ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು
ಐಪಿಎಲ್ ಫೈನಲ್ ಸೋಲಿನ ಬಳಿಕ ಬಸ್‌ನ ಬೆಂಕಿ ಅವಘಡದಲ್ಲಿ ಸಿಲುಕಿ ಒದ್ದಾಡಿದ GT

ಐಪಿಎಲ್ ಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿದ ಗುಜರಾತ್ ಟೈಟನ್ಸ್ ತಂಡ ಅದಾದ ಸ್ವಲ್ಪ ಸಮಯದಲ್ಲೇ ಮತ್ತೊಂದು ಆಘಾತದಿಂದ ಪಾರಾಗಿದೆ.
ಹೌದು, ಪಂದ್ಯ ಮುಗಿಸಿ ತೆರಳುತ್ತಿದ್ದ ತಂಡದ ಬಸ್‌ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.
ಐಪಿಎಲ್ ಫೈನಲ್ ಸೋಲಿನ ಬಳಿಕ ಬಸ್‌ನ ಬೆಂಕಿ ಅವಘಡದಲ್ಲಿ ಸಿಲುಕಿ ಒದ್ದಾಡಿದ GTKarnataka Politics: ಸಚಿವ ಸಂಪುಟ ರಚನೆ ಕಸರತ್ತು ದೆಹಲಿಗೆ ವರ್ಗ

ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಯಾದ ಬೆನ್ನಲ್ಲೇ, ಮಂತ್ರಿ ಮಂಡಲ ರಚನೆಯ ಕಸರತ್ತು ಬಿರುಸು ಪಡೆದಿದೆ.
Karnataka Politics: ಸಚಿವ ಸಂಪುಟ ರಚನೆ ಕಸರತ್ತು ದೆಹಲಿಗೆ ವರ್ಗಗುಜರಾತ್ ಟೈಟನ್ಸ್ ತವರು ತಂಡವಾದರೂ ಇಲ್ಲಿರುವ ಅಭಿಮಾನಿಗಳು ನಮ್ಮವರು: ಕೊಹ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ.
ಗುಜರಾತ್ ಟೈಟನ್ಸ್ ತವರು ತಂಡವಾದರೂ ಇಲ್ಲಿರುವ ಅಭಿಮಾನಿಗಳು ನಮ್ಮವರು: ಕೊಹ್ಲಿಹೋರಾಟದಲ್ಲಿ ನಿಮ್ಮೊಂದಿಗೆ ಇರುತ್ತೇವೆ: ಡಿ.ಕೆ.ಶಿವಕುಮಾರ್‌ಗೆ ಸಿದ್ದರಾಮಯ್ಯ ಭರವಸೆ

'ದೇಶದ ಏಕತೆ, ಸಮಗ್ರತೆ ಯನ್ನು ಉಳಿಸಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಕಾಂಗ್ರೆಸ್‌ನಿಂದ ಮಾತ್ರವೇ ಇದು ಸಾಧ್ಯವಿದ್ದು, ಈ ಹೋರಾಟದಲ್ಲಿ ನಾವು ನಿಮ್ಮೊಂದಿಗೆ ಇರುತ್ತೇವೆ' ಎಂದು ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ (ಸಿಎಲ್‌ಪಿ) ಡಿ.ಕೆ.ಶಿವಕುಮಾರ್ ಅವರಿಗೆ ಭರವಸೆ ನೀಡಿದ್ದಾರೆ.
ಭಾರತದ ಭೂಪ್ರದೇಶಗಳನ್ನು ನಾವೇ ಅತಿಕ್ರಮಣ ಮಾಡಿಕೊಂಡಿದ್ದೇವೆ ಎಂದ ನೇಪಾಳ ಪ್ರಧಾನಿ

