Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್-ಅಮೆರಿಕ ಶಾಂತಿ ಒಪ್ಪಂದ ವಿಳಂಬಕ್ಕೆ ಈ ಆರು ಅಂಶಗಳೇ ಕಾರಣ

ಇರಾನ್-ಅಮೆರಿಕ ಶಾಂತಿ ಒಪ್ಪಂದ ವಿಳಂಬಕ್ಕೆ ಈ ಆರು ಅಂಶಗಳೇ ಕಾರಣ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಇರಾನ್-ಅಮೆರಿಕ ಶಾಂತಿ ಒಪ್ಪಂದ ವಿಳಂಬಕ್ಕೆ ಈ ಆರು ಅಂಶಗಳೇ ಕಾರಣ

ಒಂದು ಸಾಲಿನಲ್ಲಿಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಒಪ್ಪಂದವು ಭೌಗೋಳಿಕ ರಾಜಕೀಯ ಭಿನ್ನಾಭಿಪ್ರಾಯಗಳು ಮತ್ತು ತೀರ್ಮಾನಗಳ ಕಾರಣದಿಂದ ವಿಳಂಬವಾಗುತ್ತಿದೆ.

ಪ್ರಮುಖ ಅಂಶಗಳು• ಹೊರ್ಮುಜ್ ಜಲಸಂಧಿಯ ನಿಯಂತ್ರಣ ವಿವಾದಜಾಗತಿಕ ತೈಲ ಪೂರೈಕೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸುವ ವಿಚಾರದಲ್ಲಿ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯವಿದೆ.• ಪರಮಾಣು ಕಾರ್ಯಕ್ರಮದ ಅನಿಶ್ಚಿತತೆಇರಾನ್‌ನ ಪರಮಾಣು ಯೋಜನೆಗಳನ್ನು ಮಿತಿಗೊಳಿಸುವ ಮತ್ತು ಯುರೇನಿಯಂ ಸಮೃದ್ಧೀಕರಣ ನಿಲ್ಲಿಸುವ ಅಮೆರಿಕದ ಬೇಡಿಕೆಗೆ ಇರಾನ್ ಒಪ್ಪುತ್ತಿಲ್ಲ.• ಪ್ರಾದೇಶಿಕ ಬಣಗಳ ಬೆಂಬಲಹುಥಿ ಮತ್ತು ಹಿಜ್ಬುಲ್ಲಾದಂತಹ ಇರಾನ್ ಬೆಂಬಲಿತ ಸಂಘಟನೆಗಳಿಗೆ ನೆರವು ನೀಡುವುದನ್ನು ನಿಲ್ಲಿಸಬೇಕೆಂಬ ಅಮೆರಿಕದ ಷರತ್ತು ಮಾತುಕತೆಗೆ ಅಡ್ಡಿಯಾಗಿದೆ.• ಕ್ಷಿಪಣಿ ಕಾರ್ಯಕ್ರಮದ ಮೇಲಿನ ನಿರ್ಬಂಧಇರಾನ್ ತನ್ನ ರಕ್ಷಣಾ ವ್ಯವಸ್ಥೆಯ ಭಾಗವಾದ ಖಂಡಾಂತರ ಕ್ಷಿಪಣಿ ಕಾರ್ಯಕ್ರಮಗಳನ್ನು ಒಪ್ಪಂದದ ವ್ಯಾಪ್ತಿಗೆ ತರಲು ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದೆ.• ನಷ್ಟ ಪರಿಹಾರದ ಆರ್ಥಿಕ ಬೇಡಿಕೆಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳಿಂದ ತಮಗೆ ಉಂಟಾದ ಆರ್ಥಿಕ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಇರಾನ್ ಬೇಡಿಕೆ ಇಟ್ಟಿದೆ.• ಲೆಬನಾನ್-ಇಸ್ರೇಲ್ ಸಂಘರ್ಷದ ಪ್ರಭಾವಲೆಬನಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಹಿಜ್ಬುಲ್ಲಾ ಸಂಘಟನೆಯ ಮೇಲಿನ ದಾಳಿಗಳು ಒಪ್ಪಂದದ ಕರಡಿನಲ್ಲಿ ಚರ್ಚಿಸುವ ವಿಷಯಗಳಾಗಿ ಮಾರ್ಪಟ್ಟಿವೆ.ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

