Dailyhunt Logo
  • Light mode
    Follow system
    Dark mode
    • Play Story
    • App Story
ಖಮೇನಿ ಅಂತ್ಯಸಂಸ್ಕಾರ: ಪ್ರಾರ್ಥನೆಗೆ ಹಾಜರಾದ ಮೂವರು ಮಕ್ಕಳು, ಮೊಜ್ತಬಾ ಸುಳಿವಿಲ್ಲ

ಖಮೇನಿ ಅಂತ್ಯಸಂಸ್ಕಾರ: ಪ್ರಾರ್ಥನೆಗೆ ಹಾಜರಾದ ಮೂವರು ಮಕ್ಕಳು, ಮೊಜ್ತಬಾ ಸುಳಿವಿಲ್ಲ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಖಮೇನಿ ಅಂತ್ಯಸಂಸ್ಕಾರ: ಪ್ರಾರ್ಥನೆಗೆ ಬಂದ ಮೂವರು ಮಕ್ಕಳು, ಮೊಜ್ತಬಾ ಸುಳಿವಿಲ್ಲ

ಒಂದು ಸಾಲಿನಲ್ಲಿಇರಾನ್‌ನ ದಿವಂಗತ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಸಂಸ್ಕಾರದ ವಿಧಿಗಳು ನಡೆಯುತ್ತಿದ್ದು, ಉತ್ತರಾಧಿಕಾರಿ ಮೊಜ್ತಬಾ ಖಮೇನಿ ಅವರ ಗೈರು ತೀವ್ರ ಕುತೂಹಲ ಮೂಡಿದೆ.

ಪ್ರಮುಖ ಪ್ರಶ್ನೋತ್ತರ


ಅಂತ್ಯಸಂಸ್ಕಾರದಲ್ಲಿ ಯಾರ್ಯಾರು ಭಾಗವಹಿಸಿದ್ದಾರೆ?

ಅಲಿ ಖಮೇನಿ ಅವರ ಪುತ್ರರಾದ ಮೊಸ್ತಫಾ, ಮೇಸಮ್ ಮತ್ತು ಮಸೂದ್ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತು ಸಂಸತ್ತಿನ ಸ್ಪೀಕರ್ ಉಪಸ್ಥಿತರಿದ್ದರು.


ಮೊಜ್ತಬಾ ಖಮೇನಿ ಏಕೆ ಕಾಣಿಸಿಕೊಂಡಿಲ್ಲ?

ಫೆಬ್ರುವರಿ 28ರ ದಾಳಿಯಲ್ಲಿ ಮೊಜ್ತಬಾ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅವರು ಭದ್ರತೆಯ ಕಾರಣದಿಂದ ಗೋಪ್ಯವಾಗಿದ್ದಾರೋ ಅಥವಾ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೋ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ.


ಅಲಿ ಖಮೇನಿ ಹತ್ಯೆ ನಡೆದದ್ದು ಯಾವಾಗ?

ಅಲಿ ಖಮೇನಿ ಮತ್ತು ಅವರ ಕುಟುಂಬದ ಕೆಲ ಸದಸ್ಯರು ಫೆಬ್ರುವರಿ 28ರಂದು ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಹತ್ಯೆಯಾಗಿದ್ದರು.


ಅಂತ್ಯಸಂಸ್ಕಾರದ ಮುಂದಿನ ಪ್ರಕ್ರಿಯೆಗಳೇನು?

ಜುಲೈ 9ರವರೆಗೆ ವಿಧಿವಿಧಾನಗಳು ನಡೆಯಲಿದ್ದು, ಪಾರ್ಥಿವ ಶರೀರವನ್ನು ಕೋಮ್, ನಜಾಫ್, ಕೆರ್ಬಾಲಾ ಮತ್ತು ಅಂತಿಮವಾಗಿ ಮಷಾದ್ ನಗರಗಳಿಗೆ ಮೆರವಣಿಗೆಯ ಮೂಲಕ ಕೊಂಡೊಯ್ದು ಸಮಾಧಿ ಮಾಡಲಾಗುತ್ತದೆ.


