Dailyhunt Logo
  • Light mode
    Follow system
    Dark mode
    • Play Story
    • App Story
ಬುಡಕಟ್ಟು ಜನರ ದುಃಸ್ಥಿತಿಗೆ ಕಾಂಗ್ರೆಸ್‌ ಕಾರಣ ಎಂದ ಚಂಪೈ ಸೊರೇನ್

ಬುಡಕಟ್ಟು ಜನರ ದುಃಸ್ಥಿತಿಗೆ ಕಾಂಗ್ರೆಸ್‌ ಕಾರಣ ಎಂದ ಚಂಪೈ ಸೊರೇನ್

ಜಾಮ್‌ಶೆಡ್‌ಪುರ: ಕಾಂಗ್ರೆಸ್ ಪಕ್ಷವು ಯಾವಾಗಲೂ ಬುಡಕಟ್ಟು ವಿರೋಧಿ ನೀತಿ ಅನುಸರಿಸುತ್ತದೆ. ಆದಿವಾಸಿಗಳ ಇಂದಿನ ದುಸ್ಥಿತಿಗೆ ಕಾಂಗ್ರೆಸ್‌ ನೇರ ಹೊಣೆ ಎಂದು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಗಂಭೀರ ಆರೋಪ ಮಾಡಿದ್ದಾರೆ.

ದೆಹಲಿಯಲ್ಲಿ ಮೇ 24ರಿಂದ ಆರಂಭವಾಗಲಿರುವ 'ಜನಜಾತೀಯ ಸಾಂಸ್ಕೃತಿಕ ಸಮಾಗಮ'ದಲ್ಲಿ ಭಾಗವಹಿಸಲು ಹೊರಟಿದ್ದ ಬುಡಕಟ್ಟು ಕಲಾವಿದರ ತಂಡವನ್ನು ಟಾಟಾನಗರ ರೈಲ್ವೆ ನಿಲ್ದಾಣದಲ್ಲಿ ಬೀಳ್ಕೊಟ್ಟ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಇರಾನ್ ವಿರುದ್ಧ ಹೊಸದಾಗಿ ದಾಳಿ ನಡೆಸಲು ಡೊನಾಲ್ಡ್ ಟ್ರಂಪ್ ಗಂಭೀರ ಚಿಂತನೆ: ವರದಿಇಂಧನವಷ್ಟೇ ಅಲ್ಲ CNG ಬೆಲೆಯೂ ಮತ್ತೆ ಏರಿಕೆ: ಇಂದಿನಿಂದಲೇ ಪರಿಷ್ಕೃತ ದರ ಜಾರಿ

ಜಾರ್ಖಂಡ್ ಪ್ರತ್ಯೇಕ ರಾಜ್ಯ ಚಳವಳಿಯ ಸಂದರ್ಭದಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ಆದಿವಾಸಿಗಳು ಮತ್ತು ಸ್ಥಳೀಯರ ಮೇಲೆ ಲಾಠಿಚಾರ್ಜ್ ಹಾಗೂ ಗುಂಡಿನ ದಾಳಿ ನಡೆಸಿತ್ತು ಎಂದು ಆರೋಪಿಸಿದ್ದಾರೆ.

ಬ್ರಿಟಿಷರ ಕಾಲದಲ್ಲೂ ಅಸ್ತಿತ್ವದಲ್ಲಿದ್ದ 'ಬುಡಕಟ್ಟು ಧರ್ಮದ ಸಂಹಿತೆ' ಅನ್ನು 1961ರ ಜನಗಣತಿಯಿಂದ ಕಾಂಗ್ರೆಸ್ ಸರ್ಕಾರ ತೆಗೆದುಹಾಕಿತು ಎಂದು ವಾಗ್ದಾಳಿ ನಡೆಸಿದ್ದಾರೆ.

