Dailyhunt Logo
  • Light mode
    Follow system
    Dark mode
    • Play Story
    • App Story
ಹೊರ್ಮುಜ್ ವಿಚಾರದಲ್ಲಿ ಟ್ರಂಪ್ ಯೂ-ಟರ್ನ್: ಮತ್ತೆ ಆತಂಕದಲ್ಲಿ ಜಾಗತಿಕ ಉದ್ಯಮ

ಹೊರ್ಮುಜ್ ವಿಚಾರದಲ್ಲಿ ಟ್ರಂಪ್ ಯೂ-ಟರ್ನ್: ಮತ್ತೆ ಆತಂಕದಲ್ಲಿ ಜಾಗತಿಕ ಉದ್ಯಮ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಹೊರ್ಮುಜ್ ವಿಚಾರದಲ್ಲಿ ಟ್ರಂಪ್ ಯೂ-ಟರ್ನ್: ಮತ್ತೆ ಆತಂಕದಲ್ಲಿ ಜಾಗತಿಕ ಉದ್ಯಮ

ಒಂದು ಸಾಲಿನಲ್ಲಿಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ಶುಲ್ಕ ವಿಧಿಸುವ ನಿರ್ಧಾರವನ್ನು ಟ್ರಂಪ್ ಹಿಂಪಡೆದಿದ್ದು, ಈ ಅನಿಶ್ಚಿತತೆಯು ಜಾಗತಿಕ ವ್ಯಾಪಾರ ಮತ್ತು ಇಂಧನ ಸರಬರಾಜಿನ ಮೇಲೆ ಆತಂಕ ಮೂಡಿಸಿದೆ.

ಪ್ರಮುಖ ಪ್ರಶ್ನೋತ್ತರ


ಹೊರ್ಮುಜ್ ಜಲಸಂಧಿಯಲ್ಲಿನ ಶುಲ್ಕದ ಬಗ್ಗೆ ಟ್ರಂಪ್ ಅವರ ನಿಲುವೇನು?

ಮೊದಲು ಅಮೆರಿಕ ಸೇನಾ ರಕ್ಷಣೆಗೆ ಪ್ರತಿಯಾಗಿ ಹಡಗುಗಳಿಗೆ ಶೇ 20ರಷ್ಟು ಶುಲ್ಕ ವಿಧಿಸುವುದಾಗಿ ಹೇಳಿದ್ದ ಟ್ರಂಪ್, ಆ ನಂತರ ಅಮೆರಿಕದಲ್ಲಿ ಹೂಡಿಕೆ ಮಾಡುವ ದೇಶಗಳಿಗೆ ಮುಕ್ತ ಸಂಚಾರ ಕಲ್ಪಿಸುವುದಾಗಿ ಹೇಳಿ ನಿರ್ಧಾರ ಬದಲಿಸಿದರು.


ಈ ಅನಿಶ್ಚಿತ ನಿರ್ಧಾರಗಳಿಂದ ಹಡಗು ಕಂಪನಿಗಳಿಗೆ ಆಗುವ ತೊಂದರೆಗಳೇನು?

ಪದೇ ಪದೇ ಬದಲಾಗುತ್ತಿರುವ ಅಮೆರಿಕದ ನೀತಿಗಳಿಂದ ಅಂತರರಾಷ್ಟ್ರೀಯ ವ್ಯಾಪಾರದ ಯೋಜನೆ ಸಿದ್ಧಪಡಿಸಲು ತೊಡಕಾಗುತ್ತಿದೆ, ಇದರಿಂದಾಗಿ ಹಲವು ಕಂಪನಿಗಳು ಪರ್ಷಿಯನ್ ಕೊಲ್ಲಿಗೆ ಹಡಗುಗಳನ್ನು ಕಳುಹಿಸಲು ಹಿಂಜರಿಯುತ್ತಿವೆ.


ಹೊರ್ಮುಜ್ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ?

