ಅಯೋಧ್ಯೆಯ ರಾಮ ಮಂದಿರದಲ್ಲಿ ಭಕ್ತರ ಕಾಣಿಕೆ ಹಾಗೂ ದೇಣಿಗೆ ಕಳ್ಳತ ಆರೋಪ ದೇಶಾದ್ಯಂತ ಆಘಾತ ಉಂಟುಮಾಡಿದೆ. ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯ ಮಾಜಿ ಚಾಲಕನೂ ಸೇರಿದ್ದಾನೆ.
ಈ ಘಟನೆಯು ದೇವಸ್ಥಾನಗಳ ದಾನ ವ್ಯವಸ್ಥೆಯಲ್ಲಿನ ದೌರ್ಬಲ್ಯಗಳನ್ನು ಬಯಲಿಗೆಳೆದಿದೆ. ವಿಶೇಷ ತನಿಖಾ ತಂಡದ ಪ್ರಾಥಮಿಕ ವರದಿಯು ಹಲವಾರು ಗಂಭೀರ ನ್ಯೂನತೆಗಳನ್ನು ಪತ್ತೆ ಮಾಡಿದೆ.
ವಿವೇಕ್ ತೋಂಟದಾರ್ಯ ಲೇಖನ: ವೆಚ್ಚವೋ, ಹೂಡಿಕೆಯೋ? ಕಲ್ಯಾಣ ಯೋಜನೆಗಳ ಅರ್ಥಶಾಸ್ತ್ರದೇವಸ್ಥಾನಗಳ ಸಂಪತ್ತು, ದುರುಪಯೋಗ
ರಾಮ ಮಂದಿರದ ವಾರ್ಷಿಕ ಆದಾಯವು 2505-26ಲ್ಲಿ ಸುಮಾರು ₹220.81 ಕೋಟಿ ಇತ್ತು. ಇದರಲ್ಲಿ ಹುಂಡಿ ಕಾಣಿಕೆಗಳಿಂದ ₹54.79 ಕೋಟಿ ಸಂಗ್ರಹವಾಗಿದೆ. ಪ್ರತಿದಿನ 70-80 ಸಾವಿರ ಭಕ್ತರು ಮಂದಿರಕ್ಕೆ ಭೇಟಿ ನೀಡುತ್ತಾರೆ. ಸುಮಾರು 25 ಹುಂಡಿಗಳಲ್ಲಿ ಸಂಗ್ರಹವಾಗುವ ಕಾಣಿಕೆಗಳನ್ನು ಎಣಿಸುವ ಜವಾಬ್ದಾರಿ ಹೊಂದಿದ್ದ ಆರೋಪಿಗಳು, 1250 ಕೆ.ಜಿ ಚಿನ್ನ, 70 ಕೆಜಿ ಬೆಳ್ಳಿ, ₹200 ಕೋಟಿ ನಗದು ಸೇರಿದಂತೆ ಅಪಾರ ಮೌಲ್ಯದ ವಸ್ತುಗಳ ಮೇಲೆ ಕಣ್ಣಿಟ್ಟಿದ್ದರು.
ಎಸ್‌ಐಟಿ ವರದಿಯಲ್ಲಿ ಏನಿದೆ?
ಹುಂಡಿಗಳ ಕೀಲಿಗಳು ಆರೋಪಿಗಳ ಬಳಿ ಯಾವುದೇ ಔಪಚಾರಿಕ ಅನುಮತಿಯಿಲ್ಲದೆ ಇದ್ದವು.
ದಾನ ಎಣಿಕೆ ಪ್ರಕ್ರಿಯೆಯಲ್ಲಿ ಭದ್ರತಾ ಸಿಬ್ಬಂದಿಯ ಕೊರತೆ.
180 ದಿನಗಳವರೆಗೆ ಸಿಸಿಟಿವಿ ದೃಶ್ಯಗಳನ್ನು ಸಂರಕ್ಷಿಸಬೇಕಿತ್ತು, ಆದರೆ ಕೇವಲ ೪೫ ದಿನಗಳ ದೃಶ್ಯಗಳನ್ನು ಮಾತ್ರ ಸಂರಕ್ಷಿಸಲಾಗಿತ್ತು.