ಸಂಘರ್ಷದ ಪರಿಣಾಮಗಳೇನು?

ಈ ಸಂಘರ್ಷದಿಂದಾಗಿ ಪಶ್ಚಿಮ ಏಷ್ಯಾದಾದ್ಯಂತ ಯುದ್ಧದ ವಾತಾವರಣ ಉಲ್ಬಣಗೊಂಡಿದ್ದು, ಜಾಗತಿಕ ತೈಲ ಪೂರೈಕೆ ಮತ್ತು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ.

ಪ್ರಮುಖ ಅಂಕಿಅಂಶಗಳು

ಫೆಬ್ರುವರಿ 28ದಾಳಿ ನಡೆದ ದಿನಾಂಕಜುಲೈ 4-9ಅಂತ್ಯಸಂಸ್ಕಾರದ ವಿಧಿವಿಧಾನಗಳು ನಡೆಯುವ ಅವಧಿ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಟೆಹರಾನ್‌: ಇರಾನ್‌ ಸರ್ವೋಚ್ಚ ನಾಯಕನಾಗಿದ್ದ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಾಲ್ಕು ತಿಂಗಳ ಬಳಿಕ ಅಂತಿಮ ಸಂಸ್ಕಾರ ನೆರವೇರುತ್ತಿದೆ. ಅಲಿ ಖಮೇನಿಯ ಉತ್ತರಾಧಿಕಾರಿಯಾಗಿರುವ ಪುತ್ರ ಮೊಜ್ತಬಾ ಹೊರತುಪಡಿಸಿ, ಉಳಿದ ಮೂವರು ಗಂಡು ಮಕ್ಕಳು ಅಂತಿಮ ವಿಧಿವಿಧಾನದ ಪ್ರಾರ್ಥನೆ ವೇಳೆ ಕಾಣಿಸಿಕೊಂಡಿದ್ದಾರೆ.

ರಾಜಧಾನಿಯ ಇಮಾಮ್‌ ಖಮೇನಿ ಗ್ರ್ಯಾಂಡ್‌ ಮೊಸಲ್ಲಾ ಧಾರ್ಮಿಕ ಸಂಕೀರ್ಣದಲ್ಲಿರುವ ವಿಶಾಲ ಪ್ರದೇಶದಲ್ಲಿ ಅಲಿ ಖಮೇನಿ ಅವರ ಪಾರ್ಥಿವ ಶರೀರವಿರುವ ಶವಪೆಟ್ಟಿಗೆಯನ್ನು ಇಡಲಾಗಿದೆ.

ಭಾನುವಾರ ನಡೆದ ಪ್ರಾರ್ಥನೆ ವೇಳೆ ಮಕ್ಕಳಾದ ಮೊಸ್ತಫಾ, ಮೇಸಮ್‌ ಮತ್ತು ಮಸೂದ್‌ ಅವರು ಕಾಣಿಸಿಕೊಂಡಿರುವ ದೃಶ್ಯಗಳು ಇರಾನ್‌ ಸರ್ಕಾರಿ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಇರಾನ್‌ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಸಂಸತ್ತಿನ ಸ್ಪೀಕರ್‌ ಮೊಹಮ್ಮದ್ ಬಾಖಿರ್‌ ಖಾಲೀಬಾಫ್ ಶವಪೆಟ್ಟಿಗೆಯ ಹಿಂದೆ ನಿಂತಿದ್ದರೆ, ಮಸೂದ್‌ ಖಮೇನಿ ಅವರು ಇರಾನ್‌ ಸೇನಾ ಕ್ರಾಂತಿಯ ವಿಚಾರಧಾರೆ ಮತ್ತು ಸಾರ್ವಭೌಮತೆಯ ಸಂಕೇತವಾದ ಕೆಫಿಯೆಹ್ ಸ್ಕಾರ್ಫ್‌ನಿಂದ ಕಣ್ಣೊರಸಿಕೊಳ್ಳುತ್ತಲೇ ಅಂತ್ಯಕ್ರಿಯೆಯ ಪ್ರಾರ್ಥನೆಗಳನ್ನು ಪಠಿಸಿದ್ದಾರೆ.

