Dailyhunt Logo
  • Light mode
    Follow system
    Dark mode
    • Play Story
    • App Story
'ರಾಮಾಯಣ'ದ ಸೀತೆ ಪಾತ್ರದ ಬಗ್ಗೆ ಮನದಾಳ ಹಂಚಿಕೊಂಡ ನಟಿ ಸಾಯಿ ಪಲ್ಲವಿ

'ರಾಮಾಯಣ'ದ ಸೀತೆ ಪಾತ್ರದ ಬಗ್ಗೆ ಮನದಾಳ ಹಂಚಿಕೊಂಡ ನಟಿ ಸಾಯಿ ಪಲ್ಲವಿ

ವದೆಹಲಿ: ಬಾಲಿವುಡ್‌ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ 'ರಾಮಾಯಣ'ದಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ, ತಮ್ಮ ಪಾತ್ರದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ದೆಹಲಿಯಲ್ಲಿ ಶನಿವಾರ ನಡೆದ ಚಿತ್ರದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೀತಾ ಮಾತೆಯ ಪಾತ್ರದಲ್ಲಿ ನಟಿಸಿದ್ದು ತಮ್ಮ ವೃತ್ತಿ ಜೀವನದಲ್ಲೇ ವಿಭಿನ್ನ ಹಾಗೂ ದೈವಿಕ ಅನುಭವ ನೀಡಿದೆ ಎಂದಿದ್ದಾರೆ.

ಸೈನಿಕರ ಹತ್ಯೆಗೆ ಪ್ರತೀಕಾರ: ಇರಾನ್‌ ಪಡೆಗಳ ಮೇಲೆ ದಾಳಿ ತೀವ್ರಗೊಳಿಸಿದ ಅಮೆರಿಕಅಭಿಷೇಕ್ ಬ್ಯಾನರ್ಜಿ ಕಚೇರಿ ನೆಲಸಮ ಪ್ರಕ್ರಿಯೆ: ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ

ಪ್ರಾರ್ಥನೆ ಮತ್ತು ಧ್ಯಾನದ ಮೂಲಕ ಪಾತ್ರಕ್ಕೆ ಸಿದ್ಧತೆ

ಚಿತ್ರದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸಲು ತಾವು ಪಟ್ಟ ಶ್ರಮದ ಬಗ್ಗೆ ವಿವರಿಸಿದ ಸಾಯಿ ಪಲ್ಲವಿ, 'ಕಲಾವಿದರಿಗೆ ಇಂತಹ ಐತಿಹಾಸಿಕ ಮತ್ತು ದೇವರ ಪಾತ್ರಗಳು ಸಿಗುವುದು ಸುಲಭವಲ್ಲ. ಒಬ್ಬ ದೇವತೆಯ ಪಾತ್ರಕ್ಕೆ ಜೀವ ತುಂಬುವುದು ಅಷ್ಟು ಸುಲಭದ ಮಾತೂ ಅಲ್ಲ. ಇಡೀ ಚಿತ್ರತಂಡ ತನ್ನ ಇಡೀ ಶ್ರಮ ಮತ್ತು ಶ್ರದ್ಧೆಯನ್ನು ಧಾರೆ ಎರೆದಾಗ ಮಾತ್ರ ಇಂತಹದ್ದೊಂದು ಅತ್ಯುತ್ತಮ ಸಿನಿಮಾ ಮೂಡಿಬರಲು ಸಾಧ್ಯ' ಎಂದು ಅಭಿಪ್ರಾಯಪಟ್ಟರು.