ಭಾರತದ ಭೂಪ್ರದೇಶಗಳನ್ನು ತನ್ನ ದೇಶವು 'ಅತಿಕ್ರಮಣ' ಮಾಡುತ್ತಿರುವ ಬಗ್ಗೆ ತಿಳಿದುಬಂದಿದೆ ಎಂದು ನೇಪಾಳ ಪ್ರಧಾನಿ ಬಾಲೇಂದ್ರ ಶಾ ಭಾನುವಾರ ಹೇಳಿದ್ದಾರೆ.
ಭಾರತದ ಭೂಪ್ರದೇಶಗಳನ್ನು ನಾವೇ ಅತಿಕ್ರಮಣ ಮಾಡಿಕೊಂಡಿದ್ದೇವೆ ಎಂದ ನೇಪಾಳ ಪ್ರಧಾನಿತಮಿಳುನಾಡು ಖಾಸಗಿ ಶಾಲೆಗಳಲ್ಲಿ ಶುಲ್ಕ ಪಟ್ಟಿ ಪ್ರದರ್ಶನ ಕಡ್ಡಾಯಗೊಳಿಸಿದ ವಿಜಯ್
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಧಿಕಾರಕ್ಕೆ ಬಂದಾಗಿನಿಂದ ಒಂದೊಂದೇ ಸುಧಾರಣಾ ಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ. ಈಗ ಶಿಕ್ಷಣದ ಮೇಲೆ ಗಮನಹರಿಸಿರುವ ಅವರು, ಎಲ್ಲಾ ಖಾಸಗಿ ಶಾಲೆಗಳು ತಮ್ಮ ಸೂಚನಾ ಫಲಕಗಳಲ್ಲಿ ಸರ್ಕಾರ ನಿಗದಿಪಡಿಸಿದ ಬೋಧನಾ ಶುಲ್ಕದ ವಿವರಗಳನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿದ್ದಾರೆ.
ತಮಿಳುನಾಡು ಖಾಸಗಿ ಶಾಲೆಗಳಲ್ಲಿ ಶುಲ್ಕ ಪಟ್ಟಿ ಪ್ರದರ್ಶನ ಕಡ್ಡಾಯಗೊಳಿಸಿದ ವಿಜಯ್ಫೈನಲ್ನಲ್ಲಿ ವಿರಾಟ್ ಕೊಹ್ಲಿ ಆರ್ಭಟ; ಈ ಸಲವೂ ಕಪ್ ಆರ್‌ಸಿಬಿಗೇ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಣ್ಮಣಿ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸಲಿಲ್ಲ. ಸತತ ಎರಡನೇ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಬೆಂಗಳೂರಿಗೆ ತಂದರು. ಸಾಬರಮತಿ ನದಿ ತೀರದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಹುಟ್ಟಿದ ಸಂಭ್ರಮದ ಅಲೆಗಳು ಕರ್ನಾಟಕದ ಬೀದಿಬೀದಿಗಳಿಗೂ ಅಪ್ಪಳಿಸಿದವು.
ಮಧ್ಯಪ್ರದೇಶ: ಚಂಬಲ್‌ನ ಮಾಜಿ ದರೋಡೆಕೋರನ ಭಾವಚಿತ್ರಕ್ಕೆ ಹಾರ ಹಾಕಿದ ಬಿಜೆಪಿ ಶಾಸಕ!

ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಜನ್ಮದಿನಾಚರಣೆಯ ಅಂಗವಾಗಿ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ, ಚಂಬಲ್‌ನ ಮಾಜಿ ದರೋಡೆಕೋರ ರಾಂಬಾಬು ಗಡರಿಯಾ ಅವರ ಭಾವಚಿತ್ರಕ್ಕೆ ಬಿಜೆಪಿ ಶಾಸಕರೊಬ್ಬರು ಹಾರ ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ.
ಮಧ್ಯಪ್ರದೇಶ: ಚಂಬಲ್‌ನ ಮಾಜಿ ದರೋಡೆಕೋರನ ಭಾವಚಿತ್ರಕ್ಕೆ ಹಾರ ಹಾಕಿದ ಬಿಜೆಪಿ ಶಾಸಕ!ಬೇರೊಬ್ಬನಿಗೆ ಲಂಚ ಪಡೆಯುವುದೂ ಅಪರಾಧ: ಕರ್ನಾಟಕ HC ತೀರ್ಪು ರದ್ದು ಮಾಡಿದ ಸುಪ್ರೀಂ

ಸರ್ಕಾರಿ ನೌಕರನು ತನಗೆ ಅಲ್ಲದಿದ್ದರೂ, ಅಧೀನ ನೌಕರ ಒಳಗೊಂಡಂತೆ ಇನ್ನೊಬ್ಬನಿಗಾಗಿ ಲಂಚಕ್ಕೆ ಬೇಡಿಕೆಯಿಟ್ಟರೆ ಅಥವಾ ಲಂಚ ಪಡೆಯಲು ಪ್ರಯತ್ನಿಸಿದರೆ ಆತನನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಪರಾಧಿಯಾಗಿ ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಬೇರೊಬ್ಬನಿಗೆ ಲಂಚ ಪಡೆಯುವುದೂ ಅಪರಾಧ: ಕರ್ನಾಟಕ HC ತೀರ್ಪು ರದ್ದು ಮಾಡಿದ ಸುಪ್ರೀಂGT ವಿರುದ್ಧ ಗೆದ್ದು ದಾಖಲೆ ಬರೆದ RCB: ಧೋನಿ, ರೋಹಿತ್ ಸಾಲಿಗೆ ಸೇರಿದ ಪಾಟಿದಾರ್

ಆರ್‌ಸಿಬಿ ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆದ ಸಾಧನೆ ಮಾಡಿತು. ಆ ಮೂಲಕ ಸತತ ಎರಡು ಟ್ರೋಫಿ ಗೆದ್ದ ನಾಯಕರುಗಳಾದ ಧೋನಿ, ರೋಹಿತ್ ಶರ್ಮಾ ಸಾಲಿಗೆ ಪಾಟಿದಾರ್ ಸೇರಿದರು.
GT ವಿರುದ್ಧ ಗೆದ್ದು ದಾಖಲೆ ಬರೆದ RCB: ಧೋನಿ, ರೋಹಿತ್ ಸಾಲಿಗೆ ಸೇರಿದ ಪಾಟಿದಾರ್