ʼಮಾಜಿ ಸಂಸದ ಕಾರ್ತಿಕ್ ಒರಾನ್ ಅವರು 1967ರಲ್ಲಿ ಸಂಸತ್ತಿನಲ್ಲಿ ಪ್ರಸ್ತಾವನೆಯೊಂದನ್ನು ಮಂಡಿಸಿದ್ದರು. ಮತಾಂತರಗೊಂಡ ಬುಡಕಟ್ಟು ಜನರಿಗೆ ಸಿಗುವ ಮೀಸಲಾತಿ ಸೌಲಭ್ಯಗಳನ್ನು ರದ್ದುಗೊಳಿಸಬೇಕು (ಡಿ-ಲಿಸ್ಟಿಂಗ್) ಎಂಬುದು ಅದರ ಉದ್ದೇಶವಾಗಿತ್ತು. ಜಂಟಿ ಸಂಸದೀಯ ಸಮಿತಿಯು ಸಹ ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಬುಡಕಟ್ಟು ಸಂಪ್ರದಾಯಗಳನ್ನು ಕೈಬಿಟ್ಟವರನ್ನು ಪರಿಶಿಷ್ಟ ಪಂಗಡದಿಂದ ಹೊರಗಿಡಲು ಶಿಫಾರಸು ಮಾಡಿತ್ತು. ಆದರೆ, ಹಲವು ಸಂಸದರ ಬೆಂಬಲವಿದ್ದರೂ ಕಾಂಗ್ರೆಸ್ ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲʼ ಎಂದು ಸೊರೇನ್‌ ಆರೋಪಿಸಿದ್ದಾರೆ

ಭಾರತಕ್ಕೆ ಬಂದಿಳಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊಸಂಪಾದಕೀಯ | ಬಿತ್ತನೆ ಬೀಜ ವಿತರಣೆ ಅವ್ಯವಸ್ಥೆ: ಮಾತಿನಲ್ಲೇ ಉಳಿದ ರೈತಕಾಳಜಿ

ಬಿಜೆಪಿ ಸರ್ಕಾರವು ಬುಡಕಟ್ಟು ಜನರ ಅಭಿವೃದ್ಧಿಗಾಗಿ ಏಕಲವ್ಯ ಶಾಲೆಗಳನ್ನು ಸ್ಥಾಪಿಸಿದೆ. ಅಷ್ಟೇ ಅಲ್ಲದೆ, ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು 'ಜನಜಾತೀಯ ಗೌರವ್ ದಿವಸ್' ಎಂದು ಘೋಷಿಸಿದೆ. ಪ್ರಮುಖವಾಗಿ, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರನ್ನು (ದ್ರೌಪದಿ ಮುರ್ಮು) ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ (ರಾಷ್ಟ್ರಪತಿ) ಏರಿಸಿದ್ದು ಇದೇ ಬಿಜೆಪಿ ಸರ್ಕಾರ ಎಂದು ಅವರು ನೆನೆದರು.

ದೆಹಲ್ಲಿಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಸಮಾವೇಶವನ್ನು ಬಹಿಷ್ಕರಿಸುವಂತೆ ಜಾರ್ಖಂಡ್ ಕಾಂಗ್ರೆಸ್ ಜನರಿಗೆ ಕರೆ ನೀಡುತ್ತಿರುವುದನ್ನು ಖಂಡಿಸಿದ ಅವರು, ಬುಡಕಟ್ಟು ಜನರು ತಮ್ಮ ಸಂಸ್ಕೃತಿ ಮತ್ತು ಹಕ್ಕುಗಳ ಬಗ್ಗೆ ಜಾಗೃತರಾಗುತ್ತಿರುವುದು ಕಾಂಗ್ರೆಸ್‌ಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಚಂಪೈ ತಿಳಿಸಿದ್ದಾರೆ.

ಬುಡಕಟ್ಟು ಜನರ ಮೂಲ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಉಳಿಸಲು ಸಂವಿಧಾನದ 342ನೇ ವಿಧಿಗೆ ಸೂಕ್ತ ತಿದ್ದುಪಡಿ ತರಬೇಕು. 'ಡಿ-ಲಿಸ್ಟಿಂಗ್' ಪ್ರಸ್ತಾವನೆಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಖಾಲಿದ್, ಇಮಾಮ್‌ಗೆ ಜಾಮೀನು ನಿರಾಕರಿಸಿದ ತೀರ್ಪಿನ ಪರಿಶೀಲನೆ ವಿಸ್ತೃತ ಪೀಠಕ್ಕೆಲೋಕಾಯುಕ್ತ ಸಂಸ್ಥೆ ಬಲಹೀನ ಮಾಡಲು ಬಿಡುವುದಿಲ್ಲ: ಬಿ.ವೀರಪ್ಪ
Dailyhunt
Disclaimer: This content has not been generated, created or edited by Dailyhunt. Publisher: Prajavani