'ಯುದ್ಧವನ್ನು ಮಾತುಕತೆ ಮೂಲಕ ಕೊನೆಗೊಳಿಸುವ ನಿಟ್ಟಿನಲ್ಲಿ ಇರಾನ್‌ ಜೊತೆಗಿನ ಒಪ್ಪಂದ ಪೂರ್ಣಗೊಂಡಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಘೋಷಿಸಿದ್ದಾರೆ. ಆದಾಗ್ಯೂ, ಜಾಗತಿಕ ಆರ್ಥಿಕತೆಯನ್ನು ಮೂರೂವರೆ ತಿಂಗಳಿನಿಂದ ಸಂಕಷ್ಟಕ್ಕೆ ಸಿಲುಕಿಸಿರುವ ಪಶ್ಚಿಮ ಏಷ್ಯಾ ಸಂಘರ್ಷ ಸಂಪೂರ್ಣ ಅಂತ್ಯಗೊಳ್ಳುವುದು ಯಾವಾಗ ಎಂಬುದು ಸ್ಪಷ್ಟವಾಗಿಲ್ಲ.

ಉಭಯ ರಾಷ್ಟ್ರಗಳ ನಡುವಣ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ, ಮಾತುಕತೆ ಅಂತಿಮ ಹಂತ ತಲುಪಿದೆ. ಒಪ್ಪಂದ ಕರಡಿಗೆ 24 ಗಂಟೆಗಳಲ್ಲಿ ಸಹಿ ಬೀಳಲಿದೆ ಎಂದು ಶನಿವಾರ ಹೇಳಿತ್ತು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಇರಾನ್, 'ಅಮೆರಿಕವು ನಿರಂತರವಾಗಿ ತನ್ನ ನಿಲುವು ಬದಲಿಸುತ್ತಿದೆ. ಹೀಗಾಗಿ, ಭಾನುವಾರ ಸಹಿ ಹಾಕುವುದಿಲ್ಲ' ಎಂದು ತಿಳಿಸಿತ್ತು. ಹೀಗಾಗಿ, ಒಪ್ಪಂದ ಏರ್ಪಡುವುದು ಯಾವಾಗ ಎನ್ನುವ ಪ್ರಶ್ನೆಗಳು ಹಾಗೆಯೇ ಮುಂದುವರಿದಿವೆ.

ಒಪ್ಪಂದಕ್ಕೆ ಹತ್ತಿರವಾಗಿದ್ದೇವೆ, ಹಾಳು ಮಾಡಬೇಡಿ: ಇರಾನ್, ಇಸ್ರೇಲ್‌ಗೆ ಟ್ರಂಪ್ತೈಲ ಹಡಗುಗಳ ಮೇಲೆ ದಾಳಿ: ಭಾರತೀಯ ಸಿಬ್ಬಂದಿ ಹತ್ಯೆ ಖಂಡಿಸಿದ ಇರಾನ್

ಅಂದಹಾಗೆ, ಒಪ್ಪಂದದ ವೇಳೆ ಏನೆಲ್ಲ ಮಾತುಕತೆ ನಡೆದಿದೆ? ಕರಡಿನಲ್ಲಿ ಯಾವೆಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬುದು ಈವರೆಗೆ ಬಹಿರಂಗವಾಗಿಲ್ಲ. ಆದರೆ, ಮಾತುಕತೆಯಲ್ಲಿ ನಿರ್ಣಾಯಕವಾಗಿ ಪರಿಗಣಿಸಿರಬಹುದಾದ ಆರು ಅಂಶಗಳ ಬಗ್ಗೆ 'CFR.Org' ಮಾಡಿರುವ ವರದಿ ಮಾಡಿದೆ. ಆ ಆರು ಅಂಶಗಳು ಯಾವುವೆಂದರೆ?

