ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಇರಾನ್ ಸಂಘರ್ಷಕ್ಕೂ ಭಾರತದ ಸಮೋಸಾಕ್ಕೂ ನಂಟು: ಯುದ್ಧದ ಹೊರೆ ಯಾರಿಗೆ?
ಒಂದು ಸಾಲಿನಲ್ಲಿಅಮೆರಿಕ-ಇರಾನ್ ನಡುವಿನ ಯುದ್ಧವು ಜಾಗತಿಕ ಇಂಧನ ಪೂರೈಕೆಯನ್ನು ಬಾಧಿಸಿ, ಏಷ್ಯಾದ ದೇಶಗಳಲ್ಲಿ ಬೀದಿ ಆಹಾರದ ಬೆಲೆ ಏರಿಕೆಯಾಗಲು ಮತ್ತು ಜನಸಾಮಾನ್ಯರ ಜೀವನೋಪಾಯಕ್ಕೆ ಸಂಕಷ್ಟ ತಂದೊಡ್ಡಿದೆ.
ಪ್ರಮುಖ ಪ್ರಶ್ನೋತ್ತರ
ಇರಾನ್ ಯುದ್ಧದಿಂದ ಆಹಾರ ಬೆಲೆ ಏರಿಕೆ ಯಾಕೆ?
ಯುದ್ಧದ ಪರಿಣಾಮವಾಗಿ ಇಂಧನ ಆಮದು ದುಬಾರಿಯಾಗಿರುವುದರಿಂದ, ಸಾರಿಗೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಾಗಿ ಬೀದಿ ಆಹಾರಗಳ ಬೆಲೆ ಏರಿಕೆಗೆ ಕಾರಣವಾಗಿದೆ.
ಭಾರತದ ಸಮೋಸಾ ಬೆಲೆ ಮೇಲೆ ಪ್ರಭಾವ ಬೀರಿದ್ದೇನು?
ಭಾರತದ ಬಹುಪಾಲು ಎಲ್‌ಪಿಜಿ ಅನಿಲ ಹೊರ್ಮುಜ್ ಜಲಸಂಧಿಯ ಮೂಲಕ ಬರುತ್ತದೆ. ಯುದ್ಧದಿಂದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಅನಿಲದ ಬೆಲೆ ದುಪ್ಪಟ್ಟಾಗಿರುವುದು ಸಮೋಸಾದ ಬೆಲೆಯನ್ನು ಏರಿಕೆಯಾಗಿದೆ.
ಏಷ್ಯದ ಇತರ ದೇಶಗಳ ಪರಿಸ್ಥಿತಿ ಏನಾಗಿದೆ?
ದಕ್ಷಿಣ ಕೊರಿಯಾದಲ್ಲಿ ನೂಡಲ್ಸ್, ಥಾಯ್ಲೆಂಡ್‌ನಲ್ಲಿ ಪಪ್ಪಾಯಿ ಸಲಾಡ್ ಮತ್ತು ಇಂಡೋನೇಷ್ಯಾದಲ್ಲಿ ಗಾಡೋ-ಗಾಡೋ ದರಗಳು ಹೆಚ್ಚಾಗಿದ್ದು, ವ್ಯಾಪಾರಿಗಳು ಗ್ರಾಹಕರ ಕೊರತೆಯನ್ನು ಅನುಭವಿಸುತ್ತಿದ್ದಾರೆ.
ಯುದ್ಧದ ಆರ್ಥಿಕ ಹೊರೆಯ ನಿಜವಾದ ಬಲಿಪಶು ಯಾರು?
ಯುದ್ಧದ ಪರಿಣಾಮವನ್ನು ಅಂತಿಮವಾಗಿ ಸೈನಿಕರಿಗಿಂತ ಹೆಚ್ಚಾಗಿ ದಿನಗೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಮತ್ತು ಮಧ್ಯಮ ವರ್ಗದ ಕುಟುಂಬಗಳು ಅನುಭವಿಸುತ್ತಿವೆ.