ಆರೋಪಿಗಳು ಕಳ್ಳತನದ ಹಣವನ್ನು ತಮ್ಮ ಸಂಬಂಧಿಕರ ಬ್ಯಾಂಕ್ ಖಾತೆಗಳ ಮೂಲಕ ಅಕ್ರಮವಾಗಿ ವರ್ಗಾಯಿಸಿದ್ದಾರೆ. ಕೆಲವು ಹಣವನ್ನು ಷೇರು ಮಾರುಕಟ್ಟೆಯಲ್ಲೂ ಹೂಡಿಕೆ ಮಾಡಲಾಗಿತ್ತು. 2025ರ ಮಹಾಕುಂಭದ ಸಮಯದಲ್ಲಿ ಹೆಚ್ಚಿನ ಪ್ರಮಾಣದ ದಾನ ಸಂಗ್ರಹವಾದಾಗ ಈ ಕಳ್ಳತನ ಹೆಚ್ಚಾಗಿದೆ ಎಂದು ಶಂಕಿಸಲಾಗಿದೆ.
ಅಯೋಧ್ಯೆ: ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವಕ್ಕೆ ₹113 ಕೋಟಿ ವೆಚ್ಚಬೇರೆ ಪ್ರಕರಣಗಳು
ಅಯೋಧ್ಯೆ ಮಾತ್ರವಲ್ಲ, ದೇಶದ ಇತರ ಪ್ರಮುಖ ದೇವಸ್ಥಾನಗಳಲ್ಲೂ ಈ ರೀತಿಯ ದುರುಪಯೋಗಗಳು ನಡೆದಿವೆ.
ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನ: ಒಬ್ಬ ಕೆಳಹಂತದ ಗುಮಾಸ್ತ, ರವಿ ಕುಮಾರ್, 20 ವರ್ಷ ಹುಂಡಿ ದಾನಗಳಿಂದ ₹100 ಕೋಟಿಗೂ ಹೆಚ್ಚು ಹಣವನ್ನು ಕದ್ದಿದ್ದಾನೆ. ತಿರುಪತಿ, ಚೆನ್ನೈ, ಹೈದರಾಬಾದ್‌ನಲ್ಲಿ ಅನೇಕ ಆಸ್ತಿಗಳನ್ನು ಖರೀದಿಸಿದ್ದಾನೆ. ಕಳ್ಳತನವು ಬೆಳಕಿಗೆ ಬಂದಾಗ, ವಶಪಡಿಸಿಕೊಂಡ ಆಸ್ತಿಗಳು ₹14 ಕೋಟಿಯಿಂದ ₹140 ಕೋಟಿಗೆ ಏರಿಕೆಯಾಗಿದ್ದವು. ಆದಾಗ್ಯೂ, ಈ ಪ್ರಕರಣವನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿದ್ದು, ಆರೋಪಿಗೆ ಯಾವುದೇ ಶಿಕ್ಷೆಯಾಗಿಲ್ಲ.
ಆಂಧ್ರಪ್ರದೇಶ ಹೈಕೋರ್ಟ್ ಈಗ ಈ ಪ್ರಕರಣದ ಸಿಐಡಿ ತನಿಖೆಗೆ ಆದೇಶಿಸಿದೆ.
ಇದೇ ದೇವಸ್ಥಾನದಲ್ಲಿ ಗುತ್ತಿಗೆ ಉದ್ಯೋಗಿ ವಿ. ಪೆಂಚಲಯ್ಯ ಅವರು 650 ಗ್ರಾಂ ಚಿನ್ನವನ್ನು (ಸುಮಾರು ₹46 ಲಕ್ಷ ಮೌಲ್ಯ) ಕದ್ದಿದ್ದಾರೆ.
ಟಿಟಿಡಿ ಉದ್ಯೋಗಿಯೊಬ್ಬ ₹ 90 ಸಾವಿರ ಕಳ್ಳತನ ಮಾಡಿದ್ದಾನೆ.
ಬೆಂಗಳೂರಿನ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ: ಹುಂಡಿ ಎಣಿಕೆಯ ಸಮಯದಲ್ಲಿ ಸಿಬ್ಬಂದಿ ಕಳ್ಳತನ ಮಾಡುವ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಹೀಗಾಇ 1997ರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯಗಳ ಕಾಯ್ದೆಯಡಿ ದೇವಸ್ಥಾನವನ್ನು ಸರ್ಕಾರವು ವಶಪಡಿಸಿಕೊಂಡಿತು. ಕರ್ನಾಟಕ ಹೈಕೋರ್ಟ್ ಸರ್ಕಾರದ ಈ ಕ್ರಮಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.
