ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಡೊನಾಲ್ಡ್ ಟ್ರಂಪ್ ರಣನೀತಿಗೆ ಜಗ್ಗದ ಇರಾನ್: ಇಕ್ಕಟ್ಟಿನಲ್ಲಿ ಅಮೆರಿಕ ಅಧ್ಯಕ್ಷ
ಒಂದು ಸಾಲಿನಲ್ಲಿಅಮೆರಿಕದ ಒತ್ತಡದ ತಂತ್ರಗಳಿಗೆ ಇರಾನ್ ಸೊಪ್ಪು ಹಾಕುತ್ತಿಲ್ಲವಾದ್ದರಿಂದ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಜತಾಂತ್ರಿಕವಾಗಿ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಪ್ರಮುಖ ಪ್ರಶ್ನೋತ್ತರ
ಇರಾನ್ ವಿರುದ್ಧದ ಟ್ರಂಪ್ ತಂತ್ರ ಏಕೆ ವಿಫಲವಾಗುತ್ತಿದೆ?
ಟ್ರಂಪ್ ಅವರು ಇರಾನ್ ಸುಲಭವಾಗಿ ಶರಣಾಗುತ್ತದೆ ಎಂದು ಅಂದಾಜಿಸಿದ್ದರು ಆದರೆ, ಇರಾನ್ ಅಮೆರಿಕದ ಆರ್ಥಿಕ ನಿರ್ಬಂಧಗಳು ಮತ್ತು ರಾಜಕೀಯ ಒತ್ತಡವನ್ನು ದೃಢವಾಗಿ ಎದುರಿಸಿ ನಿಂತಿದೆ.
ಹೊರ್ಮುಜ್ ಜಲಸಂಧಿಯ ವಿಚಾರದಲ್ಲಿ ಟ್ರಂಪ್ ಕೈಗೊಂಡ ನಿರ್ಧಾರವೇನು?
ಹಡಗುಗಳ ಮೇಲೆ ಶುಲ್ಕ ವಿಧಿಸುವುದಾಗಿ ಘೋಷಿಸಿದ್ದ ಟ್ರಂಪ್, ಗಲ್ಫ್ ಅರಬ್ ರಾಷ್ಟ್ರಗಳ ವಿರೋಧದಿಂದಾಗಿ ಆ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕಾಯಿತು, ಇದು ಅವರ ಯೋಜನೆಯಲ್ಲಿನ ಅಸ್ಥಿರತೆಯನ್ನು ತೋರಿಸುತ್ತದೆ.
ಅಮೆರಿಕದ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳೇನು?
ಅನುಭವಿ ತಜ್ಞರು ಮತ್ತು ಗುಪ್ತಚರ ವರದಿಗಳಿಗೆ ಮಹತ್ವ ನೀಡದಿರುವುದು ಟ್ರಂಪ್ ಆಡಳಿತಕ್ಕೆ ಮುಳುವಾಗಿದೆ, ಇದರಿಂದ ವಾಸ್ತವ ಪರಿಸ್ಥಿತಿಯ ಸ್ಪಷ್ಟ ಚಿತ್ರಣ ಅಧ್ಯಕ್ಷರಿಗೆ ಸಿಗುತ್ತಿಲ್ಲ.
ಈ ಸಂಘರ್ಷ ಟ್ರಂಪ್ ಅವರ ಮೇಲೆ ಬೀರುವ ಪರಿಣಾಮವೇನು?
ಈ ಬಿಕ್ಕಟ್ಟು ಬಗೆಹರಿಯದಿದ್ದರೆ, 1979ರ ಒತ್ತೆಯಾಳು ಬಿಕ್ಕಟ್ಟು ಜಿಮ್ಮಿ ಕಾರ್ಟರ್ ಅವರ ರಾಜಕೀಯ ಭವಿಷ್ಯವನ್ನು ಹಾಳುಮಾಡಿದಂತೆ, ಇದು ಟ್ರಂಪ್ ಅವರ ಅಧ್ಯಕ್ಷೀಯ ಆಡಳಿತಕ್ಕೂ ಸವಾಲಾಗಬಹುದು.