ಸಣ್ಣ ವ್ಯಾಪಾರಿಗಳ ಮೇಲೆ ಆಗಿರುವ ಪರಿಣಾಮಗಳೇನು?
ಅಡುಗೆಗೆ ಬಳಸುವ ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಗ್ರಾಹಕರ ಕಡಿತದಿಂದ ಅನೇಕ ಸಣ್ಣ ವ್ಯಾಪಾರಿಗಳ ದೈನಂದಿನ ಲಾಭವು ಅರ್ಧಕ್ಕಿಂತ ಹೆಚ್ಚು ಕುಸಿದಿದೆ.
ಪ್ರಮುಖ ಅಂಕಿಅಂಶಗಳು
ಶೇ 60ಭಾರತದ ಎಲ್‌ಪಿಜಿ ಆಮದು ಅವಲಂಬನೆಶೇ 30ಥಾಯ್ಲೆಂಡ್ ಆಹಾರ ಮಾರಾಟ ವೆಚ್ಚ ಹೆಚ್ಚಳ₹3,600ಲಖನೌನಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ10,000 ವಾನ್ಸಿಯೋಲ್ ನೂಡಲ್ಸ್ ಬೆಲೆ ಏರಿಕೆ18 ಸಾವಿರ ರೂಪಿಯಾಇಂಡೋನೇಷ್ಯಾದ ಗಾಡೋ-ಗಾಡೋ ಬೆಲೆ ಏರಿಕೆ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಇರಾನ್ ಹಾಗೂ ಅಮೆರಿಕ ಯುದ್ಧದ ಆರ್ಥಿಕ ಪರಿಣಾಮಗಳು ಸಾವಿರಾರು ಕಿಲೋಮೀಟರ್ ದೂರದ ಏಷ್ಯಾದ ದೇಶಗಳಲ್ಲೂ ತಟ್ಟುತ್ತಿವೆ. ಭಾರತದ ಸಮೋಸಾ, ದಕ್ಷಿಣ ಕೊರಿಯಾದ ನೂಡಲ್ಸ್, ಥಾಯ್ಲೆಂಡ್‌ನ ಪಪ್ಪಾಯಿ ಸಲಾಡ್ ಮತ್ತು ಇಂಡೋನೇಷ್ಯಾದ ಗಾಡೋ-ಗಾಡೋ ಸೇರಿದಂತೆ ಹಲವು ಜನಪ್ರಿಯ ಬೀದಿ ಆಹಾರಗಳ ಬೆಲೆ ಏರಿಕೆಯಾಗಿದ್ದು, ವ್ಯಾಪಾರಿಗಳು ಮತ್ತು ಗ್ರಾಹಕರು ಸಂಕಷ್ಟ ಎದುರಿಸುತ್ತಿದ್ದಾರೆ.
ಐದು ತಿಂಗಳಾದರೂ ಅಂತ್ಯ ಕಾಣದ ಯುದ್ಧ: ಟ್ರಂಪ್‌ಗೆ ಇರಾನ್ ಕಲಿಸಿದ ಪಾಠಅಮೆರಿಕ-ಇರಾನ್ ನಡುವಿನ ತಾತ್ಕಾಲಿಕ ಕದನ ವಿರಾಮ ಮುರಿದು ಬಿದ್ದು ಯುದ್ಧ ಮತ್ತೆ ತೀವ್ರಗೊಂಡ ಬಳಿಕ, ಪಶ್ಚಿಮ ಏಷ್ಯಾದಿಂದ ಇಂಧನ ಆಮದು ಮೇಲೆ ಹೆಚ್ಚು ಅವಲಂಬಿತವಾಗಿರುವ ಏಷ್ಯಾದ ಹಲವು ರಾಷ್ಟ್ರಗಳು ಆರ್ಥಿಕ ಹೊಡೆತ ಅನುಭವಿಸಿವೆ. ಕರೆನ್ಸಿ ಮೌಲ್ಯ ಕುಸಿತ, ಹಣದುಬ್ಬರ ಏರಿಕೆ ಹಾಗೂ ಆಹಾರ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಬೆಲೆ ಏರಿಕೆಯು ಬೀದಿ ಆಹಾರ ವ್ಯಾಪಾರಿಗಳ ಮೇಲೆ ನೇರ ಪರಿಣಾಮ ಬೀರಿದೆ.
