ನೇಪಾಳ ಮತ್ತು ಟಿಬೆಟ್ನ ಹಿಮಾಲಯ ಪ್ರದೇಶಗಳಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಾವಿಗೀಡಾದವರ ಸಂಖ್ಯೆ ನಿರಂತರವಾಗಿ ಏರುತ್ತಿದೆ. ನೂರಾರು ಮೃತದೇಹಗಳು ನದಿಯಲ್ಲಿ ತೇಲಿ ಬರುತ್ತಿವೆ. ಗಾಢ ಕೆಸರಿನಿಂದ ಹಲವು ನಿಶ್ಚಲ ದೇಹಗಳನ್ನು ಹೊರತೆಗೆಯಲಾಗುತ್ತಿದೆ. ಸೋಮವಾರ ಬೆಳಿಗ್ಗೆ ವೇಳೆಗೆ ಒಟ್ಟು ಸಾವಿನ ಸಂಖ್ಯೆ 900 ದಾಟಿದೆ.
ಪ್ರವಾಹದ ಭೀಕರತೆಗೆ ಮೃತದೇಹಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ನೇಪಾಳದ ಶವಾಗಾರಗಳಲ್ಲೇ ಸ್ಥಳ ಇಲ್ಲದಿಂದಾಗಿದೆ. ವಿರೂಪಗೊಂಡಿರುವ ಮೃತದೇಹಗಳನ್ನು ಗುರುತಿಸುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಪರಿಸ್ಥಿತಿ ಕೈಮೀರಿದ್ದು, ಭರತ್ಪುರ ಜಿಲ್ಲೆಯಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ಮತ್ತು ತಾತ್ಕಾಲಿಕ ಸಮಾಧಿ ಕಾರ್ಯವೂ ಆರಂಭವಾಗಿದೆ.
ಪ್ರತಿ ಮೃತದೇಹದಿಂದ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿ, ಅದಕ್ಕೊಂದು ಗುರುತು ಸಂಖ್ಯೆ ನೀಡಿ, ಸ್ಥಳದ ವಿವರಗಳನ್ನು ದಾಖಲಿಸಲಾಗುತ್ತಿದೆ. ಬಳಿಕ ಮೃತದೇಹಗಳನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿ ತಾತ್ಕಾಲಿಕವಾಗಿ ಸಮಾಧಿ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಕುಟುಂಬಸ್ಥರ ಡಿಎನ್ಎ ಹೊಂದಾಣಿಯಾಗಿ ಗುರುತು ಪತ್ತೆಯಾದರೆ, ಮೃತದೇಹಗಳನ್ನು ಹೊರತೆಗೆದು ಧಾರ್ಮಿಕ ವಿಧಿವಿಧಾನಗಳಿಗೆ ಅವಕಾಶ ನೀಡುವ ಉದ್ದೇಶ ಅಧಿಕಾರಿಗಳದ್ದು.