ಹೊರ್ಮುಜ್ ಜಲಸಂಧಿ
ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಫೆಬ್ರುವರಿ 28ರಂದು ಕೈಗೊಂಡ ಜಂಟಿ ದಾಳಿ ನಂತರ ತಿರುಗಿಬಿದ್ದ ಇರಾನ್‌, ಪ್ರತಿದಾಳಿ ನಡೆಸಿತ್ತು. ಅಮೆರಿಕ, ಇಸ್ರೇಲ್ ಮಾತ್ರವಲ್ಲದೆ, ಆ ದೇಶದ ಮಿತ್ರರಾಷ್ಟ್ರಗಳ ಮೇಲೂ ದಾಳಿ ಮಾಡಿತ್ತು. ಹಾಗೆಯೇ, ಹೊರ್ಮುಜ್‌ ಜಲಮಾರ್ಗದಲ್ಲಿ ಹಡಗು ಸಂಚಾರವನ್ನು ನಿರ್ಬಂಧಿಸಿ, ಜಾಗತಿಕ ತೈಲ ಪೂರೈಕೆಯನ್ನು ತಡೆದಿತ್ತು. ಇದರ ಪರಿಣಾಮವಾಗಿ ವಿಶ್ವ ಆರ್ಥಿಕತೆ ಸಂಕಷ್ಟ ಎದುರಿಸುವಂತಾಯಿತು.

ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಮಾತುಕತೆಗೆ ಮುಂದಾಗಿರುವ ಅಮೆರಿಕ, ಹೊರ್ಮುಜ್‌ ಜಲಮಾರ್ಗವನ್ನು ಇರಾನ್‌ ಹಿಡಿತದಿಂದ ಮುಕ್ತಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂದು ವರದಿಯಾಗಿದೆ. ಆದರೆ, 'ಜಲಮಾರ್ಗದ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡುವ ವಿಚಾರವು ಒಪ್ಪಂದದ ಕರಡಿನಲ್ಲಿ ಇಲ್ಲ' ಎಂದು ಇರಾನ್‌ ಸುದ್ದಿಸಂಸ್ಥೆ ಐಆರ್‌ಎನ್‌ಎ ವರದಿ ಮಾಡಿದೆ.

ಏತನ್ಮಧ್ಯೆ, ಈ ಮಾರ್ಗದ ವಿಚಾರವಾಗಿ ತದ್ವಿರುದ್ಧವಾದ ಹೇಳಿಕೆ ನೀಡುವುದನ್ನು ಎರಡೂ ರಾಷ್ಟ್ರಗಳು ಮುಂದುವರಿಸಿವೆ.

'ಹೊರ್ಮುಜ್‌ ಪುನರಾರಂಭದ ನಂತರ ನಿರ್ವಹಣೆ ಹೇಗಿರಲಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಸುಂಕ ವಿನಾಯಿತಿಗೆ ಇರಾನ್‌ ಒಪ್ಪಿದರೂ, ಸೇವಾ ಶುಲ್ಕ ಸೇರಿದಂತೆ ಇತರ ಕಾರ್ಯತಂತ್ರ ರೂಪಿಸಬಹುದು' ಎಂದು 'CFR.Org'ನ ಪಶ್ಚಿಮ ಏಷ್ಯಾ ವಿಭಾಗದ ಎಲಿಸಾ ಎವರ್ಸ್‌ ಹೇಳಿದ್ದಾರೆ.

ಇರಾನ್-ಅಮೆರಿಕ ಒಪ್ಪಂದ, ಹೊರ್ಮುಜ್ ಜಲಸಂಧಿ ಮುಕ್ತ: ವಿಶ್ವನಾಯಕರಿಂದ ಸ್ವಾಗತFact Check: ಹೊರ್ಮುಜ್ ಬಳಿ ಭಾರತದ ಮತ್ತೊಂದು ಹಡಗಿನ ಮೇಲೆ ದಾಳಿ ನಡೆಯಿತೇ?

ಪರಮಾಣು ಯೋಜನೆ
ಇರಾನ್‌ನ ಪರಮಾಣು ಕಾರ್ಯತಂತ್ರವು ಒಪ್ಪಂದವನ್ನು ಕಗ್ಗಂಟಾಗಿಸಿರುವ ವಿಚಾರಗಳಲ್ಲಿ ಮುಖ್ಯವಾದದ್ದು. ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಇರಾನ್‌ನ ಅಣ್ವಸ್ತ್ರ ಮೂಲಸೌಕರ್ಯಗಳನ್ನು ಗುರಿಯಾಗಿಸಿ 2025ರಲ್ಲೂ ದಾಳಿ ಮಾಡಿದ್ದವು.