ದಕ್ಷಿಣ ಕೊರಿಯಾದಲ್ಲಿ ನೂಡಲ್ಸ್‌ಗೆ ಯುದ್ಧದ ಬಿಸಿ
ಸಿಯೋಲ್‌ನ ದಕ್ಷಿಣ ಭಾಗದಲ್ಲಿ 59 ವರ್ಷದ ಕಿಮ್ ಮೂನ್-ಜಂಗ್ ಹಲವು ವರ್ಷಗಳಿಂದ 'ಕಾಲ್ಗುಕ್ಸು' ( ನೂಡಲ್ಸ್) ಅನ್ನು 9 ಸಾವಿರ ವಾನ್‌ಗೆ (ಸುಮಾರು ₹ 590) ಮಾರಾಟ ಮಾಡುತ್ತಿದ್ದರು. ಆದರೆ ಹಿಟ್ಟು, ಕಪ್ಪೆಚಿಪ್ಪು, ತರಕಾರಿ ಸೇರಿದಂತೆ ಎಲ್ಲ ಪದಾರ್ಥಗಳ ಬೆಲೆ ಏರಿಕೆಯಿಂದ ಮುಂದಿನ ಕೆಲ ತಿಂಗಳಲ್ಲಿ ಅದನ್ನು 10,000 ((ಸುಮಾರು ₹ 655) ವಾನ್‌ಗೆ ಏರಿಸಲು ನಿರ್ಧರಿಸಿದ್ದಾರೆ.
ಸಿಯೋಲ್‌ನಲ್ಲಿ 10,000 ವಾನ್‌ಗಿಂತ ಕಡಿಮೆ ದರದಲ್ಲಿ ಊಟ ಸಿಗುವ ಹೋಟೆಲ್‌ಗಳನ್ನು ಹುಡುಕಲು ನಾಗರಿಕರು ಈ ವರ್ಷ ಕ್ರೌಡ್‌ಸೋರ್ಸ್‌ಡ್ ಮ್ಯಾಪ್ ಕೂಡ ಸಿದ್ಧಪಡಿಸಿದ್ದಾರೆ.
'ಬೆಲೆ ಏರದ ಒಂದೇ ಒಂದು ಪದಾರ್ಥವೂ ಇಲ್ಲ. ಗ್ರಾಹಕರಿಗೂ ಪರಿಸ್ಥಿತಿ ಅರ್ಥವಾಗುತ್ತದೆ' ಎನ್ನುತ್ತಾರೆ ಕಿಮ್.
ಡೊನಾಲ್ಡ್ ಟ್ರಂಪ್ ರಣನೀತಿಗೆ ಜಗ್ಗದ ಇರಾನ್: ಇಕ್ಕಟ್ಟಿನಲ್ಲಿ ಅಮೆರಿಕ ಅಧ್ಯಕ್ಷಲಖನೌನ ಸಮೋಸಾ ಅಂಗಡಿಯವರ ಸಂಕಟ
'ಸಮೋಸಾ ಮಾರಾಟದಿಂದ ಈಗ ಕೇವಲ ಅಲ್ಪ ಲಾಭ ಮಾತ್ರ ಉಳಿಯುತ್ತಿದೆ' ಉತ್ತರ ಪ್ರದೇಶದ ಲಖನೌ ನಗರದ ಯಾದವ್ ಮಿಲ್ಕ್ ಡೈರಿ ಮಾಲೀಕ ಶುಭಂ ಯಾದವ್ ಹೇಳುತ್ತಾರೆ. ಅವರು ಬಳಸುವ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆ ದುಪ್ಪಟ್ಟಾಗಿ ₹3,600ಕ್ಕೆ ಏರಿಕೆಯಾಗಿದೆ.
