Dailyhunt Logo
  • Light mode
    Follow system
    Dark mode
    • Play Story
    • App Story
ಉದ್ಯಾನ ಭೂಮಿಯ ಶೇ 5ರಷ್ಟು ಬಳಕೆಗೆ ಅವಕಾಶ: ಸುರಂಗ ರಸ್ತೆ ಯೋಜನೆಗೆ ದಾರಿ?

ಉದ್ಯಾನ ಭೂಮಿಯ ಶೇ 5ರಷ್ಟು ಬಳಕೆಗೆ ಅವಕಾಶ: ಸುರಂಗ ರಸ್ತೆ ಯೋಜನೆಗೆ ದಾರಿ?

ಬೆಂಗಳೂರು: ಉದ್ಯಾನಗಳು ಮತ್ತು ತೋಟಗಳ ಒಟ್ಟು ವಿಸ್ತೀರ್ಣದ ಗರಿಷ್ಠ ಶೇ 5ರಷ್ಟು ಭೂಮಿಯನ್ನು ಸಾರ್ವಜನಿಕ ಮೂಲಭೂತಸೌಕರ್ಯ ಯೋಜನೆಗಳಿಗೆ ಬಳಸಲು ಅವಕಾಶ ಕಲ್ಪಿಸುವ ಕರ್ನಾಟಕ ಸರ್ಕಾರದ ಉದ್ಯಾನವನಗಳ (ಸಂರಕ್ಷಣೆ) ಕಾಯ್ದೆ-1975ರ ತಿದ್ದುಪಡಿ ಮಸೂದೆಯನ್ನು ವಿಧಾನಸಭೆ ಸೋಮವಾರ ಯಾವುದೇ ಚರ್ಚೆ ಇಲ್ಲದೆ ಅಂಗೀಕರಿಸಿತು.

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದಾಗಲೇ ಮಸೂದೆಯನ್ನು ಅಂಗೀಕರಿಸಿ, ಅನುಮೋದನೆ ಪಡೆದುಕೊಂಡಿದೆ.

ಸುರಂಗ ರಸ್ತೆ ಯೋಜನೆಗೆ ಖಂಡನೆ: ಲಾಲ್‌ಬಾಗ್‌ ಉಳಿಸಲು ಚಿಣ್ಣರ ಸಾಥ್

ಈ ಕಾಯ್ದೆಯ ವ್ಯಾಪ್ತಿಯಲ್ಲಿ ಬೆಂಗಳೂರಿನ ಪ್ರಮುಖ ಹಸಿರು ತಾಣಗಳಾದ ಲಾಲ್‌ಬಾಗ್‌ ಮತ್ತು ಕಬ್ಬನ್‌ ಪಾರ್ಕ್‌ ಕೂಡ ಸೇರಿವೆ. ಈ ಮಸೂದೆಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು. ಇದೀಗ ವಿಧಾನಸಭೆಯಲ್ಲೂ ಅಂಗೀಕಾರಗೊಂಡಿರುವುದರಿಂದ ಉದ್ಯಾನ ಭೂಮಿಯನ್ನು ನಿರ್ದಿಷ್ಟ ಸಾರ್ವಜನಿಕ ಉದ್ದೇಶಗಳಿಗೆ ಬಳಸಲು ಕಾನೂನುಬದ್ಧ ಅವಕಾಶ ಸಿಕ್ಕಂತಾಗಿದೆ.

ಮಸೂದೆಯಲ್ಲಿ ಏನಿದೆ?

ಮಸೂದೆಯ ಪ್ರಕಾರ, ಉದ್ಯಾನವನ ಅಥವಾ ತೋಟದ ಒಟ್ಟು ವಿಸ್ತೀರ್ಣದ ಗರಿಷ್ಠ ಶೇ 5ರಷ್ಟು ಭೂಮಿಯನ್ನು ಮಾರಾಟ, ಗೇಣಿ, ಕೊಡುಗೆ, ವಿನಿಮಯ, ಅಡಮಾನ ಅಥವಾ ಇತರ ಯಾವುದೇ ರೀತಿಯಲ್ಲಿ ಪರಭಾರೆ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶವಿರಲಿದೆ.

ಆದರೆ ಎಲ್ಲಾ ರೀತಿಯ ಯೋಜನೆಗಳಿಗೆ ಈ ಭೂಮಿ ಬಳಸಲು ಅವಕಾಶ ಇಲ್ಲ. ಸರ್ಕಾರಿ ಇಲಾಖೆಗಳು, ಶಾಸನಬದ್ಧ ಪ್ರಾಧಿಕಾರಗಳು, ಸರ್ಕಾರಿ ಕಂಪನಿಗಳು ಅಥವಾ ಸಾರ್ವಜನಿಕ ಯೋಜನೆಗಳಿಗಾಗಿ ಸ್ಥಳೀಯ ಪ್ರಾಧಿಕಾರಗಳ ಪರವಾಗಿ ಮಾತ್ರ ಭೂಮಿಯನ್ನು ಬಳಸಬಹುದಾಗಿದೆ.

ರಸ್ತೆ, ಸುರಂಗ ಸೇರಿದಂತೆ ಸಾರ್ವಜನಿಕ ಮೂಲಭೂತ ಸೌಕರ್ಯಯೋಜನೆಗಳಿಗೆ ಈ ಅವಕಾಶ ಅನ್ವಯಿಸಲಿದೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಉದ್ಯಾನ ಭೂಮಿಯ ಶೇ 5ರಷ್ಟು ಬಳಕೆಗೆ ಅವಕಾಶ: ಸುರಂಗ ರಸ್ತೆ ಯೋಜನೆಗೆ ದಾರಿ?

ಒಂದು ಸಾಲಿನಲ್ಲಿಕರ್ನಾಟಕ ಸರ್ಕಾರದ ಹೊಸ ಕಾಯ್ದೆ ತಿದ್ದುಪಡಿಯು ಸಾರ್ವಜನಿಕ ಮೂಲಭೂತ ಸೌಕರ್ಯ ಯೋಜನೆಗಳಿಗಾಗಿ ಉದ್ಯಾನವನಗಳ ಶೇ 5ರಷ್ಟು ಭೂಮಿಯನ್ನು ಬಳಸಲು ಕಾನೂನುಬದ್ಧ ಅವಕಾಶ ಕಲ್ಪಿಸಿದೆ.

ಏನು? ಏಕೆ? ಹೇಗೆ?


ಹೊಸ ತಿದ್ದುಪಡಿಯ ಮುಖ್ಯ ಉದ್ದೇಶವೇನು?

ಉದ್ಯಾನವನಗಳು ಮತ್ತು ತೋಟಗಳ ಒಟ್ಟು ವಿಸ್ತೀರ್ಣದ ಗರಿಷ್ಠ ಶೇ 5ರಷ್ಟು ಭೂಮಿಯನ್ನು ರಸ್ತೆ ಹಾಗೂ ಸುರಂಗ ಮಾರ್ಗದಂತಹ ಸಾರ್ವಜನಿಕ ಮೂಲಭೂತ ಸೌಕರ್ಯಗಳಿಗಾಗಿ ಬಳಸಲು ಸರ್ಕಾರ ಅನುಮತಿ ನೀಡಿದೆ.


ಈ ಭೂಮಿಯನ್ನು ಎಲ್ಲಿ ಬಳಸಬಹುದು?

ಈ ಭೂಮಿಯನ್ನು ಸರ್ಕಾರಿ ಇಲಾಖೆಗಳು, ಶಾಸನಬದ್ಧ ಪ್ರಾಧಿಕಾರಗಳು ಅಥವಾ ಸರ್ಕಾರಿ ಕಂಪನಿಗಳ ಸಾರ್ವಜನಿಕ ಯೋಜನೆಗಳಿಗಾಗಿ ಮಾತ್ರ ಬಳಸಲು ಅವಕಾಶವಿದ್ದು, ಇದನ್ನು ಮಾರಾಟ ಅಥವಾ ಅಡಮಾನ ಇಡಲು ಅವಕಾಶವಿರುತ್ತದೆ.


ಯೋಜನೆಗಳ ಮೌಲ್ಯಮಾಪನ ಹೇಗೆ ನಡೆಯುತ್ತದೆ?

ಭೂ ಬಳಕೆಯ ಪ್ರಸ್ತಾವನೆಯನ್ನು ನೇರವಾಗಿ ಅನುಮೋದಿಸುವ ಬದಲು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯು ತಜ್ಞರ ಸಲಹೆಯೊಂದಿಗೆ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತದೆ.


ಈ ಕಾಯ್ದೆಯಿಂದ ಉದ್ಯಾನಗಳಿಗೆ ಆಗುವ ಪರಿಣಾಮವೇನು?