ಸಮುದ್ರ ಮಾರ್ಗದ ಸಂಚಾರವನ್ನು ನಿರ್ಬಂಧಿಸಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಡಗು ಸಾಗಣೆ ವೆಚ್ಚ ಏರಿಕೆಯಾಗಿ, ಇಂಧನ ದರ ಮತ್ತು ಅಗತ್ಯ ವಸ್ತುಗಳ ಮೇಲೆ ಹಣದುಬ್ಬರದ ಪರಿಣಾಮ ಬೀರಲಿದೆ.


ಅಂತರರಾಷ್ಟ್ರೀಯ ನಿಯಮಗಳು ಮತ್ತು ಇರಾನ್‌ನ ನಿಲುವೇನು?

ಅಂತರರಾಷ್ಟ್ರೀಯ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ಶುಲ್ಕ ವಿಧಿಸಲು ಕಾನೂನುಬದ್ಧ ಅವಕಾಶವಿಲ್ಲ ಎಂದು ವಿಶ್ವಸಂಸ್ಥೆಯ ಐಎಂಒ ತಿಳಿಸಿದ್ದು, ಇರಾನ್ ಟ್ರಂಪ್ ಅವರ ಶುಲ್ಕದ ಪ್ರಸ್ತಾಪವನ್ನು ದುಬಾರಿ ಎಂದು ಟೀಕಿಸಿದೆ.


ಸಂಘರ್ಷದಿಂದಾಗಿ ಹಡಗು ಸಂಚಾರದಲ್ಲಿ ಆಗಿರುವ ಕುಸಿತವೇನು?

ಹೊರ್ಮುಜ್‌ನಲ್ಲಿನ ದಾಳಿಗಳು ಮತ್ತು ಸಂಘರ್ಷದ ಕಾರಣದಿಂದ ದಿನಕ್ಕೆ 130 ಹಡಗುಗಳಿದ್ದ ಸಂಚಾರ ಸರಾಸರಿ ಕೇವಲ 10ಕ್ಕೆ ಕುಸಿದಿದ್ದು, ಇರಾನ್ ಈ ಪ್ರದೇಶವನ್ನು ತನ್ನ ಪ್ರಭಾವಿ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ.

ಪ್ರಮುಖ ಅಂಕಿಅಂಶಗಳು

ಶೇ 20ಪ್ರಸ್ತಾಪಿತ ಹಡಗು ಸಂಚಾರ ಶುಲ್ಕ130ಸಂಘರ್ಷದ ಮೊದಲು ದಿನಕ್ಕೆ ಸಂಚರಿಸುತ್ತಿದ್ದ ಸರಾಸರಿ ಹಡಗುಗಳು10ಸಂಘರ್ಷದ ಬಳಿಕ ದಿನಕ್ಕೆ ಸಂಚರಿಸುತ್ತಿರುವ ಹಡಗುಗಳ ಸಂಖ್ಯೆಜುಲೈ 13ನಿರ್ಧಾರದ ಘೋಷಣೆಯ ದಿನಾಂಕ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಹೊರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳ ಮೇಲೆ ಶೇ 20ರಷ್ಟು ಶುಲ್ಕ ವಿಧಿಸುವುದಾಗಿ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದೇ ದಿನದಲ್ಲಿ ತಮ್ಮ ನಿಲುವು ಬದಲಿಸಿದ್ದಾರೆ. ಹಡಗುಗಳಿಗೆ ನೀಡುವ ರಕ್ಷಣೆಗೆ ಬದಲಾಗಿ ಈ ಶುಲ್ಕ ವಿಧಿಸಲಾಗುತ್ತದೆ ಎಂದು ಅವರು ಹೇಳಿದ್ದರು.

ಆದರೆ ಈಗ, ಅಮೆರಿಕದಲ್ಲಿ ಹೂಡಿಕೆ ಮಾಡುವ ಕೊಲ್ಲಿ ರಾಷ್ಟ್ರಗಳಿಗೆ ಹೊರ್ಮುಜ್‌ನಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ.