ಭಾರತ ತನ್ನ ಎಲ್‌ಪಿಜಿಯ ಸುಮಾರು ಶೇ 60 ಅನ್ನು ಆಮದು ಮಾಡಿಕೊಳ್ಳುತ್ತದೆ, ಅದರ ಬಹುಪಾಲು ಹೊರ್ಮುಜ್ ಜಲಸಂಧಿ ಮೂಲಕ ಬರುತ್ತದೆ. ಯುದ್ಧದಿಂದ ಆ ಮಾರ್ಗದಲ್ಲಿ ಉಂಟಾದ ವ್ಯತ್ಯಯ ಅನಿಲ ಪೂರೈಕೆಯ ಮೇಲೂ ಪರಿಣಾಮ ಬೀರಿದೆ.
ಅನಿಲ ವೆಚ್ಚಕ್ಕೆ ಅನುಗುಣವಾಗಿ ಸಮೋಸಾದ ಬೆಲೆಯನ್ನು ದ್ವಿಗುಣಗೊಳಿಸಲು ಸಾಧ್ಯವಾಗದ ಕಾರಣ, ಅವರು ಪ್ರತಿ ಸಮೋಸಾಗೆ ಅಲ್ಪ ಪ್ರಮಾಣದಲ್ಲಿ ಮಾತ್ರ ಬೆಲೆ ಹೆಚ್ಚಿಸಿದ್ದಾರೆ. ಇದರಿಂದ ಲಾಭಾಂಶ ಮತ್ತಷ್ಟು ಕಡಿಮೆಯಾಗಿದ್ದು, ಮುಂದಿನ ತಿಂಗಳುಗಳಲ್ಲಿ ಮತ್ತೆ ಬೆಲೆ ಏರಿಸುವ ಅನಿವಾರ್ಯತೆ ಎದುರಾಗಬಹುದು ಎಂದು ಹೇಳಿದ್ದಾರೆ.
ಇರಾನ್ ಆಡಳಿತ ಬದಲಾವಣೆಗೆ ಮುಂದಾಗಿತ್ತೇ ಇಸ್ರೇಲ್? ಮೊಸಾದ್ ಸಂಚು ಬಯಲುಥಾಯ್ಲೆಂಡ್ನಲ್ಲಿ ಗ್ರಾಹಕರೇ ಕಡಿಮೆ!
ಬ್ಯಾಂಕಾಕ್‌ನಲ್ಲಿ ಕಳೆದ 20 ವರ್ಷಗಳಿಂದ 'ಸೋಮ್ ಟಮ್' (ಹಸಿ ಪಪ್ಪಾಯಿ ಸಲಾಡ್) ಮಾರಾಟ ಮಾಡುತ್ತಿರುವ ಸುಪಾತ್ರಾ ರುವಾಮ್ತೋತ್ ಅವರಿಗೆ ಈಗ ಗ್ರಾಹಕರಿಗಾಗಿ ಕಾಯುವ ಪರಿಸ್ಥಿತಿ ಬಂದಿದೆ.
"ಯುದ್ಧಕ್ಕೂ ಮುನ್ನ ಬೆಳಗ್ಗೆಯೇ ಆರ್ಡರ್‌ಗಳ ಸುರಿಮಳೆ ಆರಂಭವಾಗುತ್ತಿತ್ತು. ಮಧ್ಯಾಹ್ನದ ವೇಳೆಗೆ ಗ್ರಾಹಕರ ಸಾಲು ಎಷ್ಟಿರುತ್ತಿತ್ತೆಂದರೆ, ಊಟಕ್ಕಾಗಿ 30 ನಿಮಿಷಗಳವರೆಗೆ ಕಾಯಬೇಕಾಗುತ್ತಿತ್ತು. ಆದರೆ ಇಂದು ಆ ಗದ್ದಲವೇ ಇಲ್ಲ. ಗ್ರಾಹಕರಿಗಾಗಿ ವ್ಯಾಪಾರಿಯೇ ಕಾಯುವ ಪರಿಸ್ಥಿತಿ ಬಂದಿದೆ.