ಸದ್ಯ ಉದ್ಭವಿಸಿರುವ ಕಠಿಣ ಪರಿಸ್ಥಿತಿ ಏನು?
ಕದನ ವಿರಾಮವಿದ್ದರೂ ಪರಮಾಣು ಕಾರ್ಯಕ್ರಮ ಮತ್ತು ಬಂಡುಕೋರ ಸಂಘಟನೆಗಳ ಸಮಸ್ಯೆಗಳು ಹಾಗೆಯೇ ಉಳಿದಿದ್ದು, ಟ್ರಂಪ್ ದಾಳಿ ನಡೆಸುವ ಬೆದರಿಕೆ ಹಾಕುತ್ತಲೇ ಮಾತುಕತೆಗೂ ಒಲವು ತೋರಿಸುತ್ತಿದ್ದಾರೆ.
ಪ್ರಮುಖ ಅಂಕಿಅಂಶಗಳು
5 ತಿಂಗಳುಯುದ್ಧ ಆರಂಭವಾಗಿ ಕಳೆದ ಸಮಯ1979ಒತ್ತೆಯಾಳು ಬಿಕ್ಕಟ್ಟು ನಡೆದ ವರ್ಷ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ದೇಶಗಳ ಮೇಲೆ ಒತ್ತಡ ಹೇರಿ ತನಗೆ ಬೇಕಾದುದ್ದನ್ನು ಸಾಧಿಸಿಕೊಳ್ಳುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಶಸ್ವಿಯಾಗುತ್ತಿದ್ದಾರೆ. ಸುಂಕ ಹೇರಿಯೋ, ರಾಜತಾಂತ್ರಿಕ ಒತ್ತಡ ಹಾಕಿಯೋ ಅಥವಾ ದಾಳಿ ಮಾಡಿಯಾದರೂ ಹಠ ಸಾಧಿಸಿಕೊಳ್ಳುತ್ತಿದ್ದಾರೆ. ಆದರೆ ಇರಾನ್ ವಿಚಾರದಲ್ಲಿ ಮಾತ್ರ ಅವರಿಗೆ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಯುದ್ಧ ಆರಂಭವಾಗಿ ಸುಮಾರು 5 ತಿಂಗಳು ಕಳೆದರೂ ಸ್ಪಷ್ಟ ಗೆಲುವು ಸಿಕ್ಕಿಲ್ಲ. ಇದೇ ವೇಳೆ, ಟ್ರಂಪ್ ಅವರ ನಿಲುವು ಕೂಡ ಪದೇ ಪದೇ ಬದಲಾಗುತ್ತಿದೆ.
ಹೊರ್ಮುಜ್ ವಿಚಾರದಲ್ಲಿ ಟ್ರಂಪ್ ಯೂ-ಟರ್ನ್: ಮತ್ತೆ ಆತಂಕದಲ್ಲಿ ಜಾಗತಿಕ ಉದ್ಯಮಸ್ಥಿರತೆಯ ಕೊರತೆ
ಇತ್ತೀಚೆಗೆ ಹೊರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳ ಮೇಲೆ ಶುಲ್ಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದರು. ಆದರೆ ಗಲ್ಫ್ ಅರಬ್ ರಾಷ್ಟ್ರಗಳ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆ ನಿರ್ಧಾರವನ್ನು ಹಿಂಪಡೆದರು. ಈ ಬೆಳವಣಿಗೆ, ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಸ್ಪಷ್ಟ ಕಾರ್ಯತಂತ್ರದ ಕೊರತೆಯನ್ನು ತೋರಿಸುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಟ್ರಂಪ್, ಹಲವು ದೇಶಗಳ ಮೇಲೆ ಸುಂಕದ ಒತ್ತಡ, ರಾಜತಾಂತ್ರಿಕ ಬೆದರಿಕೆ ಹಾಗೂ ತೀಕ್ಷ್ಣ ಹೇಳಿಕೆಗಳ ಮೂಲಕ ತಮ್ಮ ಪ್ರಭಾವವನ್ನು ತೋರಿಸಲು ಪ್ರಯತ್ನಿಸಿದ್ದಾರೆ. ಆದರೆ ಇರಾನ್ ಮಾತ್ರ ಆ ಒತ್ತಡಕ್ಕೆ ಮಣಿಯದೆ ತನ್ನ ನಿಲುವನ್ನು ಮುಂದುವರಿಸಿದೆ.