ಹಿಮಾಲಯದ ಪ್ರವಾಹವನ್ನು ಊಹಿಸುವುದು ಏಕೆ ಕಷ್ಟ? ವಿಜ್ಞಾನಿಗಳಿಗೆ ಸವಾಲುಗಳೇನು?ಫೋಟೊಗಳ ಮೂಲಕ ಮೃತದೇಹಗಳ ಗುರುತು ಪತ್ತೆ
ನೇಪಾಳದ ಚಿತ್ವಾನ್ನಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಪ್ರವಾಹ ಪೀಡಿತ ಪ್ರದೇಶದಿಂದ ಸುಮಾರು 160 ಕಿ.ಮೀ. ದೂರದಲ್ಲಿರುವ ಈ ಪ್ರದೇಶದ ನದಿಯ ದಡಗಳಲ್ಲಿ 250ಕ್ಕೂ ಹೆಚ್ಚು ಮೃತದೇಹಗಳು ಪತ್ತೆಯಾಗಿವೆ. ಆದರೆ ಅವುಗಳಲ್ಲಿ ಕೇವಲ ಒಂಬತ್ತು ಮಂದಿಯ ಗುರುತು ಪತ್ತೆ ಮಾತ್ರ ಸಾಧ್ಯವಾಗಿದೆ. ಗುರುತು ಪತ್ತೆ ಕೆಲಸವನ್ನು ತ್ವರಿತವಾಗಿ ಮಾಡಲು ಅಧಿಕಾರಿಗಳು ವಿಶಿಷ್ಟ ವಿಧಾನವೊಂದನ್ನು ಬಳಸುತ್ತಿದ್ದಾರೆ. ಗುರುತು ಪತ್ತೆಯಾದ ಮೃತದೇಹಗಳ ಛಾಯಾಚಿತ್ರಗಳನ್ನು ಪವರ್ಪಾಯಿಂಟ್ ಸ್ಲೈಡ್ಶೋಗಳಲ್ಲಿ ಪ್ರದರ್ಶಿಸಿ, ನಾಪತ್ತೆಯಾದವರ ಕುಟುಂಬಸ್ಥರಿಗೆ ತೋರಿಸಲಾಗುತ್ತಿದೆ.
ಮಾಲೆ, ಮದುವೆಯ ಉಂಗುರ, ಹಚ್ಚೆ, ಗಾಯದ ಗುರುತು ಸೇರಿದಂತೆ ದೇಹದಲ್ಲಿರುವ ಗುರುತಿಸಬಹುದಾದ ಲಕ್ಷಣಗಳ ಮೂಲಕ ಮೃತದೇಹಗಳ ಗುರುತು ಪತ್ತೆಮಾಡಲು ಕುಟುಂಬಸ್ಥರಿಗೆ ಅವಕಾಶ ನೀಡಲಾಗುತ್ತಿದೆ. ಮೃತದೇಹಗಳ ಫೋಟೊಗಳನ್ನು ನೇಪಾಳ ಪೊಲೀಸ್ ವೆಬ್ಸೈಟ್ನಲ್ಲೂ ಅಪ್ಲೋಡ್ ಮಾಡಲಾಗಿದೆ. ರಾಜಧಾನಿ ಕಠ್ಮಂಡುವಿನ ಶವಾಗಾರದ ಹೊರಭಾಗದಲ್ಲಿಯೂ ಮೃತರ ಫೋಟೊಗಳನ್ನು ಪ್ರದರ್ಶಿಸಲಾಗಿದೆ.
ಹಿಮಾಲಯದಲ್ಲಿ ತಾಪಮಾನ ಏರಿಕೆ, ನೀರ್ಗಲ್ಲು ಕುಸಿತ: ನೇಪಾಳ ಪ್ರವಾಹದ ಎಚ್ಚರಿಕೆ ಏನು?ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಮುಗಿಯದ ಸಾವಿನ ಲೆಕ್ಕ, ಕಾಣದ ಬದುಕಿನ ದಾರಿ... ಪ್ರವಾಹದ ಬಳಿಕದ ನೇಪಾಳ
ಒಂದು ಸಾಲಿನಲ್ಲಿನೇಪಾಳದ ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ 900ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು, ರಕ್ಷಣೆ ಮತ್ತು ಮೃತದೇಹಗಳ ಗುರುತಿಸುವಿಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಪ್ರಮುಖ ಪ್ರಶ್ನೋತ್ತರ
ನೇಪಾಳದ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಎಷ್ಟು?
ಸೋಮವಾರ ಬೆಳಿಗ್ಗೆಯ ವರದಿಯ ಪ್ರಕಾರ, ನೇಪಾಳದಲ್ಲಿ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 903ಕ್ಕೆ ಏರಿದೆ ಮತ್ತು ಈ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕವಿದೆ.
ಮೃತದೇಹಗಳ ಗುರುತು ಪತ್ತೆ ಹಚ್ಚಲು ಅಧಿಕಾರಿಗಳು ಏನು ಮಾಡುತ್ತಿದ್ದಾರೆ?
