ಎಂಬಾಪೆಮೆಸ್ಸಿ ವಿಶ್ವದಾಖಲೆಯ ಗೋಲು; ನಾಕೌಟ್‌ಗೆ ಲಗ್ಗೆ ಇಟ್ಟ ಅರ್ಜೆಂಟೀನಾ
