ರಾಜ್ಯ, ದೇಶ, ವಿದೇಶ, ಸಿನಿಮಾ ಹಾಗೂ ಕ್ರೀಡೆಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
ಯುವಕರ ದಾರಿ ತಪ್ಪಿಸಲು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಸಿಜೆಐ

ನ್ಯಾಯಾಲಯದ ಕಲಾಪ ನಡೆಯುತ್ತಿದ್ದಾಗ ತಾವು ನೀಡಿದ ಹೇಳಿಕೆಯ ವಿಡಿಯೊದ ಸಣ್ಣ ತುಣುಕನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿ ಯುವಕರನ್ನು ದಾರಿತಪ್ಪಿಸುವ ದುರುದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.
ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಯುವಕರ ದಾರಿ ತಪ್ಪಿಸಲು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಸಿಜೆಐಮಹಾರಾಷ್ಟ್ರದ ಆಶ್ರಮ ಶಾಲೆಗಳಲ್ಲಿ 2 ವರ್ಷದಲ್ಲಿ 584 ವಿದ್ಯಾರ್ಥಿಗಳ ಸಾವು

ಮಹಾರಾಷ್ಟ್ರದ ಸರ್ಕಾರಿ ಮತ್ತು ಅನುದಾನಿತ ಆಶ್ರಮ ಶಾಲೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ 584 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಅಂದರೆ 730 ದಿನಗಳಲ್ಲಿ ದಿನಕ್ಕೆ ಸುಮಾರು ಸರಾಸರಿ 0.8 ವಿದ್ಯಾರ್ಥಿಗಳ ಸಾವು ಸಂಭವಿಸಿದೆ.
ಮಹಾರಾಷ್ಟ್ರದ ಆಶ್ರಮ ಶಾಲೆಗಳಲ್ಲಿ 2 ವರ್ಷದಿಂದ ಪ್ರತಿದಿನ ವಿದ್ಯಾರ್ಥಿಯ ಸಾವು!13ನೆ ವಯಸ್ಸಿಗೆ ಬ್ರಿಟಿಷರಿಗೆ ದುಃಸ್ವಪ್ನ: ಮಣಿಪುರದ ರಾಣಿ ಗೈಡಿನ್ ರೋಚಕ ಹೋರಾಟ

13ನೆ ವಯಸ್ಸಿಗೇ ಬ್ರಿಟೀಷರ ವಿರುದ್ಧ ಸೆಟೆದು ನಿಂತಿದ್ದ ಅವರು, ಶಾಲೆಯಲ್ಲಿ ಪಾಠ ಕಲಿಯುವ ಹಂತದಲ್ಲಿದ್ದಾಗಲೇ ಆಂಗ್ಲರಿಗೆ ಕಠಿಣ ಪಾಠ ಕಲಿಸಿದ್ದರು. ಸ್ವಾತಂತ್ರ್ಯವನ್ನು ವಯಸ್ಸು, ಲಿಂಗ ಅಥವಾ ಭೌಗೋಳಿಕ ಗಡಿಗಳಿಂದ ಬಂಧಿಸಲು ಸಾಧ್ಯವಿಲ್ಲ ಎಂದು ಸಾರಿ ಹೇಳಿದ್ದರು.
13ನೆ ವಯಸ್ಸಿಗೆ ಬ್ರಿಟಿಷರಿಗೆ ದುಃಸ್ವಪ್ನ: ಮಣಿಪುರದ ರಾಣಿ ಗೈಡಿನ್ ರೋಚಕ ಹೋರಾಟವಿಧಾನಸೌಧದಲ್ಲಿ ಫ್ರೀಡಂ ಹಬ್ಬ: ಮನೆಯಿಂದ ಹೊರಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ...

ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ವಿಧಾನ ಸೌಧದ ಮುಂಭಾಗದಲ್ಲಿ ಸಾರ್ವಜನಿಕರಿಗಾಗಿ ಇದೇ ಮೊದಲ ಬಾರಿಗೆ 'ಫ್ರೀಡಂ ಹಬ್ಬ' ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈಗಾಗಲೇ, 18 ಸಾವಿರಕ್ಕೂ ಅಧಿಕ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಹಾಗಾಗಿ, ಈ ಕಾರ್ಯಕ್ರಮಕ್ಕೆ ಹೋಗುವ ಮೊದಲ ಸಾರ್ವಜನಿಕರು ತೆಗೆದುಕೊಳ್ಳಬೇಕಾದ ಪ್ರಮುಖ ಮಾಹಿತಿ ಇಲ್ಲಿದೆ.
ವಿಧಾನಸೌಧದಲ್ಲಿ ಫ್ರೀಡಂ ಹಬ್ಬ: ಮನೆಯಿಂದ ಹೊರಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ...ಮತದಾರರ ಪಟ್ಟಿಗೆ ಹೆಸರು ಸೇರಿಸೋದು ಗೊತ್ತಿದೆ: ನಟ ಪ್ರಕಾಶ್ ರಾಜ್

'ಡಿಲಿಟ್ ಮಾಡಿರುವ ನನ್ನ ಹೆಸರನ್ನು ಮತದಾರರ ಪಟ್ಟಿಗೆ ಮತ್ತೆ ಹೇಗೆ ಸೇರಿಸಬೇಕೆಂದು ಗೊತ್ತಿದೆ' ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ಇತಿಹಾಸದ ಪುಟದಲ್ಲಿ ಮರೆತುಹೋದ ಕರ್ನಾಟಕದ ಸ್ವಾತಂತ್ರ್ಯ ಯೋಧರು..

ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ತಿರುವಿದಾಗ ಕರ್ನಾಟಕದ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಮೈಲಾರ ಮಹಾದೇವಪ್ಪನವರಂತಹ ಹೆಸರುಗಳು ತಕ್ಕಮಟ್ಟಿಗೆ ನಮಗೆ ನೆನಪಾಗುತ್ತವೆ.
ಇತಿಹಾಸದ ಪುಟದಲ್ಲಿ ಮರೆತುಹೋದ ಕರ್ನಾಟಕದ ಸ್ವಾತಂತ್ರ್ಯ ಯೋಧರು..ಸಾವರ್ಕರ್ ಕುರಿತ ಹೇಳಿಕೆ: ರಾಹುಲ್ ವಿರುದ್ಧದ ಪ್ರಕರಣ ರದ್ದುಗೊಳಿಸಿದ 'ಸುಪ್ರೀಂ'

ಹಿಂದುತ್ವವಾದಿ ನಾಯಕ ವಿನಾಯಕ ದಾಮೋದರ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನಹಾನಿ ದೂರು ಹಾಗೂ ವಿಚಾರಣಾ ನ್ಯಾಯಾಲಯದ ಸಮನ್ಸ್ ಅನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಪಡಿಸಿದೆ.
ಸಾವರ್ಕರ್ ಕುರಿತ ಹೇಳಿಕೆ: ರಾಹುಲ್ ವಿರುದ್ಧದ ಪ್ರಕರಣ ರದ್ದುಗೊಳಿಸಿದ 'ಸುಪ್ರೀಂ'ಕಾವೇರಿ ವಿವಾದದಲ್ಲಿ ಕುಮಾರಸ್ವಾಮಿ, ಪ್ರಲ್ಹಾದ ಜೋಶಿ ಪಾತ್ರ: ಎಂ.ಲಕ್ಷ್ಮಣ ಆರೋಪ

'ತಮಿಳುನಾಡಿಗೆ ನೀರು ಹರಿಸಬೇಕೆಂಬ ವಿಚಾರದಲ್ಲಿ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಪ್ರಲ್ಹಾದ ಜೋಶಿ ಅವರ ಪಾತ್ರವಿದೆ. ರಾಜ್ಯ ಸರ್ಕಾರಕ್ಕೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಮೇಲೆ ಪ್ರಭಾವ ಬೀರುತ್ತಿದ್ದಾರೆ' ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದರು.
ಕಾವೇರಿ ವಿವಾದದಲ್ಲಿ ಕುಮಾರಸ್ವಾಮಿ, ಪ್ರಲ್ಹಾದ ಜೋಶಿ ಪಾತ್ರ: ಎಂ.ಲಕ್ಷ್ಮಣ ಆರೋಪ600ನೇ ಟೆಸ್ಟ್‌ನಲ್ಲಿ ನಾಯಕತ್ವ ನನಗೆ ದೊಡ್ಡ ಗೌರವ: ಶುಭಮನ್ ಗಿಲ್

ಗಾಲ್: ಭಾರತ ಆಡುತ್ತಿರುವ 600ನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿರುವುದು 'ದೊಡ್ಡ ಗೌರವ' ಎಂದು ಶುಭಮನ್ ಗಿಲ್ ಹೇಳಿದ್ದಾರೆ.
600ನೇ ಟೆಸ್ಟ್‌ನಲ್ಲಿ ನಾಯಕತ್ವ ನನಗೆ ದೊಡ್ಡ ಗೌರವ: ಶುಭಮನ್ ಗಿಲ್ನೀಟ್: 51ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು ವೈದ್ಯಕೀಯ ಸೀಟು ಗಿಟ್ಟಿಸಿದ ಛಲದಂಕಮಲ್ಲ

ಜೀವನದುದ್ದಕ್ಕೂ ಕಲಿಯುವುದು ಇದ್ದೇ ಇರುತ್ತದೆ.. ಸಾಧನೆಗೆ ವಯಸ್ಸಿಲ್ಲ ಎಂಬ ಮಾತಿಗೆ ತಮಿಳುನಾಡಿನ ನಾಗಪಟ್ಟಣಂನ 51 ವರ್ಷದ ಸುರೇಶ್ ಕುಮಾರ್ ಉದಾಹರಣೆಯಾಗಿದ್ದಾರೆ. ಈ ವಯಸ್ಸಿನಲ್ಲಿ ಅವರು ನೀಟ್ ಪರೀಕ್ಷೆ ಪಾಸ್ ಮಾಡುವ ಮೂಲಕ ವೈದ್ಯಕೀಯ ಸೀಟು ಗಿಟ್ಟಿಸಿದ್ಧಾರೆ.
ನೀಟ್: 51ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು ವೈದ್ಯಕೀಯ ಸೀಟು ಗಿಟ್ಟಿಸಿದ ಛಲದಂಕಮಲ್ಲ