ಮೃತದೇಹಗಳ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ ಮತ್ತು ಕುಟುಂಬಸ್ಥರಿಗೆ ಗುರುತಿಸಲು ಸಹಾಯವಾಗುವಂತೆ ಮೃತರ ಫೋಟೊಗಳನ್ನು ಪವರ್ಪಾಯಿಂಟ್ ಸ್ಲೈಡ್ಶೋ ಮೂಲಕ ಪ್ರದರ್ಶಿಸಲಾಗುತ್ತಿದೆ.
ಪ್ರವಾಹದಿಂದ ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ?
ನೇಪಾಳ ಮತ್ತು ಟಿಬೆಟ್ ಪ್ರದೇಶಗಳಲ್ಲಿ ಇನ್ನೂ 3,000ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಇವರ ಹುಡುಕಾಟಕ್ಕಾಗಿ ಸೇನೆ ಮತ್ತು ಡ್ರೋನ್ಗಳ ಸಹಾಯ ಪಡೆಯಲಾಗುತ್ತಿದೆ.
ಮೃತದೇಹಗಳನ್ನು ನಿರ್ವಹಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು?
ಶವಾಗಾರಗಳಲ್ಲಿ ಜಾಗವಿಲ್ಲದ ಕಾರಣ ಮೃತದೇಹಗಳನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿ ತಾತ್ಕಾಲಿಕವಾಗಿ ಸಮಾಧಿ ಮಾಡಲಾಗುತ್ತಿದೆ, ಜೊತೆಗೆ 1,000ಕ್ಕೂ ಹೆಚ್ಚು ಫ್ರೀಜರ್ ಘಟಕಗಳನ್ನು ಸರ್ಕಾರ ಕೋರಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬದುಕುಳಿದವರ ಸ್ಥಿತಿ ಹೇಗಿದೆ?
ತಮ್ಮ ಮನೆ ಮತ್ತು ಆಸ್ತಿಗಳನ್ನು ಕಳೆದುಕೊಂಡಿರುವ ಸಂತ್ರಸ್ತರು, ಭವಿಷ್ಯದ ಬಗ್ಗೆ ಅನಿಶ್ಚಿತತೆಯಲ್ಲಿದ್ದು, ಪುನರ್ವಸತಿ ಕಲ್ಪಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಪ್ರಮುಖ ಅಂಕಿಅಂಶಗಳು
903ಒಟ್ಟು ಸಾವಿನ ಸಂಖ್ಯೆ3,000+ನಾಪತ್ತೆಯಾದವರ ಸಂಖ್ಯೆ250ಚಿತ್ವಾನ್ನಲ್ಲಿ ಪತ್ತೆಯಾದ ಮೃತದೇಹಗಳು1,000ಅಗತ್ಯವಿರುವ ಫ್ರೀಜರ್ ಘಟಕಗಳು
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
3,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ
ನೇಪಾಳ ಮತ್ತು ಟಿಬೆಟ್ನಲ್ಲಿ ಇನ್ನೂ 3,000ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎನ್ನುವ ವರದಿಗಳಿವೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಭಾರೀ ಪ್ರಮಾಣದಲ್ಲಿ ಏರುವ ಆತಂಕವಿದೆ. ಪ್ರವಾಹ ಮತ್ತು ಕೆಸರಿನ ಅಲೆಗಳಿಗೆ ಇಡೀ ಗ್ರಾಮಗಳೇ ಕೊಚ್ಚಿಹೋಗಿರುವ ಹಲವು ಪ್ರದೇಶಗಳಿಗೆ ಇನ್ನೂ ರಸ್ತೆ ಸಂಪರ್ಕ ಸಾಧ್ಯವಾಗಿಲ್ಲ. ಸೇನಾ ಹೆಲಿಕಾಪ್ಟರ್ಗಳ ಮೂಲಕವೇ ಅಲ್ಲಿಗೆ ತಲುಪಬೇಕಾದ ಪರಿಸ್ಥಿತಿ ಇದೆ. ಅಲ್ಲದೆ ಡ್ರೋನ್ಗಳ ಮೂಲಕವೂ ಆಹಾರ ಸಾಮಗ್ರಿಗಳನ್ನು ತಲಪಿಸುವ ಬಗ್ಗೆ ಪ್ರಯತ್ನಗಳು ನಡೆಯುತ್ತಿದೆ ಎಂದು 'ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.
ಮೃತದೇಹಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ನೇಪಾಳ ಸರ್ಕಾರ 1,000ಕ್ಕೂ ಹೆಚ್ಚು ಫ್ರೀಜರ್ ಘಟಕಗಳನ್ನು ಕೋರಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಅಮೃತ್ ಬಹಾದೂರ್ ರೈ ತಿಳಿಸಿದ್ದಾರೆ.
ಬಿಸಿಯಾಗುತ್ತಿರುವ ಹಿಮಾಲಯವೇ ನೇಪಾಳದ ಪರ್ವತಗಳಲ್ಲಿ ಸ್ಫೋಟಗೊಂಡ ಪ್ರವಾಹಕ್ಕೆ ಕಾರಣ?ಕೆಸರಿನಡಿ ಎಷ್ಟು ಮೃತದೇಹಗಳಿವೆ?
ಪ್ರವಾಹದ ನಂತರ ರಸ್ತೆ ಸಂಪರ್ಕ ಸಾಧ್ಯವಿರುವ ಪ್ರದೇಶಗಳಲ್ಲಿಯೂ ರಕ್ಷಣಾ ತಂಡಗಳಿಗೆ ಮೃತದೇಹಗಳನ್ನು ಹೊರತೆಗೆಯುವುದು ಕಷ್ಟವಾಗುತ್ತಿದೆ. ತ್ರಿಶೂಲಿ ನದಿಯ ದಡದಲ್ಲಿರುವ ಪವಿತ್ರ ಪಟ್ಟಣ ದೇವಿಘಾಟ್ ಪ್ರವಾಹದಿಂದ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಅಲ್ಲಿ ಭಾರಿ ಪ್ರಮಾಣದಲ್ಲಿ ಕೆಸರು ಜಮೆಯಾಗಿದ್ದು, ಮೃತದೇಹಗಳ ಪತ್ತೆ ಕಷ್ಟವಾಗುತ್ತಿದೆ. ಗಾಢವಾಗಿ ಕೆಸರು ಶೇಖರಣೆಗೊಂಡಿದ್ದು, ಅದರಲ್ಲಿ ಹುದುಗಿ ಹೋಗಿರುವ ಶವಗಳನ್ನು ಹೊರತೆಗೆಯುವುದೂ ಕಷ್ಟವಾಗುತ್ತಿದೆ.
ಕೆಸರಿನಿಂದ ಮೃತದೇಹಗಳನ್ನು ಹೊರತೆಗೆಯುವುದು ಕಷ್ಟವಾಗುತ್ತಿದೆ ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಹೇಳಿದ್ದಾರೆ. ಪ್ರವಾಹದ ಭೀಕರತೆಗೆ ಮನೆಗಳ ಮೊದಲ ಮತ್ತು ಎರಡನೇ ಮಹಡಿಗಳು ನಾಶವಾಗಿದೆ. ಎಲ್ಲ ಕೆಸರನ್ನೂ ತೆರವುಗೊಳಿಸಿದಾಗ ಇನ್ನಷ್ಟು ದೇಹಗಳು ಸಿಗಬಹುದು ಎನ್ನುವುದು ಗೊತ್ತಿಲ್ಲ. ಅದಕ್ಕೆ ಹಲವು ತಿಂಗಳುಗಳೇ ಬೇಕಾಗಬಹುದು ಎಂದು ರಕ್ಷಣಾ ಕಾರ್ಯದಲ್ಲಿದ್ದ ಅಧಿಕಾರಿಯೊಬ್ಬರು ತಿಳಿಸಿದರು.