ಇಸ್ರೇಲ್ ಮತ್ತು ಅಮೆರಿಕ ಪಡೆಗಳು ಫೆಬ್ರುವರಿ 28ರಂದು ನಡೆಸಿದ ಜಂಟಿ ದಾಳಿ ವೇಳೆ ಅಲಿ ಖಮೇನಿ, ಅವರ ಕುಟುಂಬದ ಕೆಲವರು ಹಾಗೂ ಹಲವು ಉನ್ನತಾಧಿಕಾರಿಗಳು ಹತ್ಯೆಯಾಗಿದ್ದರು.

ಖಮೇನಿ ಅಂತ್ಯಕ್ರಿಯೆಯಲ್ಲಿ 70ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿ: ಅರಾಘ್ಚಿತಪ್ಪು ಹೆಜ್ಜೆ ಇಟ್ಟರೆ ಸರ್ವನಾಶ: ಖಮೇನಿ ಅಂತ್ಯಕ್ರಿಯೆ ನಡುವೆ ಟ್ರಂಪ್ ಎಚ್ಚರಿಕೆ

ಇದರಿಂದ ಕೆರಳಿದ ಇರಾನ್‌ ಸೇನೆ, ಇಸ್ರೇಲ್‌, ಅಮೆರಿಕ ಮಾತ್ರವಲ್ಲದೆ ಅವುಗಳ ಮಿತ್ರ ರಾಷ್ಟ್ರಗಳ ಮೇಲೂ ದಾಳಿ ಮಾಡಿತ್ತು. ಜಗತ್ತಿನ ತೈಲ ಸರಬರಾಜಿನ ಪ್ರಮುಖ ಮಾರ್ಗವಾದ ಹೊರ್ಮುಜ್‌ನಲ್ಲಿ ಹಡಗು ಸಂಚಾರವನ್ನು ನಿರ್ಬಂಧಿಸಿತ್ತು. ಸಂಘರ್ಷವು ಪಶ್ಚಿಮ ಏಷ್ಯಾದಾದ್ಯಂತ ಉಲ್ಬಣಿಸಿದ ಪರಿಣಾಮವಾಗಿ ಜಾಗತಿಕ ಆರ್ಥಿಕತೆಗೆ ಹೊಡೆತ ಬಿದ್ದಿತ್ತು.

ಯುದ್ಧ ನಿಲ್ಲಿಸುವಂತೆ ಅಂತರರಾಷ್ಟ್ರೀಯ ಸಮುದಾಯ ಒತ್ತಡ ಹೇರಿತ್ತು. ಅಮೆರಿಕ ಹಾಗೂ ಇರಾನ್‌, ಸಂಘರ್ಷ ಅಂತ್ಯಗೊಳಿಸುವ ನಿಟ್ಟಿನಲ್ಲಿ ಶಾಂತಿ ಮಾತುಕತೆ ನಡೆಸುತ್ತಿವೆ. ಏತನ್ಮಧ್ಯೆ, ಅಲಿ ಖಮೇನಿ ಅಂತ್ಯಸಂಸ್ಕಾರದ ವಿಧಿವಿಧಾನಗಳು ಜುಲೈ 4ರಿಂದ ಆರಂಭವಾಗಿದ್ದು, ಜುಲೈ 9ರವರೆಗೆ ನಡೆಯಲಿವೆ.