ಈ ವರ್ಷ ಫೆಬ್ರುವರಿಯಲ್ಲಿ ಇರಾನ್‌ ಮೇಲೆ ದಾಳಿ ಮಾಡುವ ಮುನ್ನ ಇದೇ (ಪರಮಾಣು ಯೋಜನೆ) ಕಾರಣ ನೀಡಿದ್ದರು ಟ್ರಂಪ್‌.

ಆದರೆ ತನ್ನ ಯುರೇನಿಯಂ ಸಮೃದ್ಧೀಕರಣ ಯೋಜನೆಯು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (IAEA) ಮಾನದಂಡಕ್ಕೆ ಯಾವುದೇ ರೀತಿಯಲ್ಲೂ ಹಾನಿ ಮಾಡಿಲ್ಲ ಎಂಬುದು ಇರಾನ್‌ ವಾದ.

ಇರಾನ್‌ ಅಣ್ವಸ್ತ್ರ ಅಭಿವೃದ್ಧಿಪಡಿಸದಂತೆ ನೋಡಿಕೊಳ್ಳುವುದು ಅಮೆರಿಕದ ಬಯಕೆಯಾಗಿದೆ. ಅದರಂತೆ, ಸಮೃದ್ಧಿಕರಿಸಿದ ಯುರೇನಿಯಂ ಅನ್ನು ತ್ಯಜಿಸಬೇಕು. ಪರಮಾಣು ಕಾರ್ಯಕ್ರಮ ನಿಲ್ಲಿಸಬೇಕು ಎಂಬುದು ಅದರ ಬೇಡಿಕೆಯಾಗಿದೆ. ಇದಕ್ಕೆ ಇರಾನ್‌ನಿಂದ ಅಸಮ್ಮತಿ ವ್ಯಕ್ತವಾಗಿದೆ.

ಮೊದಲು ಪರಮಾಣು ಅಣ್ವಸ್ತ್ರ ಒಪ್ಪಂದ, ನಂತರ ಹೊರ್ಮುಜ್ ಮಾತುಕತೆ: ಟ್ರಂಪ್ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡದಿರಲು ಕಾರಣ ತಿಳಿಸಿದ ಟ್ರಂಪ್

ಬರಾಕ್‌ ಒಬಾಮ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಪರಮಾಣು ಶಸ್ತ್ರಾಸ್ತ್ರ ಬಳಕೆ ಸಂಬಂಧ ಇರಾನ್‌ ಜೊತೆ ಮಾಡಿಕೊಂಡಿದ್ದ ಜಂಟಿ ಸಮಗ್ರ ಕ್ರಿಯಾ ಯೋಜನೆ (ಜೆಸಿಪಿಒಎ) ಒಪ್ಪಂದವನ್ನು ಟ್ರಂಪ್ ಆಡಳಿತ ಹಿಂಪಡೆದಾಗಿನಿಂದ, ಹೊಸ ಒಪ್ಪಂದದ ಕುರಿತು ಉಭಯ ರಾಷ್ಟ್ರಗಳ ನಡುವೆ ನಡೆದ ಹಲವು ಸುತ್ತಿನ ಮಾತುಕತೆ ವಿಫಲವಾಗಿವೆ.

ಇರಾನ್ ಬೆಂಬಲಿತ ಪಡೆಗಳು
ಪಶ್ಚಿಮ ಏಷ್ಯಾದಾದ್ಯಂತ ಇರಾನ್‌ ಬೆಂಬಲಿತ ಸಂಘಟನೆಗಳ ಜಾಲ ಹರಡಿದೆ. ಇವು, ಹಲವು ಸಂಘರ್ಷಗಳಿಗೂ ಕಾರಣವಾಗಿವೆ. 2023ರ ಅಕ್ಟೋಬರ್‌ 7ರಂದು ಇಸ್ರೇಲ್‌ - ಹಮಾಸ್‌ ಯುದ್ಧವೂ ಇದರದ್ದೇ ಬಳುವಳಿ. ಯೆಮನ್‌ನಲ್ಲಿರುವ ಹುಥಿ, ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಸಂಘಟನೆಯ ಹಿಂದೆ ಇರಾನ್‌ ಇದೆ.