ಈರುಳ್ಳಿ ಬೆಲೆ ಏರಿಕೆಯ ಒಳನೋಟ: ಉತ್ಪಾದನೆ, ಪೂರೈಕೆ ಮತ್ತು ಮಾರುಕಟ್ಟೆಯ ಲೆಕ್ಕಮನೆ ಕಳೆದುಕೊಂಡವರ ಬದುಕಿನ ಪ್ರಶ್ನೆ
ಪ್ರವಾಹದಿಂದ ಬದುಕುಳಿದವರು ನಿಧಾನವಾಗಿ ತಮ್ಮ ಮನೆಗಳತ್ತ ಮರಳುತ್ತಿದ್ದಾರೆ. ಆದರೆ ಅಲ್ಲಿ ಉಳಿದಿರುವುದು ಮನೆಗಳ ಅವಶೇಷಗಳು ಮತ್ತು ಕೆಸರಿನಲ್ಲಿ ಹುದುಗಿರುವ ವಸ್ತುಗಳನ್ನು ನೋಡಿ ಭಾವುಕರಾಗುತ್ತಿದ್ದಾರೆ. 'ಮನೆ ಕಟ್ಟಲು ನನ್ನಲ್ಲಿದ್ದ ಎಲ್ಲವನ್ನೂ ಹೂಡಿಕೆ ಮಾಡಿದ್ದೆ. ಈಗ ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ. ನನ್ನ ಮೈಮೇಲಿರುವ ಈ ಬಟ್ಟೆಯೊಂದನ್ನು ಹೊರತುಪಡಿಸಿ ಏನೂ ಉಳಿದಿಲ್ಲ. ಪ್ರವಾಹದ ನಂತರ ಇದುವರೆಗೂ ಬಟ್ಟೆಯನ್ನೂ ಬದಲಿಸಿಲ್ಲ' ಎಂದು ಮಹಿಳೆಯೊಬ್ಬರು 'ದಿ ಗಾರ್ಡಿಯನ್' ವರದಿಗಾರರೊಂದಿಗೆ ಹೇಳುತ್ತಾ ಕಣ್ಣೀರಿಟ್ಟರು.
ಮನೆ ಇದ್ದ ಭೂಮಿ ಈಗ ಸುರಕ್ಷಿತವಲ್ಲ ಎಂಬುದು ಅವರಿಗೆ ಗೊತ್ತಿದೆ. ಆದರೆ ಬೇರೆಡೆಗೆ ತೆರಳಲು ಅವರ ಬಳಿ ಆಯ್ಕೆಯೂ ಇಲ್ಲ. ಪ್ರವಾಹ ಹಲವರ ಜೀವ ಹಾಗೂ ಜೀವನವನ್ನು ಕಸಿದು ಬಿಟ್ಟಿದೆ. ಬದುಕಿದ್ದವರ ಭವಿಷ್ಯ ಮುಸುಕಾಗಿದೆ. ಮುಂದೇನು…? ಕಣ್ಣ ಮುಂದೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯೊಂದು ತೇಲುತ್ತಿದೆ.