'ನಾನು ಯೋಜನೆಯನ್ನಾಗಲಿ, ಮಹತ್ವಾಕಾಂಕ್ಷೆಯನ್ನಾಗಲಿ ಇಟ್ಟುಕೊಂಡು ಈ ಪಾತ್ರವನ್ನು ಆರಿಸಿಕೊಂಡಿಲ್ಲ. ಬದಲಿಗೆ ಸೀತಾ ಮಾತೆಯ ಪಾತ್ರ ನನಗೆ ಸಿಕ್ಕಿದ್ದು ಒಂದು ದೇವರ ಆಶೀರ್ವಾದ ಎಂದು ಭಾವಿಸುತ್ತೇನೆ. ಈ ಪಾತ್ರವನ್ನು ಹೇಗೆ ಮಾಡಬೇಕೆಂದು ಮೊದಲೇ ಬರೆದಿಟ್ಟುಕೊಳ್ಳಲು ಸಾಧ್ಯವಿರಲಿಲ್ಲ. ಚಿತ್ರೀಕರಣದ ಸಮಯದಲ್ಲಿ ನಾನು ಧ್ಯಾನಸ್ಥಳಾಗಿ ಕುಳಿತು, ಸೀತಾ ಮಾತೆ, ನೀನೇ ನನ್ನ ಮೂಲಕ ನಟಿಸು. ನನ್ನಿಂದ ಏನನ್ನು ನಿರೀಕ್ಷಿಸುತ್ತೀಯೋ ಅದು ಪರದೆಯ ಮೇಲೆ ಬರಲಿ ಎಂದು ಪ್ರಾರ್ಥಿಸುತ್ತಿದ್ದೆ' ಎಂದು ಭಾವನಾತ್ಮಕವಾಗಿ ನುಡಿದರು.

ರಾಮಮಂದಿರದಲ್ಲಿ ಕಾಣಿಕೆ ಕಳವು | ಸ್ವತಂತ್ರ ತನಿಖೆ ನಡೆಸಿ: ಮೋದಿಗೆ ರಾಹುಲ್‌ ಪತ್ರ ನಾಗಾಲ್ಯಾಂಡ್‌ನಲ್ಲಿ ಭೂಕುಸಿತ: ಎಂಟು ಜನ ಸಾವು, ಹಲವರು ನಾಪತ್ತೆ

ಶೂಟಿಂಗ್ ಮುಗಿಯುವವರೆಗೂ ತಮ್ಮ ಆಲೋಚನೆಗಳನ್ನು ಅತ್ಯಂತ ಸಕಾರಾತ್ಮಕವಾಗಿಟ್ಟುಕೊಳ್ಳಲು ಪ್ರಯತ್ನಿಸಿದ್ದಾಗಿ, ಇದು ಪಾತ್ರಕ್ಕೆ ನ್ಯಾಯ ಒದಗಿಸಲು ತಮಗೆ ಸಹಕಾರಿಯಾಯಿತು ಎಂದರು. ಇದೇ ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ನಿರ್ದೇಶಕ ನಿತೇಶ್ ತಿವಾರಿ, ಸಾಯಿ ಪಲ್ಲವಿ ಅವರ ಶ್ರದ್ಧೆ ಹಾಗೂ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ 'ರಾಮಾಯಣ'

ಭಾರತೀಯ ಚಿತ್ರರಂಗದಲ್ಲೇ ಬಿಗ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ.

ಮೊದಲ ಭಾಗ 2026ರ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ವಿಶ್ವದಾದ್ಯಂತ ತೆರೆಕಾಣಲಿದೆ. ಎರಡನೇ ಭಾಗ 2027ರ ದೀಪಾವಳಿ ಹಬ್ಬದಂದು ಬಿಡುಗಡೆಯಾಗಲಿದೆ.

FIFA: ಆರು ದಶಕಗಳಿಂದ ಯಾವ ತಂಡಕ್ಕೂ ಸಾಧ್ಯವಾಗದ ದಾಖಲೆ ಬರೆಯಲು ಅರ್ಜೆಂಟೀನಾ ಸಜ್ಜುಆಯುಷ್ | ಕಾಯಂ ತಜ್ಞ ವೈದ್ಯರ ಹುದ್ದೆ ಸೃಜಿಸಿ: ಸರ್ಕಾರಕ್ಕೆ ವೈದ್ಯರ ಸಂಘ ಮನವಿ

ಈ ಮಹಾಕಾವ್ಯ ಆಧಾರಿತ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡರೆ, ನಟ, ರಾಕಿಂಗ್ ಸ್ಟಾರ್ ಯಶ್ ಲಂಕಾಧಿಪತಿ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ.

ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ವಿಎಫ್‌ಎಕ್ಸ್ ಸಂಸ್ಥೆ ಡಿಎನ್‌ಇಜಿ ಹಾಗೂ ಯಶ್ ಒಡೆತನದ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿವೆ

Dailyhunt
Disclaimer: This content has not been generated, created or edited by Dailyhunt. Publisher: Prajavani