ವೆಚ್ಚ ಸುಮಾರು ಶೇ 30 ಹೆಚ್ಚಾದರೂ, ಗ್ರಾಹಕರು ಮತ್ತಷ್ಟು ದೂರವಾಗುವ ಭಯದಿಂದ ಅವರು ಬೆಲೆ ಏರಿಸಿಲ್ಲ. 'ಈಗ ಇರುವ ಬೆಲೆಯಲ್ಲೇ ಗ್ರಾಹಕರು ಕಡಿಮೆಯಾಗುತ್ತಿದ್ದಾರೆ. ಎಲ್ಲರೂ ಮಿತವ್ಯಯದಿಂದ ಬದುಕುತ್ತಿದ್ದಾರೆ' ಎಂದು ಅವರು ಹೇಳಿದ್ದಾರೆ. ಅವರ ದೈನಂದಿನ ಲಾಭ ಅರ್ಧಕ್ಕಿಂತಲೂ ಹೆಚ್ಚು ಕುಸಿದಿದೆ.
ಅಡುಗೆ ಮನೆಗೆ ತಟ್ಟಲಿದೆ ಪ್ರಶಾಂತ ಸಾಗರದ ಬಿಸಿ: ಅಕ್ಕಿ, ಸಕ್ಕರೆ, ಎಣ್ಣೆ ದುಬಾರಿ!ಇಂಡೋನೇಷ್ಯಾ: 'ಬೆಲೆ ಹೆಚ್ಚಿಸದೇ ಇದ್ದರೆ ಬದುಕಲು ಸಾಧ್ಯವಿಲ್ಲ'
ಜಕಾರ್ತಾದಲ್ಲಿ 'ಗಾಡೋ-ಗಾಡೋ' ಮಾರಾಟ ಮಾಡುವ ರಿದಾ ಅವರಿಗೂ ಇದೇ ಸಮಸ್ಯೆ ಎದುರಾಗಿದೆ.
ಕಡಲೆಕಾಯಿ, ಪ್ಲಾಸ್ಟಿಕ್ ಚೀಲ ಸೇರಿದಂತೆ ಬಹುತೇಕ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. 'ಮಾರುಕಟ್ಟೆಗೆ ಹೋದಾಗ ಇಂದಿನ ಖರೀದಿಗೆ ಎಷ್ಟು ಹಣ ಬೇಕಾಗುತ್ತದೆ ಎಂಬುದೇ ಗೊತ್ತಾಗುವುದಿಲ್ಲ' ಎಂದು ಅವರು ಹೇಳುತ್ತಾರೆ. ಯುದ್ಧ ಆರಂಭವಾದ ನಂತರ ಅವರ ಲಾಭ ಅರ್ಧಕ್ಕಿಂತ ಹೆಚ್ಚು ಕುಸಿದಿದೆ. ಕೊರೊನಾ ಅವಧಿಗಿಂತಲೂ ಈಗ ವ್ಯಾಪಾರ ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ.
ಬದುಕು ಸಾಗಿಸಲು ಅನಿವಾರ್ಯವಾಗಿ ಗಾಡೋ-ಗಾಡೋ ಬೆಲೆಯನ್ನು 17 ಸಾವಿರ ರೂಪಿಯಾದಿಂದ (ಸುಮಾರು ₹90) 18 ಸಾವಿರ ರೂಪಿಯಾಗೆ (ಸುಮಾರು ₹ 96)) ಏರಿಸಿರುವುದಾಗಿ ಅವರು ತಿಳಿಸಿದ್ದಾರೆ.