ಬೇಲೂರು ಹುಂಡಿ ಕಳ್ಳತನ: ಬೇಲೂರಿನ ದೇವಸ್ಥಾನದ ಹುಂಡಿಯಿಂದ ₹1.98ಲಕ್ಷ ಕಳ್ಳತನ ಮಾಡಿದ ವಿಡಿಯೋಗ್ರಾಫರ್ ಬಂಧನ.
ಮಧ್ಯಪ್ರದೇಶದ ದೇವಸ್ಥಾನಗಳು (2025): ಮಧ್ಯಪ್ರದೇಶದ ದೇವಸ್ಥಾನಗಳಿಗೆ ₹250 ಕೋಟಿಗೂ ಹೆಚ್ಚು ದಾನಗಳು ಬಂದಿವೆ. ಮಹಾಕಾಲೇಶ್ವರ ದೇವಸ್ಥಾನಕ್ಕೆ ₹168 ಕೋಟಿ, ಓಂಕಾರೇಶ್ವರ ದೇವಸ್ಥಾನದಲ್ಲಿ ₹25 ಕೋಟಿ ಸಂಗ್ರಹವಾಗಿದೆ. ಈ ದೇವಸ್ಥಾನಗಳಲ್ಲಿ ದಾಖಲೆ ನಿರ್ವಹಣೆಯಲ್ಲಿ ಅಕ್ರಮಗಳು ಪತ್ತೆಯಾಗಿವೆ.
ಅಯೋಧ್ಯೆ ಬೆನ್ನಲ್ಲೇ ಬದರಿನಾಥದಲ್ಲೂ ದೇಣಿಗೆ ದುರುಪಯೋಗ ಆರೋಪ: ತನಿಖೆಗೆ ಆದೇಶದೇವಸ್ಥಾನಗಳ ದಾನ ದುರುಪಯೋಗದ ವಿಧಾನಗಳು
ವಿವಿಧ ದೇವಸ್ಥಾನಗಳಲ್ಲಿ ನಡೆದ ದುರುಪಯೋಗದ ಪ್ರಕರಣಗಳು ಒಂದೇ ರೀತಿಯ ಮಾದರಿಯನ್ನು ತೋರಿಸುತ್ತವೆ:
ಕಡಿಮೆ ದಾಖಲು: ದಾನದ ಹಣವನ್ನು ಪುಸ್ತಕದಲ್ಲಿ ಕಡಿಮೆ ದಾಖಲಿಸುವುದು.
ಬದಲಿ ವಂಚನೆ: ಚಿನ್ನ, ವಜ್ರಗಳನ್ನು ನಕಲಿ ಆಭರಣಗಳಿಂದ ಬದಲಾಯಿಸುವುದು.
ಕಣ್ಮರೆ: ದಾನದ ವಸ್ತುಗಳನ್ನು ಕಾಣೆಯಾಗಿದೆ ಎಂದು ತೋರಿಸುವುದು.
ಆಂತರಿಕ ಪಿತೂರಿ: ದಾನ ಎಣಿಕೆಯಲ್ಲಿ ತೊಡಗಿರುವ ಸಿಬ್ಬಂದಿಯೇ ಕಳ್ಳತನ ಮಾಡುವುದು.
ಬ್ಯಾಂಕ್ ಮೋಸ: ಕಳ್ಳತನದ ಹಣವನ್ನು ಸಂಬಂಧಿಕರ ಖಾತೆಗಳ ಮೂಲಕ ವರ್ಗಾಯಿಸುವುದು.
ದೇವಸ್ಥಾನಗಳ ಸಂಪತ್ತು ನಿಷ್ಕ್ರಿಯವಾಗಿರುವುದು ಸರಿಯೇ?
