ಬೆಂಗಳೂರು: ಎರಡು ತಿಂಗಳ ಅವಧಿಯಲ್ಲಿ ಮೂರು ಬಾರಿ ಸುರಿದ ಉತ್ತಮ ಮಳೆಯಿಂದ ಕರ್ನಾಟಕದ ಬಹುತೇಕ ಜಲಾಶಯಗಳಿಗೆ ನೀರು ಹರಿದು ಬಂದಿದೆ.
ಜುಲೈ ಕೊನೆ ವಾರ, ಆಗಸ್ಟ್ ಮೊದಲ ವಾರದ ಮಳೆಯಿಂದ ಭರ್ತಿಯಾದ ಜಲಾಶಯಗಳ ಸಂಖ್ಯೆ ಹೆಚ್ಚಿದೆ, ಆದರೂ, ಇಷ್ಟು ಮಳೆಯಾದರೂ ಮಲೆನಾಡಿನ ಎರಡು ಜಲಾಶಯಗಳ ನೀರಿನ ಮಟ್ಟ ಇನ್ನೂ ಶೇ 50 ರಷ್ಟನ್ನು ತಲುಪಿಲ್ಲ.
ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ಸದ್ಯ ಶೇ 65ರಷ್ಟು ನೀರು ಸಂಗ್ರಹವಿದೆ. ಒಟ್ಟು 586.25 ಟಿಎಂಸಿ ನೀರು ಲಭ್ಯವಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 765,26 ಟಿಎಂಸಿ ನೀರಿತ್ತು. ಒಟ್ಟು 895 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ನಮ್ಮಲ್ಲಿದೆ.
ಮಲೆನಾಡು ಭಾಗದ ಲಿಂಗನಮಕ್ಕಿ ಜಲಾಶಯ ಹಾಗೂ ಉಡುಪಿ ಜಿಲ್ಲೆಯ ವಾರಾಹಿ ಜಲಾಶಯದಲ್ಲಿ ಶೇ 47ರಷ್ಟು ನೀರು ಸಂಗ್ರಹವಿದೆ.
ಲಿಂಗನಮಕ್ಕಿ ಜಲಾಶಯಕ್ಕೆ ಈಗಲೂ 22ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ 71.24 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 128 ಟಿಎಂಸಿ ನೀರಿತ್ತು. ಇಲ್ಲಿ 151.75 ಟಿಎಂಸಿ ನೀರು ಸಂಗ್ರಹಿಸಬಹುದು. ಜಲಾಶಯದ ನೀರಿನ ಮಟ್ಟವು 1789 ಅಡಿಗೆ ತಲುಪಿದೆ.
ವಾರಾಹಿ ಜಲಾಶಯಕ್ಕೆ ಈಗ 3885 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 14.76 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ 24 ಟಿಎಂಸಿ ನೀರು ಲಭ್ಯವಿತ್ತು. ಇಲ್ಲಿ 31.13 ಟಿಎಂಸಿ ನೀರು ಸಂಗ್ರಹಿಸಬಹುದು.
ಉಳಿದಂತೆ ಉತ್ತರ ಕನ್ನಡ ಜಿಲ್ಲೆಯ ಸೂಪಾ ಜಲಾಶಯದಲ್ಲಿ ಶೇ 50ರಷ್ಟು ನೀರು ಸಂಗ್ರಹವಾಗಿದೆ. 21910 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಲ್ಲಿ 73.31 ಟಿಎಂಸಿ ನೀರು ಲಭ್ಯವಿದೆ. ಕಳೆದ ವರ್ಷ 97 ಟಿಎಂಸಿ ನೀರಿತ್ತು. ಇಲ್ಲಿ 145 ಟಿಎಂಸಿ ನೀರು ಸಂಗ್ರಹಿಸಬಹುದು.
ಆಲಮಟ್ಟಿ- ನಾರಾಯಣಪುರ ಜಲಾಶಯ
ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಕೊಂಚ ಇಳಿಕೆಯಾಗಿದ್ದು., ಸದ್ಯ 1,18751 ಕ್ಯೂಸೆಕ್ ನೀರು ಒಳಹರಿವು ಇದೆ. 1.50 ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಶೇ 87ರಷ್ಟು ನೀರಿದ್ದು, 106 ಟಿಎಂಸಿ ಸಂಗ್ರಹವಾಗಿದೆ.