ಹೊರ್ಮುಜ್ ಮೂಲಕ ಸಾಗುವ ಸರಕು ಸಾಗಣೆ ಹಡಗುಗಳಿಗೆ ಶುಲ್ಕ: ನಿರ್ಧಾರ ಹಿಂಪಡೆದ ಟ್ರಂಪ್

ಅಮೆರಿಕ ಅಧ್ಯಕ್ಷರ ಹಠಾತ್ ನಿರ್ಧಾರ ಬದಲಾವಣೆಯು ಹಲವು ರಾಷ್ಟ್ರಗಳಲ್ಲಿ, ಹಡಗು ಕಂಪನಿಗಳಲ್ಲಿ ಹಾಗೂ ಉದ್ಯಮಗಳಲ್ಲಿ ದ್ವಂದ್ವ ಮೂಡಿಸಿದೆ. ಅಲ್ಲದೆ ಜಾಗತಿಕ ವ್ಯಾಪಾರದ ‍ಪ್ರಮುಖ ಹೆಬ್ಬಾಗಿಲಾಗಿರುವ ಹೊರ್ಮುಜ್‌ನ ಭವಿಷ್ಯದ ಬಗ್ಗೆಯೂ ಅನಿಶ್ಚಿತತೆ ಮೂಡಿದೆ.

ಆಗಿದ್ದೇನು?

ಹೊರ್ಮುಜ್‌ನಲ್ಲಿ ಸಂಚರಿಸುವ ಹಡಗುಗಳಿಗೆ ಅಮೆರಿಕ ಸೇನೆ ರಕ್ಷಣೆ ನೀಡಲಿದ್ದು, ಅದಕ್ಕೆ ಪ್ರತಿಯಾಗಿ ಶೇ 20ರಷ್ಟು ಶುಲ್ಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜುಲೈ 13ರಂದು ಹೇಳಿದ್ದರು. ಮರುದಿನವೇ ವರಸೆ ಬದಲಿಸಿದ ಅವರು, ಕೊಲ್ಲಿ ರಾಷ್ಟ್ರಗಳು ಅಮೆರಿಕದಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಒಪ್ಪಂದ ಮಾಡಿಕೊಂಡರೆ, ಅವರ ಹಡಗುಗಳಿಗೆ ಮುಕ್ತ ಸಂಚಾರ ಕಲ್ಪಿಸುವುದಾಗಿ ಹೇಳಿದ್ದಾರೆ.

ಆದರೆ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ? ಯಾವೆಲ್ಲಾ ದೇಶಗಳು ಹೂಡಿಕೆ ಮಾಡಬೇಕು? ತಮ್ಮ ಹಡಗುಗಳಿಗೆ ರಕ್ಷಣೆ ಬೇಕಾದರೆ ಕೊಲ್ಲಿ ಹೊರತಾದ ಜಪಾನ್ ಹಾಗೂ ದಕ್ಷಿಣ ಕೊರಿಯಾದಂತಹ ಇತರೆ ದೇಶಗಳೂ ಕೂಡ ಅಮೆರಿಕದೊಂದಿಗೆ ಹೂಡಿಕೆ ಒಪ್ಪಂದ ಮಾಡಿಕೊಳ್ಳಬೇಕೆ ಎನ್ನುವುದರ ಬಗ್ಗೆ ಖಚಿತತೆ ಇಲ್ಲ.

ಒಪ್ಪಂದದ ಭಾಷೆಯಲ್ಲೇ ಹೊಸ ಬಿಕ್ಕಟ್ಟು: ಹೊರ್ಮುಜ್ ಈಗ ಜಾಗತಿಕ ಪೈಪೋಟಿಯ ಅಖಾಡ

ಹಡಗು ಕಂಪನಿಗಳ ಆತಂಕವೇನು?