ದೇವಸ್ಥಾನಗಳಲ್ಲಿ ಸಂಗ್ರಹವಾಗಿರುವ ಸಂಪತ್ತು ಅಗಾಧ ಪ್ರಮಾಣದಲ್ಲಿದೆ. ಅಂದಾಜು 2500-4,000 ಟನ್ ಚಿನ್ನ ದೇವಸ್ಥಾನಗಳಲ್ಲಿದೆ. ತಿರುಪತಿ ದೇವಸ್ಥಾನದ ಟ್ರಸ್ಟ್ (ಟಿಟಿಡಿ) ಠೇವಣಿಗಳು ₹18,817 ಕೋಟಿಗೆ ತಲುಪಿವೆ. ಈ ಅಗಾಧ ಸಂಪತ್ತು ಬ್ಯಾಂಕುಗಳಲ್ಲಿ ಬೀಗ ಹಾಕಿಟ್ಟಂತೆ ನಿಷ್ಕ್ರಿಯವಾಗಿದೆ. ದಾನಗಳು ವರ್ಷಗಳ ಕಾಲ ಸಂಗ್ರಹವಾಗಿ ಬಿದ್ದು, ಸಮಾಜಕ್ಕೆ ಯಾವುದೇ ಪ್ರಯೋಜನವಾಗದೆ ಇರುವುದು ಸರಿಯಲ್ಲ. ಈ ಆಲೋಚನೆಗೆ ಬಲವಾದ ಆರ್ಥಿಕ, ಕಾನೂನು ಮತ್ತು ಸಾಮಾಜಿಕ ಕಾರಣಗಳಿವೆ.
ಈ ಹಣವನ್ನು ಸಮಾಜ ಕಲ್ಯಾಣಕ್ಕೆ (ವೃದ್ದಾಶ್ರಮ, ಬಡವರಿಗೆ ಉಚಿತ ಮನೆ, ಹಿಂದುಳಿದ ಜನಾಂಗದವರಿಗೆ ಕೌಶಲ್ಯಾಭಿರುದ್ಧಿ ಸಂಜೆ ಶಾಲೆ / ಕಾಲೇಜು, ಉಚಿತ ಆಸ್ಪತ್ರೆ, ಮೂಲಸೌಕರ್ಯ) ಬಳಸಿದ್ದರೆ ಎಷ್ಟು ಪ್ರಯೋಜನವಾಗುತ್ತಿತ್ತು? ಆಗ ಭಾರತ ರಾಮರಾಜ್ಯ ಆಗುತಿತ್ತು ಅಲ್ಲವೇ? ಇದು ಕೇವಲ 'ಕಳೆದುಹೋದ ಲಾಭ' ಅಲ್ಲ, ಸಮಾಜದ ಅಭಿವೃದ್ಧಿಗೆ ಕಳೆದುಕೊಂಡ ಅವಕಾಶ.
ಪದ್ಮನಾಭಸ್ವಾಮಿ ದೇವಸ್ಥಾನದ ನಿಧಿಯು ಶತಮಾನಗಳಿಂದ ಬಳಕೆಯಾಗದೆ ಇದ್ದುದು ಇದಕ್ಕೆ ಉದಾಹರಣೆ.
ಕಾನೂನು ಮತ್ತು ನೈತಿಕತೆ
ದೇವಸ್ಥಾನಗಳು ಸಾರ್ವಜನಿಕ ಟ್ರಸ್ಟ್‌ಗಳು ಅವುಗಳ ಸಂಪತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಬಳಕೆಯಾಗಬೇಕು. ಟ್ರಸ್ಟ್ ನಿಧಿಗಳು ನಿಷ್ಕ್ರಿಯವಾಗಿ ಬಿದ್ದಿರುವುದು ಸಮಾಜದ ವಿರುದ್ಧದ ಅಪರಾಧ. ಹೆಚ್ಚುವರಿ ನಿಧಿಯನ್ನು ಸಂಗ್ರಹಿಸಿಡಬಾರದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ
'ದೇವರಿಗಾಗಿ' ಎಂದು ದಾನ ಮಾಡಿದ ಸಂಪತ್ತು ಸಮಾಜದ ಏಳಿಗೆಗೆ ಬಳಸುವುದು ನಿಜವಾದ ಧಾರ್ಮಿಕ ಕರ್ತವ್ಯ.