ಈ ಸಂಘಟನೆಗಳಿಗೆ ನೆರವು ನೀಡುವುದನ್ನು ಇರಾನ್ ನಿಲ್ಲಿಸಬೇಕು ಎಂಬ ಷರತ್ತು ಒಪ್ಪಂದದ ಕರಡಿನಲ್ಲಿ ಇದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಇಸ್ರೇಲ್ ಏರ್‌ಪೋರ್ಟ್‌ಗೆ ಅಪ್ಪಳಿಸಿದ ಹುಥಿ ಬಂಡುಕೋರರು ಹಾರಿಸಿದ ಡ್ರೋನ್ಹಡಗಿನ ಮೇಲೆ ದಾಳಿ; ಹುಥಿ ಬಂಡುಕೋರರ ಕೈವಾಡ ಶಂಕೆ

ಸೇನಾ ನಿಯಂತ್ರಣ
ಇರಾನ್‌ನ ಕ್ಷಿಪಣಿ ಕಾರ್ಯತಂತ್ರಗಳ ಮೇಲೆ ಮಿತಿ ಹೇರಲು ಅಮೆರಿಕ ಬಯಸುತ್ತಿದೆ. ಆದರೆ, ಅದನ್ನು ಇರಾನ್ ಒಪ್ಪುವ ಸಾಧ್ಯತೆ ತೀರಾ ಕಡಿಮೆ. ತಮ್ಮ ದೇಶದ ರಕ್ಷಣಾ ಕಾರ್ಯಕ್ರಮಗಳು ಎಂದಿಗೂ ಒಪ್ಪಂದದ ಭಾಗವಾಗುವುದಿಲ್ಲ ಎಂದು ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಘ್ಚಿ ಫೆಬ್ರುವರಿಯಲ್ಲೇ ಸ್ಪಷ್ಟಪಡಿಸಿದ್ದರು.

'ಅಣ್ವಸ್ತ್ರ ವಿಚಾರ, ನಿರ್ಬಂಧಗಳ ತೆರವು ಮತ್ತು ಆರ್ಥಿಕ ಪರಿಹಾರದ ಮೇಲಷ್ಟೇ ಮಾತುಕತೆ ನಡೆಯುತ್ತದೆ. ಖಂಡಾಂತರ ಕ್ಷಿಪಣಿ ಕಾರ್ಯಕ್ರಮಗಳ ಬಗ್ಗೆ ಯಾವುದೇ ಪ್ರಸ್ತಾಪ ಇರುವುದಿಲ್ಲ' ಎಂದು ಹೇಳಿರುವುದಾಗಿ ಇರಾನ್ ಮಾಧ್ಯಮಗಳು ಇತ್ತೀಚೆಗೆ ವರದಿ ಮಾಡಿವೆ. ಆದರೆ, ಇರಾನ್‌ ಮೇಲೆ ಒತ್ತಡ ಹೇರಲು ಇಸ್ರೇಲ್‌ ಹೊರಗಿನಿಂದ ಪ್ರಯತ್ನಗಳನ್ನು ಮುಂದುವರಿಸುತ್ತಿದೆ. ಹಾಗಾಗಿಯೇ, ಪ್ರಾದೇಶಿಕ ಭದ್ರತೆಯ ಖಾತ್ರಿಗಾಗಿ ಕ್ಷಿಪಣಿ ಯೋಜನೆಯ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅಮೆರಿಕ ಪ್ರತಿಪಾದಿಸುತ್ತಿದೆ.