ಹೊರ್ಮುಜ್ ವಿಚಾರದಲ್ಲಿ ಟ್ರಂಪ್ ಯೂ-ಟರ್ನ್: ಮತ್ತೆ ಆತಂಕದಲ್ಲಿ ಜಾಗತಿಕ ಉದ್ಯಮಏಷ್ಯಾದಾದ್ಯಂತ ಒಂದೇ ಪರಿಸ್ಥಿತಿ
ಇರಾನ್ ಯುದ್ಧದಿಂದ ಇಂಧನ ಬೆಲೆ ಹೆಚ್ಚಿದ್ದರಿಂದ ಅದರ ಸರಣಿ ಪರಿಣಾಮ ಆಹಾರ ಉತ್ಪಾದನೆ, ಸಾರಿಗೆ ಮತ್ತು ಅಡುಗೆ ವೆಚ್ಚಗಳ ಮೇಲೆ ಬೀಳುತ್ತಿದೆ. ಹೀಗಾಗಿ ಏಷ್ಯಾದ ಹಲವು ದೇಶಗಳಲ್ಲಿ ಸಾಮಾನ್ಯ ಜನರ ದೈನಂದಿನ ಆಹಾರವೂ ದುಬಾರಿಯಾಗುತ್ತಿದ್ದು, ವ್ಯಾಪಾರಿಗಳು ಮತ್ತು ಗ್ರಾಹಕರು ಒಂದೇ ರೀತಿಯ ಆರ್ಥಿಕ ಒತ್ತಡವನ್ನು ಎದುರಿಸುತ್ತಿದ್ದಾರೆ.
ಯುದ್ಧದ ನಿಜವಾದ ಬೆಲೆ
ಯುದ್ಧವೆಂದರೆ ಕೇವಲ ಸೈನಿಕರ ಸಾವು-ನೋವು ಅಥವಾ ಧ್ವಂಸಗೊಂಡ ಕಟ್ಟಡಗಳ ಕಥೆಯಲ್ಲ. ಒಂದು ದೇಶದಲ್ಲಿ ಸಿಡಿಯುವ ಬಾಂಬ್ ಮತ್ತೊಂದು ದೇಶದಲ್ಲಿ ಅಡುಗೆ ಅನಿಲದ ಬೆಲೆ ಹೆಚ್ಚಿಸುತ್ತದೆ. ಸಮುದ್ರದಲ್ಲಿ ನಡೆಯುವ ಸಂಘರ್ಷ ಸಾವಿರಾರು ಕಿಲೋಮೀಟರ್ ದೂರದ ತರಕಾರಿ ಮಾರುಕಟ್ಟೆಯ ದರವನ್ನು ಬದಲಾಯಿಸುತ್ತದೆ. ತೈಲದ ಬೆಲೆ ಏರಿದಾಗ ಅದರ ಪರಿಣಾಮ ಸಾರಿಗೆ, ವಿದ್ಯುತ್, ಆಹಾರ ಉತ್ಪಾದನೆ, ಪ್ಯಾಕೇಜಿಂಗ್-ಎಲ್ಲದರ ಮೇಲೂ ಬೀಳುತ್ತದೆ.
ಹೀಗಾಗಿ ಯುದ್ಧದ ವೆಚ್ಚವನ್ನು ಕೊನೆಗೆ ಹೊರುವವರು ಸೇನಾ ಮುಖ್ಯಸ್ಥರಲ್ಲ; ದಿನಗೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಮತ್ತು ಮಧ್ಯಮ ವರ್ಗದ ಕುಟುಂಬಗಳು.
ಆಧಾರ: ದಿ ನ್ಯೂಯಾರ್ಕ್ ಟೈಮ್ಸ್
ಒಪ್ಪಂದದ ಭಾಷೆಯಲ್ಲೇ ಹೊಸ ಬಿಕ್ಕಟ್ಟು: ಹೊರ್ಮುಜ್ ಈಗ ಜಾಗತಿಕ ಪೈಪೋಟಿಯ ಅಖಾಡ