ಮಹಾ ಕುಂಭಮೇಳದ ಸಮಯದಲ್ಲಿ ಅಯೋಧ್ಯೆ ದೇಣಿಗೆ ಹಣದ ಗರಿಷ್ಠ ಲೂಟಿ: ಸ್ಫೋಟಕ ವರದಿ'ಕಲ್ಯಾಣ ರಾಜ್ಯ'ದ ಸಾಂವಿಧಾನಿಕ ದೃಷ್ಟಿಕೋನ
ಭಾರತವು 'ಕಲ್ಯಾಣ ರಾಜ್ಯ' ಆಗಿದ್ದು, ನಾಗರಿಕರ ಏಳಿಗೆಯೇ ಸರ್ಕಾರದ ಗುರಿ. ದೇವಸ್ಥಾನಗಳು ಸರ್ಕಾರದ ನಿಯಂತ್ರಣಕ್ಕೊಳಪಟ್ಟ ಸಾರ್ವಜನಿಕ ಸಂಸ್ಥೆಗಳು. ಅವುಗಳ ಸಂಪತ್ತು ರಾಷ್ಟ್ರದ ಸಂಪತ್ತು. ಅದು ಬೀಗ ಹಾಕಿಟ್ಟಂತೆ ನಿಷ್ಕ್ರಿಯವಾಗಿದ್ದರೆ, ಅದು ಸರ್ಕಾರದ ಕಲ್ಯಾಣ ಗುರಿಗೆ ವಿರುದ್ಧ. ಅದು ರಾಮ ರಾಜ್ಯ ಕಲ್ಪನೆಗೆ ವಿರುದ್ಧ !
ಪರಿಹಾರದ ಮಾರ್ಗ
ಸಂಪೂರ್ಣ ಎಲೆಕ್ಟ್ರಾನಿಕ್ ವ್ಯವಸ್ಥೆ
ಯುಪಿಐ, ಕ್ರೆಡಿಟ್/ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ನೆಫ್ಟ್, ಆರ್‌ಟಿಜಿಎಸ್ ಹಾಗೂ ಕ್ಯೂಆರ್ ಕೋಡ್ ಮೂಲಕ ಮಾತ್ರ ದಾನ ಸ್ವೀಕರಿಸಬೇಕು. ನಗದು ದಾನವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಮಧ್ಯಪ್ರದೇಶ ಸರ್ಕಾರವು ಈಗಾಗಲೇ ಪ್ರಮುಖ ದೇವಸ್ಥಾನಗಳಲ್ಲಿ ಆನ್‌ಲೈನ್ ದಾನ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಕಲ್ಯಾಣಕ್ಕೆ ಮತ್ರ ದಾನದ ಬಳಕೆ
ಸಂಗ್ರಹವಾದ ಹಣವನ್ನು ಗ್ರಾಮೀಣ ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು, ಉಚಿತ ಹಾಸ್ಟೆಲ್ಗಳು, ವೃದ್ಧಾಶ್ರಮಗಳು, ಮತ್ತು ಸಮುದಾಯ ಮೂಲಸೌಕರ್ಯಗಳಿಗೆ ಮಾತ್ರ ಬಳಸಬೇಕು.
ನಿಗದಿತ ಅವಧಿಯಲ್ಲಿ ವೆಚ್ಚ ಕಡ್ಡಾಯ
ಸಂಗ್ರಹವಾದ ಹಣವನ್ನು ಮುಂದಿನ ಹಣಕಾಸು ವರ್ಷದ ಅಂತ್ಯದೊಳಗೆ ಸಂಪೂರ್ಣವಾಗಿ ವೆಚ್ಚ ಮಾಡಬೇಕು. ಬಳಕೆಯಾಗದ ಹಣವು ಕೇಂದ್ರ ಸರ್ಕಾರದ ಸಾಮಾನ್ಯ ನಿಧಿಗೆ (Consolidated Fund of India) ಸೇರಬೇಕು.
ಸಾರ್ವಜನಿಕ ಕಂಪನಿಗಳಂತೆ ಕಡ್ಡಾಯ ಲೆಕ್ಕಪರಿಶೋಧನೆ
ಪ್ರತಿ ದೇವಸ್ಥಾನದ ಲೆಕ್ಕಪತ್ರಗಳನ್ನು ಪ್ರತಿ ವರ್ಷ ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ) ಮೂಲಕ ಲೆಕ್ಕಪರಿಶೋಧನೆ ಮಾಡಿಸಬೇಕು. ಲೆಕ್ಕಪರಿಶೋಧನಾ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು.
ಕೇಂದ್ರ ಸರ್ಕಾರದ ಪಾತ್ರ
ದೇವಸ್ಥಾನಗಳು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬಂದರೂ, ದಾನಗಳ ದುರುಪಯೋಗವು ರಾಷ್ಟ್ರೀಯ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕು:
ರಾಷ್ಟ್ರೀಯ ದೇವಸ್ಥಾನ ದಾನ ಪಾರದರ್ಶಕತೆ ಕಾಯ್ದೆ (National Temple Donation Transparency Act): ದೇಶದ ಎಲ್ಲಾ ದೇವಸ್ಥಾನಗಳಿಗೆ ಅನ್ವಯವಾಗುವ ಕೇಂದ್ರ ಕಾಯ್ದೆಯನ್ನು ಜಾರಿಗೊಳಿಸಬೇಕು.