ಮಾತುಕತೆ ಮುಂದುವರಿದಂತೆ ಇರಾನ್ ಎದುರು ಅಮೆರಿಕ ಹಾಗೂ ಇಸ್ರೇಲ್‌ ಇಟ್ಟಿದ್ದ ಬೇಟಿಕೆಗಳ ಪಟ್ಟಿಯೂ ಕಡಿಮೆಯಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಇರಾನ್‌ ಬಳಿ ಯುದ್ಧಕ್ಕೂ ಮುನ್ನ ಇದ್ದ ಕ್ಷಿಪಣಿ ದಾಸ್ತಾನಿನಲ್ಲಿ ಶೇ 70ರಷ್ಟು ಉಳಿದಿದೆ ಎಂದು ಅಮೆರಿಕ ಗುಪ್ತಚರ ಮೂಲಗಳು ತಿಳಿಸಿವೆ. ಹಾಗೆಯೇ, ತನ್ನ ಸೇನಾ ನೆಲೆಗಳನ್ನು ಪುನರ್ ನಿರ್ಮಾಣ ಮಾಡಲು ಕದನ ವಿರಾಮ ಸಮಯವನ್ನು ಇರಾನ್‌ ಬಳಸಿಕೊಳ್ಳುತ್ತಿದೆ ಎಂಬ ಕಳವಳವನ್ನೂ ವ್ಯಕ್ತಪಡಿಸಿವೆ.

ತನ್ನ ವ್ಯಾಪ್ತಿ ಪ್ರದೇಶದಿಂದ ಅಮೆರಿಕದ ಪಡೆಗಳು ವಾಪಸ್‌ ಆಗಬೇಕು ಎಂಬ ಒತ್ತಾಯವನ್ನು ಇರಾನ್‌ ಮುಂದುವರಿಸಿದೆ.

ಫ್ಯಾಕ್ಟ್‌ ಚೆಕ್‌: ಭಾರತೀಯ ನೌಕಾಪಡೆ ಇರಾನ್ ಹಡಗಿನ ಮೇಲೆ ಕ್ಷಿಪಣಿ ದಾಳಿ ಮಾಡಿತೇ?Video:ಇಸ್ರೇಲ್ ಅಣು ಕೇಂದ್ರದ ಸಮೀಪ ಅಪ್ಪಳಿಸಿದ ಇರಾನ್ ಕ್ಷಿಪಣಿ..ಆವರಿಸಿದ ಬೆಂಕಿ

ನಷ್ಟ ಪರಿಹಾರದ ಪ್ರಸ್ತಾಪ
ಶಾಂತಿ ಮಾತುಕತೆ ವೇಳೆ ನಷ್ಟ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿರುವ ಇರಾನ್‌, ಅಮೆರಿಕ ಮತ್ತು ಇಸ್ರೇಲ್‌ ಪಡೆಗಳು ಫೆಬ್ರುವರಿ 28ರಂದು ದಾಳಿ ಆರಂಭಿಸಿದಾಗಿನಿಂದ, ನೇರವಾಗಿ ಮತ್ತು ಪರೋಕ್ಷವಾಗಿ ಸುಮಾರು 270 ಬಿಲಿಯನ್‌ ಡಾಲರ್‌ (ಅಂದಾಜು ₹ 25 ಲಕ್ಷ ಕೋಟಿ) ನಷ್ಟ ಅನುಭವಿಸಿರುವುದಾಗಿ ಹೇಳಿಕೊಂಡಿದೆ. ಇಷ್ಟು ಪರಿಹಾರ ನೀಡಲು ಅಮೆರಿಕ ಒಪ್ಪದಿದ್ದರೂ, ಹಣಕಾಸಿನ ನೆರವಿನ ವಿಚಾರ ಒಪ್ಪಂದದ ಭಾಗವಾಗಿರಲಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಒಮ್ಮತ ಮೂಡದ ಹೊರತು, ಯಾವುದೇ ತೀರ್ಮಾನ ಅಸಾಧ್ಯ.

'ಇರಾನ್‌ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಿದರಷ್ಟೇ ಆರ್ಥಿಕ ಪ್ರಯೋಜನಗಳು ತಲುಪುತ್ತವೆ. ಶಾಶ್ವತ ಶಾಂತಿಯನ್ನು ಮರುಸ್ಥಾಪಿಸುವ ಸಾಮರ್ಥ್ಯ ಈ ಒಪ್ಪಂದಕ್ಕೆ ಇದೆ' ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು.

ಲೆಬನಾನ್‌ - ಇಸ್ರೇಲ್ ಸಂಘರ್ಷ
ಲೆಬನಾನ್‌ ಮತ್ತು ಇಸ್ರೇಲ್‌ ಸಂಘರ್ಷವು ಇರಾನ್‌ - ಅಮೆರಿಕ ಒಪ್ಪಂದಕ್ಕೆ ತೊಡಕಾಗಿರುವ ಮತ್ತೊಂದು ಸಂಗತಿ.