ಕಳೆದ ತಿಂಗಳು ಅಮೆರಿಕ ಮತ್ತು ಇರಾನ್ ನಡುವೆ ತಾತ್ಕಾಲಿಕ ತಿಳುವಳಿಕೆ ಒಪ್ಪಂದ ನಡೆದಿದ್ದರೂ, ಅದು ಹೆಚ್ಚು ದಿನ ಉಳಿಯಲಿಲ್ಲ. ಕದನ ವಿರಾಮದ ಬಳಿಕವೂ ಎರಡೂ ದೇಶಗಳ ನಡುವಿನ ಸಂಘರ್ಷ ಮತ್ತೆ ಹೆಚ್ಚಾಗಿದೆ. ಇದರಿಂದ ಯುದ್ಧವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು ಎಂಬುದರ ಬಗ್ಗೆ ಟ್ರಂಪ್ ಆಡಳಿತವೇ ಗೊಂದಲದಲ್ಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಇರಾನ್ ಆಡಳಿತ ಬದಲಾವಣೆಗೆ ಮುಂದಾಗಿತ್ತೇ ಇಸ್ರೇಲ್? ಮೊಸಾದ್ ಸಂಚು ಬಯಲು'ಎದುರಾಳಿ ದೇಶಗಳು ಅಮೆರಿಕದ ಷರತ್ತುಗಳಿಗೆ ಒಪ್ಪಿಕೊಳ್ಳುತ್ತವೆ ಎಂಬ ನಿರೀಕ್ಷೆಯಲ್ಲಿ ಟ್ರಂಪ್ ಇರುತ್ತಾರೆ. ಆದರೆ ಇರಾನ್ ಆ ಒತ್ತಡವನ್ನು ಮೆಟ್ಟಿನಿಂತ ಕಾರಣ ಅಮೆರಿಕಕ್ಕೆ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ.' ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಭೌಗೋಳಿಕ ತಜ್ಞ ವಾಲಿ ನಾಸರ್ ಹೇಳಿದ್ದಾರೆ.
ಅಮೆರಿಕದ ಈ ಹಿಂದಿನ ಅಧ್ಯಕ್ಷರಿಗೂ ಪಶ್ಚಿಮ ಏಷ್ಯಾ ದೊಡ್ಡ ರಾಜಕೀಯ ಸವಾಲಾಗಿ ಪರಿಣಮಿಸಿದೆ. ಅಲ್ಲಿನ ಪರಿಸ್ಥಿತಿ ಬೇರೆ ಭಾಗಗಳಿಗಿಂತ ಭಿನ್ನವಾಗಿರುವುದರಿಂದ, ರಾಜತಾಂತ್ರಿಕ ಒತ್ತಡ ಅಥವಾ ಆರ್ಥಿಕ ನಿರ್ಬಂಧಗಳು ಎಲ್ಲ ಸಂದರ್ಭದಲ್ಲೂ ಪರಿಣಾಮಕಾರಿಯಾಗುವುದಿಲ್ಲ ಎಂದು ಹಲವು ವಿಶ್ಲೇಷಕರು ಹೇಳುತ್ತಿದ್ದಾರೆ.