ನಾರಾಯಣಪುರ ಜಲಾಶಯಕ್ಕೆ 1.52 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಶೇ 87ರಷ್ಟು ನೀರಿದ್ದು, 29 ಟಿಎಂಸಿ ಸಂಗ್ರಹವಾಗಿದೆ.
ತುಂಗಭದ್ರಾ ಜಲಾಶಯ
ತುಂಗಭದ್ರಾ ಜಲಾಶಯದ ಒಳಹರಿವಿನಲ್ಲೂ ಇಳಿಕೆಯಾಗಿದ್ದು, 47559 ಕ್ಯೂಸೆಕ್ ಹರಿದು ಬರುತ್ತಿದೆ. ಶೇ 65ರಷ್ಟು ಜಲಾಶಯ ಭರ್ತಿಯಾಗಿದ್ದು, 69 ಟಿಎಂಸಿ ನೀರಿದೆ.
ಕೃಷ್ಣರಾಜಸಾಗರ ಜಲಾಶಯದ ಒಳಹರಿವು ಕಡಿಮೆಯಾಗಿದ್ದರೆ, 7477 ಕ್ಯೂಸೆಕ್ ಮಾತ್ರ ಹರಿದು ಬರುತ್ತಿದೆ. ಶೇ 57ರಷ್ಟು ನೀರು ಭರ್ತಿಯಾಗಿದ್ದು, 28 ಟಿಎಂಸಿ ನೀರಿದೆ. ಕಳೆದ ವರ್ಷ ಇಲ್ಲಿ 48 ಟಿಎಂಸಿ ನೀರಿತ್ತು.
ಕಬಿನಿ ಜಲಾಶಯಕ್ಕೂ ಒಳಹರಿವು ಕಡಿಮೆಯಾಗಿ ಹೊರ ಹರಿವನ್ನು ತಗ್ಗಿಸಲಾಗಿದೆ. ಜಲಾಶಯದಲ್ಲಿ ಶೇ 94ರಷ್ಟು ನೀರಿದೆ. 18 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ 9 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 7 ಸಾವಿರ ಕ್ಯೂಸೆಕ್ ಹೊರ ಬಿಡಲಾಗುತ್ತಿದೆ.
ಹೇಮಾವತಿ-ಹಾರಂಗಿ ಜಲಾಶಯ
ಹೇಮಾವತಿ ಜಲಾಶಯದಲ್ಲಿ ಶೇ 80( 30 ಟಿಎಂಸಿ)., ಹಾರಂಗಿ ಜಲಾಶಯದಲ್ಲಿ ಶೇ 97( 8.26 ಟಿಎಂಸಿ), ಭದ್ರಾ ಜಲಾಶಯದಲ್ಲಿ ಶೇ 70(50 ಟಿಎಂಸಿ),ಘಟಪ್ರಭಾ ಜಲಾಶಯದಲ್ಲಿ ಶೇ 88( 45 ಟಿಎಂಸಿ), ಮಲಪ್ರಭಾ ಜಲಾಶಯದಲ್ಲಿ ಶೇ 52( 20 ಟಿಎಂಸಿ), ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ಶೇ 77( 23.30 ಟಿಎಂಸಿ) ನೀರು ಲಭ್ಯವಿದೆ.

ಜಲಾಶಯಗಳ ನೀರಿನ ಮಟ್ಟ
ಜಲಾಶಯ ನೀರಿನ ಮಟ್ಟ (ಸಮುದ್ರ ಮಟ್ಟದಿಂದ)ಶಿಕಾರಿಪುರ | ಅಂಜನಾಪುರ ಜಲಾಶಯ ಭರ್ತಿ, ರೈತರ ಮೊಗದಲ್ಲಿ ಮಂದಹಾಸಭದ್ರಾ ಜಲಾಶಯ ನೀರಿಗಾಗಿ ಒಗ್ಗಟ್ಟಿನ ಹೋರಾಟಕ್ಕೆ ಸಿದ್ಧರಾಗಿ: ರವೀಂದ್ರನಾಥ್PV Web Excusive Story: ಶೂನ್ಯ ಒಳಹರಿವಿನಿಂದ ಭರ್ತಿಯತ್ತ ಹಿಡಕಲ್ ಜಲಾಶಯ...!