ಪರಿಸರವಾದಿಗಳು ಮತ್ತು ಪ್ರತಿಪಕ್ಷಗಳು ಈ ಕ್ರಮದಿಂದ ಬೆಂಗಳೂರಿನ ಹಸಿರು ತಾಣಗಳಾದ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ಗಳ ಪರಿಸರ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


ಹಿಂದಿನ ಭೂ ಬಳಕೆಯನ್ನು ಹೇಗೆ ಪರಿಗಣಿಸಲಾಗುತ್ತದೆ?

ಶೇ 5ರ ಮಿತಿಯು ಕೇವಲ ಹೊಸ ಯೋಜನೆಗಳಿಗೆ ಮಾತ್ರವಲ್ಲದೆ, ಈ ಹಿಂದೆ ಪರಭಾರೆ ಮಾಡಲಾದ ಭೂಮಿಯನ್ನೂ ಒಳಗೊಂಡಂತೆ ಲೆಕ್ಕಹಾಕಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಪ್ರಮುಖ ಅಂಕಿಅಂಶಗಳು

ಶೇ 5ಉದ್ಯಾನ ಭೂಮಿಯ ಬಳಕೆಗೆ ನಿಗದಿಪಡಿಸಿದ ಗರಿಷ್ಠ ಮಿತಿ1975ಉದ್ಯಾನವನಗಳ (ಸಂರಕ್ಷಣೆ) ಕಾಯ್ದೆ ಜಾರಿಯಾದ ವರ್ಷ7ಕಾಯ್ದೆಗೆ ಈವರೆಗೆ ಮಾಡಲಾದ ಒಟ್ಟು ತಿದ್ದುಪಡಿಗಳು

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ ಯೋಜನೆಗೆ ಖಂಡನೆ: ಬಂಡೆ ತಬ್ಬಿ ಪ್ರತಿರೋಧ

ನಿರ್ಧಾರಕ್ಕೂ ಮುನ್ನ ತಜ್ಞರ ಮೌಲ್ಯಮಾಪನ

ಉದ್ಯಾನ ಭೂಮಿಯನ್ನು ಬಳಸುವ ಯಾವುದೇ ಪ್ರಸ್ತಾವನೆಯನ್ನು ನೇರವಾಗಿ ಅನುಮೋದಿಸುವ ಬದಲು, ಅದನ್ನು ಪರಿಶೀಲಿಸಲು ಅಧಿಕೃತ ಮೌಲ್ಯಮಾಪನ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ, ನಿಯೋಜಿತ ಅಧಿಕಾರಿಗಳು ಹಾಗೂ ಸಂಬಂಧಿತ ಕ್ಷೇತ್ರದ ತಜ್ಞರನ್ನು ಒಳಗೊಂಡ ಸಮಿತಿಯು ಪ್ರಸ್ತಾವಿತ ಭೂ ಬಳಕೆಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಈ ಮೌಲ್ಯಮಾಪನದ ಬಳಿಕವೇ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂಬ ಅಂಶವನ್ನು ಮಸೂದೆಯಲ್ಲಿ ಸೇರಿಸಲಾಗಿದೆ.

ಸುರಂಗ ರಸ್ತೆ ಯೋಜನೆ ಬೇಡ: ಲಾಲ್‌ಬಾಗ್‌ ನಾಶಗೊಳಿಸಲು ಬಿಡೆವು, ಮಾನವ ಸರಪಳಿ

ಈಗಾಗಲೇ ಬಳಸಿದ ಭೂಮಿಯೂ ಶೇ 5ರ ಮಿತಿಯೊಳಗೆ

ಶೇ 5ರ ಮಿತಿಯು ಮುಂದಿನ ದಿನಗಳಲ್ಲಿ ಪರಭಾರೆ ಮಾಡುವ ಭೂಮಿಗೆ ಮಾತ್ರ ಅನ್ವಯಿಸುವುದಿಲ್ಲ. ಈ ಹಿಂದೆ ಪರಭಾರೆ ಮಾಡಲಾಗಿರುವ ಭೂಮಿಯನ್ನೂ ಈ ಮಿತಿಯೊಳಗೆ ಪರಿಗಣಿಸಲಾಗುತ್ತದೆ. ಇದರ ಉದ್ದೇಶ ಉದ್ಯಾನಗಳಲ್ಲಿರುವ ಉಳಿದ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ರಕ್ಷಿಸುವುದು ಎಂದು ಸರ್ಕಾರ ಹೇಳಿದೆ.