ದೇವಸ್ಥಾನ ದಾನ ನಿಯಂತ್ರಣ ಪ್ರಾಧಿಕಾರ (Temple Donation Regulatory Authority): ದೇವಸ್ಥಾನಗಳ ದಾನ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲು ಸ್ವತಂತ್ರ ಪ್ರಾಧಿಕಾರವನ್ನು ರಚಿಸಬೇಕು.
ರಾಷ್ಟ್ರೀಯ ಡಿಜಿಟಲ್ ದಾನ ಪೋರ್ಟಲ್ (National Digital Donation Portal): ಎಲ್ಲಾ ದೇವಸ್ಥಾನಗಳ ದಾನವನ್ನು ಒಂದು ಸಾಮಾನ್ಯ ವೇದಿಕೆಯಲ್ಲಿ ನೋಂದಾಯಿಸಲು ಅನುವು ಮಾಡಿಕೊಡುವ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಬೇಕು.
ತೆರಿಗೆ ಪ್ರೋತ್ಸಾಹಗಳು: ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ದಾನ ನೀಡುವವರಿಗೆ ಹೆಚ್ಚುವರಿ ತೆರಿಗೆ ವಿನಾಯಿತಿ ನೀಡಬೇಕು.
ಕಡ್ಡಾಯ : ₹10,೦೦೦ ಕ್ಕಿಂತ ಹೆಚ್ಚಿನ ಮೊತ್ತದ ದಾನಗಳಿಗೆ ದಾನಿಯ ಪಾನ್ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸಬೇಕು. ಪ್ರಸ್ತುತ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಜಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ₹2,೦೦೦ ಕ್ಕಿಂತ ಹೆಚ್ಚಿನ ನಗದು ದಾನಗಳಿಗೆ ಅನುಮತಿ ಇಲ್ಲ. ಸಿಬಿಡಿಟಿ ನಿಯಮ 17ಎಎ ಪ್ರಕಾರ, ಧಾರ್ಮಿಕ ಸಂಸ್ಥೆಗಳು ದಾನಿಗಳ ಹೆಸರು, ವಿಳಾಸ, ಮತ್ತು ಪಾನ್ ದಾಖಲಿಸಬೇಕು. ಆದರೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿಲ್ಲ.
ಬ್ರಿಟನ್‌ನಲ್ಲೂ ರಾಮ ಮಂದಿರ ವಿವಾದ: 40 ವರ್ಷ ಹಳೆಯ ದೇವಾಲಯದ ಭವಿಷ್ಯ ಅತಂತ್ರ₹10 ಸಾವಿರ ಮೇಲಿನ ಎಲ್ಲಾ ದಾನಗಳಿಗೆ ಪಾನ್ ಅನ್ನು ಕಡ್ಡಾಯಗೊಳಿಸುವುದರಿಂದ:
ನಕಲಿ ದಾನಗಳು ಮತ್ತು ಕಪ್ಪು ಹಣದ ವರ್ಗಾವಣೆ ತಡೆಯಬಹುದು.
ತೆರಿಗೆ ವಂಚನೆ ನಿಯಂತ್ರಿಸಬಹುದು.
ದೇವಸ್ಥಾನಗಳಿಗೆ ಪಾರದರ್ಶಕ ಹಣಕಾಸು ವ್ಯವಸ್ಥೆ ನಿರ್ಮಿಸಬಹುದು.
ಮುಂಬೈನ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಮತ್ತು ರಾಮಕೃಷ್ಣ ಮಿಷನ್ ನಂತಹ ಕೆಲವು ದೇವಸ್ಥಾನಗಳು ಈಗಾಗಲೇ ₹2,000 ಮತ್ತು ₹10 ಸಾವಿರ ಮೇಲಿನ ದಾನಗಳಿಗೆ ಪಾನ್ ಕಡ್ಡಾಯಗೊಳಿಸಿವೆ. ಇದೇ ಮಾದರಿಯನ್ನು ದೇಶಾದ್ಯಂತ ಎಲ್ಲಾ ದೇವಸ್ಥಾನಗಳಿಗೆ ವಿಸ್ತರಿಸಬೇಕು. ಇದರ ಜೊತೆಗೆ, ಪಾನ್ ಒದಗಿಸದ ದಾನಿಗಳಿಗೆ ತೆರಿಗೆ ವಿನಾಯಿತಿ ನಿರಾಕರಿಸುವುದು ಮತ್ತು ದೇವಸ್ಥಾನಗಳು ಪಾನ್ ದಾಖಲಿಸದಿದ್ದರೆ ದಂಡ ವಿಧಿಸುವುದು ಸೂಕ್ತ.