ಟ್ರಂಪ್ ಆಡಳಿತದ ಎಡವಟ್ಟುಗಳು
ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಟ್ರಂಪ್ ಆಡಳಿತ ಆರಂಭದಲ್ಲೇ ಹಲವು ತಪ್ಪುಗಳನ್ನು ಮಾಡಿದೆ ಎಂದು ಅಮೆರಿಕದ ಹಲವು ವಿದೇಶಾಂಗ ನೀತಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇರಾನ್‌ನ ಆಡಳಿತ ವ್ಯವಸ್ಥೆಯನ್ನು ಟ್ರಂಪ್ ಸರ್ಕಾರವು ಕೇವಲವಾಗಿ ಅಂದಾಜಿಸಿತ್ತು. ಅಮೆರಿಕದ ವೈಮಾನಿಕ ದಾಳಿ ಮತ್ತು ರಾಜಕೀಯ ಒತ್ತಡ ಎದುರಾದರೆ ಇರಾನ್ ಬೇಗನೇ ಮಂಡಿಯೂರುತ್ತದೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಅದರೆ ಅದು ನಡೆಯಲಿಲ್ಲ ಎಂದು ಅಮೆರಿಕದ ಮಾಜಿ ಉಪಾಧ್ಯಕ್ಷ ಡಿಕ್ ಚೇನಿ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಜಾನ್ ಹನ್ನಾ ಹೇಳಿದ್ದಾರೆ.
'ಯುದ್ಧ ಆರಂಭವಾದಾಗ ಮಾಡಿಕೊಂಡಿದ್ದ ಮೂಲ ಅಂದಾಜುಗಳೇ ತಪ್ಪಾಗಿದ್ದವು. ಇರಾನ್ ಆಡಳಿತ ಸುಲಭವಾಗಿ ಕುಸಿಯುವ ವ್ಯವಸ್ಥೆಯಲ್ಲ ಎಂಬುದು ಈಗ ಸ್ಪಷ್ಟವಾಗಿದೆ' ಎಂದು ಹನ್ನಾ ಹೇಳಿದ್ದಾರೆ.
ಟ್ರಂಪ್ ಅವರ ಸುತ್ತಲೂ ಇರುವ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯು ಕೂಡ ಸಮರ್ಪಕವಾಗಿ ಕೆಲಸ ಮಾಡಲಿಲ್ಲ. ಅನುಭವಿ ಅಧಿಕಾರಿಗಳು ಮತ್ತು ಗುಪ್ತಚರ ತಜ್ಞರ ಅಭಿಪ್ರಾಯಗಳಿಗೆ ಬೇಕಾದಷ್ಟು ಮಹತ್ವ ನೀಡದ ಕಾರಣ, ವಾಸ್ತವ ಪರಿಸ್ಥಿತಿಯ ಸ್ಪಷ್ಟ ಚಿತ್ರಣ ಅಧ್ಯಕ್ಷರಿಗೆ ಸಿಗಲಿಲ್ಲ ಎನ್ನುವುದು ಅವರ ವಾದ.
ಮಾನವ ಇತಿಹಾಸವನ್ನೇ ಬದಲಿಸಿದ್ದ ಎಲ್ ನಿನೊ! ಕಾದಿದೆಯಾ ಮಹಾ ವಿಪತ್ತು?ಕಠಿಣ ಪರಿಸ್ಥಿತಿಯಲ್ಲಿ ಟ್ರಂಪ್
ಈ ನಡುವೆ, ಕಳೆದ ತಿಂಗಳು ಘೋಷಿಸಿದ್ದ ಕದನ ವಿರಾಮವೂ ಹೆಚ್ಚು ದಿನ ಉಳಿಯಲಿಲ್ಲ. ಎರಡೂ ದೇಶಗಳ ನಡುವೆ ಕೇವಲ ತಾತ್ಕಾಲಿಕ ಶಾಂತಿಗೆ ಮಾತ್ರ ಅದು ದಾರಿ ಮಾಡಿಕೊಟ್ಟಿತ್ತು. ಆದರೆ ಯುದ್ಧದ ಮೂಲ ಕಾರಣಗಳಾದ ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಪ್ರಾದೇಶಿಕ ಬಂಡುಕೋರ ಸಂಘಟನೆಗಳ ಸಮಸ್ಯೆಗಳು ಹಾಗೆಯೇ ಉಳಿದಿವೆ.