ಕಥೆ, ಹಾಡು, ಅನಿಮೇಷನ್ ಮೂಲಕ ಕನ್ನಡ ಕಲಿಕೆ: ಅಮೆರಿಕದ ದಂಪತಿ ಕಟ್ಟಿದ 'ಶಾಲೆ'ಭೀಕರ ಪ್ರವಾಹದ ಊಹೆಯೂ ಇರಲಿಲ್ಲ
ದೇವಿಘಾಟ್ನಲ್ಲಿ ಹಲವು ತಲೆಮಾರುಗಳಿಂದ ವಾಸಿಸುತ್ತಿದ್ದ 36 ವರ್ಷದ ಜಮುನಾ ಮಾಘರ್ ಅವರ ಕುಟುಂಬವು, ಪ್ರವಾಹ ಸೃಜಿಸಿದ ಅಧ್ವಾನಗಳ ರೂಪಕದಂತೆ ಕಾಣಿಸುತ್ತಿದೆ. ಪ್ರವಾಹದ ಎಚ್ಚರಿಕೆ ಬಂದಾಗ ಕೆಲವೇ ನಿಮಿಷಗಳಲ್ಲಿ ತಮ್ಮ ಬಳಿ ಇದ್ದ ಚಿನ್ನವನ್ನು ಮಾತ್ರ ತೆಗೆದುಕೊಂಡು ಹೊರಗೆ ಬಂದಿದ್ದಾರೆ. ಉಳಿದಿದ್ದೆಲ್ಲವನ್ನೂ ಪ್ರವಾಹ ಆಪೋಶನ ತೆಗೆದುಕೊಂಡಿದೆ. ನೆಲಮಹಡಿಯಲ್ಲಿದ್ದ, ಫ್ರಿಜ್ ಸೇರಿದಂತೆ ಹಲವು ವಸ್ತುಗಳು ಪ್ರವಾಹದ ರಭಸಕ್ಕೆ ಎಲ್ಲೋ ತೇಲಿ ಹೋಗಿದೆ.
'ಈ ಹಿಂದೆ ಪ್ರವಾಹವನ್ನು ನೋಡಿದ್ದೇವೆ. ಆದರೆ ಇಂತಹ ಪ್ರವಾಹ ಬಂದು ನಮ್ಮ ಮನೆಯನ್ನೇ ಕೊಂಡೊಯ್ಯುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ. ಈಗ ನನ್ನ ಮಕ್ಕಳ ಜೀವನದ ಬಗ್ಗೆಯೇ ಹೆಚ್ಚು ಚಿಂತೆಯಾಗಿದೆ. ಮತ್ತೆ ಇಲ್ಲಿ ವಾಸಿಸುವುದು ಹೇಗೆ ಎಂಬುದು ಗೊತ್ತಿಲ್ಲ' ಜಮುನಾ ಕಣ್ಣಲ್ಲಿ ಭವಿಷ್ಯದ ಅನಿಶ್ಚಿತತೆ ಗೋಚರಿಸುತ್ತಿತ್ತು.
ಪ್ರವಾಹದ ಬಳಿಕವೂ ತ್ರಿಶೂಲಿ ನದಿಯ ನೀರು ಅಪಾಯದ ಮಟ್ಟಕ್ಕೆ ಏರಿಕೆಯಾಗಿದೆ. ಹೀಗಾಗಿ ದುರಂತದ ಇನ್ನೂ ಮುಗಿದ ಹಾಗೆ ಕಾಣುತ್ತಿಲ್ಲ. ಒಮ್ಮೆ ಸುಂದರ ಸ್ಥಳವಾಗಿದ್ದ ದೇವಿಘಾಟ್ನಿಂದ ಈಗ ಕೆಸರು ಗದ್ದೆಯಂತಾಗಿದೆ. ಮರಳಿ ಅಲ್ಲಿ ಬದುಕು ಕಟ್ಟಿಕೊಳ್ಳುವ ಮನಸ್ಸು ಹಲವರಿಗೆ ಇದ್ದರೂ, ಮತ್ತೆ ಹೀಗೆ ಆದರೆ ಎನ್ನುವ ಭಯ ಇದೆ. ಈಗ ಉಂಟಾಗಿರುವ ಅಧ್ವಾನ ಸರಿ ಹೋಗಲು ದಶಕಗಳೇ ಬೇಕಾಗಬಹುದು.
ಆಧಾರ: ದಿ ಗಾರ್ಡಿಯನ್, ಬಿಬಿಸಿ, ರಾಯಿಟರ್ಸ್ ಹಾಗೂ ಅಸೋಸಿಯೇಟೆಡ್ ಪ್ರೆಸ್
₹22,006 ಕೋಟಿ ಸಾಲ, ₹6.5 ಕೋಟಿಗೆ ಇತ್ಯರ್ಥ: ಸುಭಾಷ್ ಚಂದ್ರ ಪ್ರಕರಣದ ಅಸಲಿ ಲೆಕ್ಕ