ದೇವಸ್ಥಾನಗಳು ಭಕ್ತರ ಶ್ರದ್ಧಾ ಕೇಂದ್ರ. ಆ ಶ್ರದ್ಧೆಯನ್ನು ಕೆಲವು ಅಕ್ರಮಗಳಿಗೆ ದುರುಪಯೋಗಪಡಿಸಿಕೊಂಡರೆ, ಅದು ಭಕ್ತರ ನಂಬಿಕೆಗೆ ಧಕ್ಕೆ ತರುತ್ತದೆ. ಭಕ್ತರು ದೇವರಿಗೆ ಸಮರ್ಪಿಸಿದ ದಾನಗಳು ಸಮಾಜದ ಏಳಿಗೆಗೆ ಬಳಕೆಯಾಗಬೇಕು, ಯಾರೊಬ್ಬರ ಖಾಸಗಿ ಸಂಪತ್ತಾಗಬಾರದು.
ಫಲಿಸದ ಒತ್ತಡ, ಉಳಿಯದ ಒಪ್ಪಂದ...ಇರಾನ್ ಎದುರು ಟ್ರಂಪ್ ಮುಂದಿನ ನಡೆ ಏನು?ಎಲೆಕ್ಟ್ರಾನಿಕ್ ದಾನ ವ್ಯವಸ್ಥೆ, ಕಡ್ಡಾಯ ಲೆಕ್ಕಪರಿಶೋಧನೆ, ಸಾರ್ವಜನಿಕ ಪ್ರಕಟಣೆ, ಮತ್ತು ಸಾಮಾಜಿಕ ಕಲ್ಯಾಣಕ್ಕೆ ಬಳಕೆ - ಈ ಸುಧಾರಣೆಗಳು ದೇವಸ್ಥಾನಗಳಲ್ಲಿ ಪಾರದರ್ಶಕತೆಯನ್ನು ತರಬಲ್ಲವು. ಅಯೋಧ್ಯೆ, ತಿರುಪತಿ, ಬೆಂಗಳೂರು, ಬೇಲೂರು, ಮತ್ತು ಮಧ್ಯಪ್ರದೇಶದ ಘಟನೆಗಳು ನಮ್ಮನ್ನು ಎಚ್ಚರಿಸಿವೆ. ದೇವಸ್ಥಾನಗಳ ಆಡಳಿತದಲ್ಲಿ ಸುಧಾರಣೆಯನ್ನು ತರದಿದ್ದರೆ, ಇನ್ನೂ ಅನೇಕ ದುರುಪಯೋಗಗಳು ನಡೆಯಬಹುದು.
ಆಧ್ಯಾತ್ಮಿಕತೆಯು ಸಾಮಾಜಿಕ ಕಲ್ಯಾಣದೊಂದಿಗೆ ಬೆಸೆದುಕೊಳ್ಳಬೇಕು. ಅದಕ್ಕೆ ಪಾರದರ್ಶಕತೆ ಮತ್ತು ಜವಾಬ್ದಾರಿಯುತ ಆಡಳಿತ ಅಗತ್ಯ. ಈ ಸುಧಾರಣೆಗಳು ದೇವಸ್ಥಾನಗಳನ್ನು ಸಮಾಜದ ನಿಜವಾದ ಸೇವಾ ಕೇಂದ್ರಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತವೆ. ಇದು ಭಕ್ತರ ಶ್ರದ್ಧೆಗೆ ಸಲ್ಲಿಸುವ ನಿಜವಾದ ಗೌರವವಾಗಿದೆ.
Stock Market | ಅಮೆರಿಕ-ಇರಾನ್ ಕದನ ವಿರಾಮ ಅಂತ್ಯ? ಷೇರು ಮಾರುಕಟ್ಟೆಯಲ್ಲಿ ತಲ್ಲಣ