ಅಲಿ ಖಮೇನಿಯ ಪುತ್ರಿ, ಅಳಿಯ, ಸೊಸೆ, 14 ತಿಂಗಳ ಮೊಮ್ಮಗಳ ಶವಪೆಟ್ಟಿಗೆಯನ್ನೂ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗಿದೆ.

ಮೊಜ್ತಬಾ ಸುಳಿವಿಲ್ಲ
ಅಲಿ ಖಮೇನಿ ಹತ್ಯೆ ನಂತರ ಪರಮೋಚ್ಚ ನಾಯಕನಾಗಿ ಆಯ್ಕೆಯಾಗಿರುವ ಮೊಜ್ತಬಾ ಖಮೇನಿ, ಸಂಘರ್ಷ ಆರಂಭವಾದಾಗಿನಿಂದ ಒಮ್ಮೆಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಫೆಬ್ರುವರಿ 28ರಂದು ನಡೆಸಿದ ದಾಳಿ ವೇಳೆ ಮೊಜ್ತಬಾ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿತ್ತು. ಅಂದು ಇಸ್ರೇಲ್‌ ಕ್ಷಿಪಣಿಗಳು ಅಲಿ ಖಮೇನಿ ನಿವಾಸಕ್ಕೆ ಅಪ್ಪಳಿಸುವ ಸ್ವಲ್ಪ ಸಮಯಕ್ಕೂ ಮುನ್ನ ಮೊಜ್ತಬಾ ಅವರು ಉದ್ಯಾನದಲ್ಲಿ ವಿಹರಿಸುತ್ತಿದ್ದರು. ಅದೇ ಕಾರಣದಿಂದ ಅವರ ಜೀವ ಉಳಿದಿದೆ ಎಂದೂ ಹೇಳಲಾಗಿತ್ತು. ಅಲ್ಲಿಂದಾಚೆಗೆ ಅವರು ಸಾರ್ವಜನಿಕರೆದುರು ಬಂದಿಲ್ಲ. ಟಿವಿಯಲ್ಲಾಗಲೀ, ಚಿತ್ರೀಕರಿಸಿದ ಯಾವುದೇ ವಿಡಿಯೊದಲ್ಲಾಗಲೀ ಕಾಣಿಸಿಕೊಂಡಿಲ್ಲ.

ಮೊಜ್ತಬಾ ಅವರು ಮಾನಸಿಕವಾಗಿ ಸದೃಢವಾಗಿದ್ದಾರೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬುದಾಗಿ ಪದೇ ಪದೇ ಅಧಿಕೃತ ಹೇಳಿಕೆಗಳು ಪ್ರಕಟವಾಗುತ್ತಿವೆಯಾದರೂ, ದೈಹಿಕ ಮತ್ತು ಮಾನಸಿಕ ಸ್ಥಿತಿಗತಿಯ ಬಗ್ಗೆ ಕಳವಳ ಇದ್ದೇ ಇದೆ. ದೀರ್ಘಾವಧಿಯಿಂದ ಅವರು ಎಲ್ಲೂ ಕಾಣಿಸಿಕೊಳ್ಳದಿರುವುದೇ ಇದಕ್ಕೆ ಕಾರಣ.

ಖಮೇನಿ ಅಂತ್ಯಕ್ರಿಯೆ: ಪ್ರಧಾನಿ ಮೋದಿ ನೇತೃತ್ವದ ನಿಯೋಗ ಭಾಗವಹಿಸದಿರಲು ಕಾರಣವೇನು?ಖಮೇನಿ ಪಾರ್ಥಿವ ಶರೀರ 125 ದಿನ ಕಾಪಿಟ್ಟ ಇರಾನ್‌ಗೆ ಅಂತ್ಯಕ್ರಿಯೆ ಹೊತ್ತಲ್ಲಿ ಆತಂಕ

ಭದ್ರತೆಯ ಕಾರಣದಿಂದಾಗಿ ಗೋಪ್ಯವಾಗಿ ಉಳಿದಿದ್ದಾರೆ ಎಂದು ಕೆಲವರು ವಾದಿಸಿದರೆ, ಇನ್ನೂ ಹಲವರು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರತಿಪಾದಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಮೊಜ್ತಬಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ದೇಶದ ಜನರಲ್ಲಿ ಭರವಸೆ ಮೂಡಿಸಲು ಮತ್ತು ಆಡಳಿತದಲ್ಲಿ ಸ್ಥಿರತೆ ಸಾಧಿಸುವ ನಿಟ್ಟಿನಲ್ಲಿ ಅತ್ಯಗತ್ಯವಾಗಿದೆ.