ಇದೇ ವೇಳೆ, ತೋಟಗಾರಿಕೆ ಇಲಾಖೆಯು ತನ್ನ ಆಡಳಿತಾತ್ಮಕ ಹಾಗೂ ಸಂಬಂಧಿತ ಅಗತ್ಯಗಳಿಗಾಗಿ ಕೈಗೊಳ್ಳುವ ಸಾಮಾನ್ಯ ಅಭಿವೃದ್ಧಿ ಕಾಮಗಾರಿಗಳನ್ನು ಈ ಶೇ 5ರ ನಿರ್ಬಂಧದಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ.

ಲಾಲ್ ಬಾಗ್ ಬಂಡೆ ಕೊರೆದು ಸುರಂಗ ಮಾಡುವ ಅಗತ್ಯವಿಲ್ಲ: ಸರ್ಕಾರಕ್ಕೆ ವಾಕರ್ಸ್ ಮನವಿ

ತೋಟಗಾರಿಕೆ ಯೋಜನೆಗಳಿಗೂ ಅವಕಾಶ

ತೋಟಗಾರಿಕೆ ಫಾರಂಗಳಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ಅತ್ಯಂತ ಕನಿಷ್ಠ ಭೂಮಿಯನ್ನು ಬಳಸಿಕೊಳ್ಳಲು ಮಸೂದೆ ಅವಕಾಶ ನೀಡುತ್ತದೆ. ಇದರಲ್ಲಿ ಕೊಯ್ಲೋತ್ತರ ಸಂಸ್ಕರಣಾ ಘಟಕಗಳು, ಶೀತಲ ಶೇಖರಣಾ ಘಟಕಗಳು, ಸುಧಾರಿತ ತಳಿಗಳ ಉತ್ಪಾದನೆ ಹಾಗೂ ಸ್ಥಳೀಯ ರೈತ ಸಮುದಾಯಕ್ಕೆ ನೇರವಾಗಿ ಪ್ರಯೋಜನ ನೀಡುವ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಸಂಬಂಧಿಸಿದ ಸೌಲಭ್ಯಗಳು ಸೇರಿವೆ.

ಆದರೆ ಇಂತಹ ಬಳಕೆಗೆ ಸಾರ್ವಜನಿಕ ಹಿತಾಸಕ್ತಿ ಮತ್ತು ಯೋಜನೆಯ ಅಗತ್ಯತೆಯನ್ನು ಸಮರ್ಥಿಸುವ ದಾಖಲಿತ ಕಾರಣಗಳು ಇರಬೇಕು ಎಂಬ ಷರತ್ತನ್ನೂ ಸೇರಿಸಲಾಗಿದೆ.

ಏಳು ಬಾರಿ ತಿದ್ದುಪಡಿ ಕಂಡಿರುವ ಕಾಯ್ದೆ

ಕರ್ನಾಟಕ ಸರ್ಕಾರದ ಉದ್ಯಾನವನಗಳ (ಸಂರಕ್ಷಣೆ) ಕಾಯ್ದೆ-1975ರ ಮೂಲ ಉದ್ದೇಶ ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ನಂತಹ ಉದ್ಯಾನಗಳನ್ನು ಸಂರಕ್ಷಿಸುವುದಾಗಿತ್ತು. ಕಾಯ್ದೆಯ ಸೆಕ್ಷನ್‌ 4ರಡಿ ಉದ್ಯಾನಗಳನ್ನು ತೋಟಗಾರಿಕಾ ಉದ್ಯಾನಗಳಾಗಿ ಸಂರಕ್ಷಿಸಿ ನಿರ್ವಹಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿತ್ತು.

ಕಳೆದ ಐದು ದಶಕಗಳಲ್ಲಿ ಕಾಯ್ದೆಗೆ 1976, 1982, 2003, 2010, 2011, 2013 ಮತ್ತು 2024ರಲ್ಲಿ ಒಟ್ಟು ಏಳು ಬಾರಿ ತಿದ್ದುಪಡಿ ಮಾಡಲಾಗಿದೆ.

ಹಿಂದಿನ ತಿದ್ದುಪಡಿಗಳಲ್ಲಿ ಲಾಲ್‌ಬಾಗ್‌ನಲ್ಲಿ ರಸ್ತೆ ವಿಸ್ತರಣೆ ಮತ್ತು ಮೆಟ್ರೊ ಕಾಮಗಾರಿಗೆ, ಕಬ್ಬನ್‌ ಪಾರ್ಕ್‌ನಲ್ಲಿ ವಾಹನ ನಿಲುಗಡೆಗೆ, ವಿಧಾನಸೌಧ-ವಿಕಾಸಸೌಧಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಹಾಗೂ ನಂದಿ ಬೆಟ್ಟದ ರೋಪ್‌ವೇ ಯೋಜನೆಗೆ ಪ್ರತ್ಯೇಕ ಅವಕಾಶಗಳನ್ನು ಕಲ್ಪಿಸಲಾಗಿತ್ತು.