ಇಸ್ರೇಲ್‌ ನಡೆಸುತ್ತಿರುವ ದಾಳಿಯಿಂದಾಗಿ ಮಾರ್ಚ್‌ನಿಂದ ಈಚೆಗೆ ಸುಮಾರು 3,400 ಜನರು ಮೃತಪಟ್ಟಿರುವುದಾಗಿ ಲೆಬನಾನ್‌ ಆರೋಗ್ಯ ಇಲಾಖೆ ತಿಳಿಸಿದೆ. ಸಾವು-ನೋವು ಹೆಚ್ಚಾಗುತ್ತಲೇ ಇರುವುದು ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ.

ಲೆಬನಾನ್‌ ವಿರುದ್ಧದ ಸೇನಾ ಕಾರ್ಯಾಚರಣೆಯ ಗುರಿಯೇ ಬೇರೆ ಎಂದು ಇಸ್ರೇಲ್‌ ಹೇಳುತ್ತಿದೆ. ಹಿಜ್ಬುಲ್ಲಾ ಸಂಘಟನೆಯನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮಾರ್ಚ್‌ನಲ್ಲಿ ಹೇಳಿದ್ದರು.

ಒಪ್ಪಂದದ ಕರಡಿನಲ್ಲಿ ಲೆಬನಾನ್‌ ಸಂಘರ್ಷವನ್ನೂ ಸೇರಿಸಬೇಕು ಎಂಬುದು ಇರಾನ್‌ ಒತ್ತಾಯವಾಗಿದೆ. ಆದರೆ, ಹಿಜ್ಬುಲ್ಲಾ ಗುರಿಯಾಗಿಸಿ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸುವುದು ಅಥವಾ ಮುಂದುವರಿಸುವ ನಿಟ್ಟಿನಲ್ಲಿ ಕೈಗೊಳ್ಳುವ ತೀರ್ಮಾನ, ಇರಾನ್‌ನಲ್ಲಿ ಮುಂಬರುವ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಲೆಬನಾನ್ ಮತ್ತು ಇಸ್ರೇಲ್‌ ಸಂಘರ್ಷ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಏಪ್ರಿಲ್‌ 16ರಂದು ಕದನ ವಿರಾಮ ಜಾರಿಯಾಗಿತ್ತು. ಅದನ್ನು ಎರಡು ಬಾರಿ ವಿಸ್ತರಿಸಲಾಗಿದೆಯಾದರೂ, ಎರಡೂ ಕಡೆಯಿಂದ ಕದನ ವಿರಾಮ ಉಲ್ಲಂಘನೆ ಆಗುತ್ತಲೇ ಇದೆ.

ಇಸ್ರೇಲ್‌ ದಾಳಿ ಮುಂದುವರಿಸಿರುವ ಸಂಬಂಧ ಟ್ರಂಪ್‌ ಅವರು ನೆತನ್ಯಾಹು ವಿರುದ್ಧ ಕಿಡಿಕಾರಿದ್ದಾರೆ. ದೂರವಾಣಿ ಮಾತುಕತೆ ವೇಳೆ ಅಶ್ಲೀಲ ಪದ ಬಳಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಒಟ್ಟಾರೆಯಾಗಿ, ಈ ಸಂಘರ್ಷವು ಒಪ್ಪಂದದ ಮಾತುಕತೆಯನ್ನು ಸಂಕೀರ್ಣಗೊಳಿಸುತ್ತಿದೆ.

ಇಸ್ರೇಲ್-ಲೆಬನಾನ್ ಕದನ ವಿರಾಮ ವಿಸ್ತರಿಸಿ, ಇರಾನ್‌ಗೆ ಎಚ್ಚರಿಕೆ ನೀಡಿದ ಟ್ರಂಪ್ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ: ಅಮೆರಿಕ ಬದ್ಧತೆ ಪ್ರಶ್ನಿಸಿದ ಇರಾನ್‌
Dailyhunt
Disclaimer: This content has not been generated, created or edited by Dailyhunt. Publisher: Prajavani