ಪದೇ ಪದೇ ಬದಲಾಗುತ್ತಿರುವ ನೀತಿಯಿಂದಾಗಿ ಅಂತರರಾಷ್ಟ್ರೀಯ ವ್ಯಾಪಾರವನ್ನು ಯೋಜಿಸಲು ತೊಡಕಾಗುತ್ತಿದೆ ಎಂದು ಹಡಗು ಕಂಪನಿಗಳು ಹೇಳಿವೆ. ಅಮೆರಿಕ ಸೇನಾ ರಕ್ಷಣೆ ನೀಡುವುದರಿಂದ ಮಾತ್ರ ಅಪಾಯದಿಂದ ಪಾರಾಗಲು ಸಾಧ್ಯವಿಲ್ಲದಿರುವುದರಿಂದ ಹಲವು ಕಂಪನಿಗಳು ‍‍ಪರ್ಷಿಯನ್ ಕೊಲ್ಲಿಗೆ ಹಡಗುಗಳನ್ನು ಕಳುಹಿಸಲು ಹಿಂಜರಿಯುತ್ತಿವೆ.

ಅಂತರರಾಷ್ಟ್ರೀಯ ಸಮುದ್ರ ಮಾರ್ಗದ ಸುಗಮ ಸಂಚಾರವನ್ನು ಶುಲ್ಕ ಅಥವಾ ಹೂಡಿಕೆಗೆ ಅಮೆರಿಕ ತಳುಕುಹಾಕಿದರೆ, ಇತರೆ ದೇಶಗಳೂ ಕೂಡ ಇದೇ ತೆರೆನಾದ ಧೋರಣೆ ಅನುಸರಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿ‍‍ಪ್ರಾಯ ಪಡುತ್ತಾರೆ. ಒಂದು ವೇಳೆ ಹೀಗೆ ಆಗಿದ್ದೇ ಆದಲ್ಲಿ, ವಿಶ್ವದಾದ್ಯಂತ ಹಡಗು ಸಾಗಣೆ ವೆಚ್ಚ ಏರಿಕೆಯಾಗಲಿದೆ. ಅಂತರರಾಷ್ಟ್ರೀಯ ಸಮುದ್ರ ಕಾನೂನು ದುರ್ಬಲವಾಗಲಿದೆ. ಇದರಿಂದ ಇಂಧನ ದರ ಏರಿಕೆಯಾಗಿ, ಅದರ ಪರಿಣಾಮ ಇತರೆ ವಸ್ತುಗಳ ಮೇಲೆಯೂ ಬೀಳಲಿದೆ. ಜಾಗತಿಕ ಹಣದುಬ್ಬರಕ್ಕೆ ಕಾರಣವಾಗಲಿದೆ.

ಅಮೆರಿಕ-ಇರಾನ್ ಸಂಘರ್ಷ: ಭಾರತೀಯ ಹಡಗು ಸಿಬ್ಬಂದಿಗೆ ಮೃತ್ಯುಕೂಪವಾದ 'ಹೊರ್ಮುಜ್'

ಅಂತರರಾಷ್ಟ್ರೀಯ ನಿಯಮಗಳು ಹಾಗೂ ಇರಾನ್‌ನ ನಿಲುವು

ಹೊರ್ಮುಜ್ ಜಲಸಂಧಿಯಲ್ಲಿ ಸಾಗುವ ಹಡಗುಗಳಿಗೆ ಶುಲ್ಕ ವಿಧಿಸುವ ಇರಾನ್‌ನ ಪ್ರಸ್ತಾಪಕ್ಕೆ ಅಮೆರಿಕ ವಿರೋಧಿಸಿತ್ತು. ಅದನ್ನು ಒಪ್ಪಿಕೊಳ್ಳಲು ಅಸಾಧ್ಯ ಎಂದಿತ್ತು. ಆದರೆ ಟ್ರಂಪ್ ಅವರ ಹೊಸ ಘೋಷಣೆಯು ಅಮೆರಿಕದ ನೀತಿಯ ಸ್ಥಿರತೆ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ.

ಅಂತರರಾಷ್ಟ್ರೀಯ ಜಲಸಂಧಿ ಮೂಲಕ ಹಾದುಹೋಗಲು ಶುಲ್ಕ ವಿಧಿಸುವುದಕ್ಕೆ ಯಾವುದೇ ಕಾನೂನು ಮಾರ್ಗಗಳಿಲ್ಲ ಎಂದು ಜಾಗತಿಕ ಹಡಗು ಯಾನದ ಉಸ್ತುವಾರಿ ವಹಿಸಿರುವ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಕಡಲ ಸಂಸ್ಥೆ (ಐಎಂಒ) ಹೇಳಿದೆ.