ಈ ಪರಿಸ್ಥಿತಿಯಲ್ಲಿ ಟ್ರಂಪ್ ಮತ್ತೆ ಹೆಚ್ಚಿನ ದಾಳಿ ನಡೆಸುವ ಸೂಚನೆ ನೀಡಿದ್ದಾರೆ. ಹೊರ್ಮುಜ್ ಜಲಸಂಧಿಯಲ್ಲಿ ನೌಕಾಪಡೆಯ ಕಾರ್ಯಾಚರಣೆ ಬಲಪಡಿಸುವುದು, ಇರಾನ್‌ನ ಪ್ರಮುಖ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸುವುದು ಮತ್ತು ಅಗತ್ಯವಿದ್ದರೆ ಮೂಲಸೌಕರ್ಯಗಳನ್ನು ಗುರಿಯಾಗಿಸುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ. ಆದರೆ ಮತ್ತೊಂದೆಡೆ, ಮಾತುಕತೆಗೆ ಬಾಗಿಲು ಮುಚ್ಚಿಲ್ಲ ಎಂಬ ಸಂದೇಶವನ್ನೂ ಟ್ರಂಪ್ ನೀಡುತ್ತಿದ್ದಾರೆ. ಆದರೆ ಹಿಂದಿನ ಮಾತುಕತೆಗಳು ವಿಫಲವಾದ ಬಳಿಕ ಈಗ ಯಾವ ಹೊಸ ಮಾರ್ಗದಲ್ಲಿ ಒಪ್ಪಂದ ಸಾಧ್ಯ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.
ಅಡುಗೆ ಮನೆಗೆ ತಟ್ಟಲಿದೆ ಪ್ರಶಾಂತ ಸಾಗರದ ಬಿಸಿ: ಅಕ್ಕಿ, ಸಕ್ಕರೆ, ಎಣ್ಣೆ ದುಬಾರಿ!'ಟ್ರಂಪ್ ಈಗ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಇರಾನ್ ಕೂಡ ಹಿಂಜರಿಯುವ ಲಕ್ಷಣ ಕಾಣಿಸುತ್ತಿಲ್ಲ. ಈ ಹೋರಾಟದಲ್ಲಿ ಕೊನೆಗೂ ಮೇಲುಗೈ ಯಾರಿಗೆ ಸಿಗುತ್ತದೆ ಎಂಬುದನ್ನು ಮುಂದಿನ ಬೆಳವಣಿಗೆಗಳು ನಿರ್ಧರಿಸಲಿವೆ' ಎಂದು ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್‌ನ ಹಿರಿಯ ಸಂಶೋಧಕ ಆರನ್ ಡೇವಿಡ್ ಮಿಲ್ಲರ್ ಅಭಿಪ್ರಾಯ ಪಡುತ್ತಾರೆ.
1979ರ ಒತ್ತೆಯಾಳು ಬಿಕ್ಕಟ್ಟು ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಹೊಡೆತ ನೀಡಿತ್ತು. ಈಗ ಇರಾನ್ ವಿಚಾರವೇ ಟ್ರಂಪ್ ಅವರ ಅಧ್ಯಕ್ಷತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಮಿಲ್ಲರ್ ಎಚ್ಚರಿಸಿದ್ದಾರೆ.
ಆಧಾರ: ದಿ ನ್ಯೂಯಾರ್ಕ್ ಟೈಮ್ಸ್
ಅಮೆರಿಕದ ಆಕ್ರಮಣಕಾರಿ ಕೃತ್ಯಗಳು ನಿಲ್ಲುವವರೆಗೂ ಹೊರ್ಮುಜ್ ಮುಚ್ಚಿರಲಿದೆ: ಇರಾನ್