ಹೊಸ ನಾಯಕನ ಕಾಣುವ ತವಕ
ಅಲಿ ಖಮೇನಿ ಹತ್ಯೆಯಿಂದ ತೀವ್ರ ಶೋಕದಲ್ಲಿರುವ ಭಾರಿ ಸಂಖ್ಯೆಯ ಜನರು ಮೊಸಲ್ಲಾದಲ್ಲಿ ರಾತ್ರಿಯಿಡೀ ಸೇರಿದ್ದರು. ಅಪಾರದ ದುಃಖದ ನಡುವೆಯೂ ಅವರೆಲ್ಲ ನೂತನ ನಾಯಕನನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ ಎಂದು ವರದಿಯಾಗಿದೆ.

'ಪ್ರಾರ್ಥನೆ ಆರಂಭವಾಗುವ ಮೊದಲು ಮೊಜ್ತಬಾ ಖಮೇನಿ ಬರುತ್ತಾರೆ ಎಂದು ನಿರೀಕ್ಷಿಸಿದ್ದೆವು. ಅದಕ್ಕಾಗಿ, ಕೊನೇ ಕ್ಷಣದವರೆಗೂ ಕಾದಿದ್ದೆವು. ಅವರನ್ನು ಕಣ್ತುಂಬಿಕೊಳ್ಳುವುದು ನಮ್ಮ ಆಸೆಯಾಗಿತ್ತು' ಎಂದು ಯುವತಿಯೊಬ್ಬರು ತಸ್ನಿಮ್ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.

ರಾಜಧಾನಿಯತ್ತ ಜನಸಾಗರ ಹರಿದುಬರುತ್ತಲೇ ಇದೆ. ಸೋಮವಾರ ಬೃಹತ್‌ ಮೆರವಣಿಗೆ ಆಯೋಜಿಸಲಾಗಿದ್ದು, ಪಾರ್ಥಿವ ಶರೀರವನ್ನು ಮಂಗಳವಾರ ಕೋಮ್‌ ನಗರಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ನಂತರ (ಬುಧವಾರ), ಇರಾಕ್‌ನ ಪವಿತ್ರ ನಗರಗಳಾದ ನಜಾಫ್‌ ಮತ್ತು ಕೆರ್ಬಾಲಾಗೆ ಕೊಂಡೊಯ್ಯಲಾಗುತ್ತದೆ. ಗುರುವಾರ ಇರಾನ್‌ಗೆ ವಾಪಸ್‌ ತಂದು, ಮಶಾದ್‌ನಲ್ಲಿ ಮತ್ತೊಮ್ಮೆ ಮೆರವಣಿಗೆ ನಡೆಸಿ, ಸಮಾಧಿ ಮಾಡಲಾಗುತ್ತದೆ ಎನ್ನಲಾಗಿದೆ.

ಖಮೇನಿ ಅಂತಿಮ ದರ್ಶನಕ್ಕೆ ಜನಪ್ರವಾಹ: ಟೆಹರಾನ್‌ನಲ್ಲಿ ಬಿಗಿ ಭದ್ರತೆಆಯತೊಲ್ಲಾ ಖಮೇನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಜಾಗತಿಕ ನಾಯಕರಿವರು...
Dailyhunt
Disclaimer: This content has not been generated, created or edited by Dailyhunt. Publisher: Prajavani