ಇದೀಗದ ತಿದ್ದುಪಡಿಯ ಪ್ರಮುಖ ಬದಲಾವಣೆ ಎಂದರೆ, ನಿರ್ದಿಷ್ಟ ಯೋಜನೆಗಷ್ಟೇ ಅವಕಾಶ ನೀಡುವ ಬದಲು, ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ಉದ್ಯಾನ ಭೂಮಿಯ ಶೇ 5ರವರೆಗೆ ಬಳಸಲು ಅನುವು ಮಾಡಿಕೊಡುತ್ತದೆ.

ಬೆಂಗಳೂರಿನಲ್ಲಿ ಲಾಲ್‌ಬಾಗ್ ಮಾದರಿ 3 ಉದ್ಯಾನ ನಿರ್ಮಾಣಕ್ಕೆ ಚಿಂತನೆ

ಸುರಂಗ ರಸ್ತೆ ಯೋಜನೆ ಹಿನ್ನೆಲೆಯಲ್ಲಿ ಚರ್ಚೆ

ಬೆಂಗಳೂರಿನ ಹೆಬ್ಬಾಳ-ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ನಡುವಿನ ಪ್ರಸ್ತಾವಿತ ಸುರಂಗ ರಸ್ತೆ ಯೋಜನೆಗೆ ಲಾಲ್‌ಬಾಗ್‌ನ ಸುಮಾರು ಆರು ಎಕರೆ ಭೂಮಿ ತಾತ್ಕಾಲಿಕವಾಗಿ ಹಾಗೂ ಒಂದು ಎಕರೆ ಭೂಮಿ ಶಾಶ್ವತವಾಗಿ ಅಗತ್ಯವಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಮಸೂದೆಗೆ ವಿಶೇಷ ಮಹತ್ವ ಬಂದಿದೆ.

ಸರ್ಕಾರದ ಕ್ರಮಕ್ಕೆ ಪರಿಸರವಾದಿಗಳು ಮತ್ತು ನಾಗರಿಕ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದ್ದು, ಉದ್ಯಾನಗಳನ್ನು ಅಭಿವೃದ್ಧಿ ಯೋಜನೆಗಳಿಗಾಗಿ ಬಳಸುವ ಸಾಮಾನ್ಯ ವ್ಯವಸ್ಥೆ ರೂಪಿಸುವುದರಿಂದ ಭವಿಷ್ಯದಲ್ಲಿ ಇಂತಹ ಭೂ ಬಳಕೆಗೆ ದಾರಿ ಮತ್ತಷ್ಟು ಸುಲಭವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ವಿರೋಧ ಪಕ್ಷ ಬಿಜೆಪಿ ಕೂಡ ಮಸೂದೆಯನ್ನು ಟೀಕಿಸಿದ್ದು, ಬೆಂಗಳೂರಿನ ಹಸಿರು ಪ್ರದೇಶಗಳ ಸಂರಕ್ಷಣೆಯನ್ನು ದುರ್ಬಲಗೊಳಿಸುವ ಕ್ರಮ ಎಂದು ಆರೋಪಿಸಿದೆ.

ಸಾರ್ವಜನಿಕ ಮೂಲಭೂತ ಸೌಕರ್ಯಕ್ಕೆ ಅಗತ್ಯವಾದ ಭೂಮಿ ಒದಗಿಸುವುದು ಮತ್ತು ನಗರದ ಉಳಿದ ಹಸಿರು ಪ್ರದೇಶಗಳನ್ನು ರಕ್ಷಿಸುವುದು ಈ ಎರಡನ್ನೂ ಸರ್ಕಾರ ಹೇಗೆ ನಿಭಾಯಿಸುತ್ತದೆ ಎಂದು ಕಾದು ನೋಡಬೇಕಿದೆ.

ಲಾಲ್‌ಬಾಗ್ ಪ್ರವೇಶಕ್ಕೆ ಮತ್ತೊಂದು ಗೇಟ್‌|ಪರಿಸರಕ್ಕೆ ಧಕ್ಕೆ: ವಾಯುವಿಹಾರಿಗಳ ದೂರು
Dailyhunt
Disclaimer: This content has not been generated, created or edited by Dailyhunt. Publisher: Prajavani