ಕಡಲ ಸಂಚಾರಕ್ಕೆ ಭದ್ರತೆ ಒದಗಿಸುವ ರಾಷ್ಟ್ರಗಳು ಶುಲ್ಕ ವಿಧಿಸಬಹುದು ಎನ್ನುವ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ಬೆಂಬಲಿಸಿದೆ. ಆದರೆ ಶೇ 20 ಶುಲ್ಕ 'ದುಬಾರಿ' ಎಂದು ಹೇಳಿದೆ.

ಭೂಮಿಗಿಂತ ಮೊದಲೇ ಬಾಹ್ಯಾಕಾಶದಲ್ಲಿ ಸಕ್ಕರೆ ಇತ್ತೇ? ಹೊಸ ಸಂಶೋಧನೆಯಲ್ಲಿ ಸುಳಿವು

ಯಾಕೆ ಮುಖ್ಯ?

ಹೊರ್ಮುಜ್‌ನಲ್ಲಿ ಆತಂಕ ಹೆಚ್ಚಿದೆ. ಇತ್ತೀಚೆಗೆ ಹಡುಗುಗಳ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಇಬ್ಬರು ನಾವಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಆತಂಕ ಹೆಚ್ಚುತ್ತಿದ್ದಂತೆಯೇ ಹೊರ್ಮುಜ್‌ನಲ್ಲಿ ಸಾಗುವ ಹಡಗುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸಂಘರ್ಷಕ್ಕಿಂತ ಹಿಂದೆ ದಿನಕ್ಕೆ 130 ಹಡಗುಗಳು ಸಂಚರಿಸುತ್ತಿದ್ದರೆ, ಸಂಘರ್ಷದ ವೇಳೆ ದಿನಕ್ಕೆ ಕೇವಲ 10 ಹಡುಗಳು ಮಾತ್ರ ಸಂಚರಿಸಿವೆ.

ಪ್ರದೇಶದಲ್ಲಿ ತನ್ನ ಪ್ರಭಾವವನ್ನು ಉಳಿಸಿಕೊಳ್ಳಲು ಹೊರ್ಮುಜ್ ಜಲಸಂಧಿಯನ್ನು ಪ್ರಮುಖ ಅಸ್ತ್ರವನ್ನಾಗಿ ಇರಾನ್ ಬಳಸಿಕೊಳ್ಳುತ್ತಿದೆ. ಉದ್ಯಮಗಳಿಗೆ ಅನಿಶ್ಚಿತತೆಯೇ ದೊಡ್ಡ ತಲೆನೋವಾಗಿದೆ. ಬಹುಕಾಲದಿಂದ ಜಾರಿಯಲ್ಲಿದ್ದ ವಿಶ್ವದ ಪ್ರಮುಖ ಜಲಸಂಧಿಯೊಂದರ ಸಂಚಾರ ನಿಯಮಗಳು ಬದಲಾಗುತ್ತಿರುವುದು, ಜಾಗತಿಕ ಉದ್ಯಮದ ದಿಸೆಯನ್ನೇ ಬದಲಿಸಲಿದೆ. ಸಾಗಾಟ ವೆಚ್ಚಳ ಹೆಚ್ಚಳವಾಗಲಿದೆ. ವಿಶ್ವದಾದ್ಯಂತ ಗ್ರಾಹಕರಿಗೆ ಇದರ ಹೊರೆ ಬೀಳಲಿದೆ.

ಆಧಾರ: ದಿ ನ್ಯೂಯಾರ್ಕ್ ಟೈಮ್ಸ್ ಹಾಗೂ ರಾಯಿಟರ್ಸ್

ಫಲಿಸದ ಒತ್ತಡ, ಉಳಿಯದ ಒಪ್ಪಂದ...ಇರಾನ್ ಎದುರು ಟ್ರಂಪ್ ಮುಂದಿನ ನಡೆ ಏನು?
Dailyhunt
Disclaimer: This content has not been generated, created or edited by Dailyhunt. Publisher: Prajavani