ಇರಾನ್ ಯುದ್ಧ, ರಾಜ್ಯ, ರಾಷ್ಟ್ರೀಯ, ಸಿನಿಮಾ, ಕ್ರೀಡೆ, ಅಂತರರಾಷ್ಟ್ರೀಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
ಪಶ್ಚಿಮ ಏಷ್ಯಾ ಸಂಘರ್ಷ: ಅಲ್ಪ ವಿರಾಮದ ಮೇಲೆ ತೂಗುಗತ್ತಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾತ್ಕಾಲಿಕ ಕದನ ವಿರಾಮ ಕುರಿತು ಬುಧವಾರ ಘೋಷಣೆ ಮಾಡಿದ್ದರು.
ಅದರ ಬೆನ್ನಲ್ಲೇ, ತನ್ನ ಷರತ್ತುಗಳಿಗೆ ಒಳಪಟ್ಟು ಕದನ ವಿರಾಮಕ್ಕೆ ಸಮ್ಮತಿಸುವುದಾಗಿ ಇರಾನ್ ಸಹ ಘೋಷಿಸಿತ್ತು. ಆದರೆ, ತಾನು ಲೆಬನಾನ್ ಮೇಲೆ ನಡೆಸುತ್ತಿರುವ ದಾಳಿಗಳು ಕದನ ವಿರಾಮ ಒಪ್ಪಂದದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಇಸ್ರೇಲ್ ಬುಧವಾರವೇ ಘೋಷಿಸಿತ್ತು. ಲೆಬನಾನ್ ರಾಜಧಾನಿ ಬೈರೂತ್ ಹಾಗೂ ಬಂಡುಕೋರರ ಸಂಘಟನೆ ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿ ದಾಳಿಯನ್ನು ಮುಂದುವರಿಸಿದೆ.
ಅಮೆರಿಕ-ಇರಾನ್ ತಾತ್ಕಾಲಿಕ ಕದನ ವಿರಾಮದ ಮೇಲೆ ತೂಗುಗತ್ತಿAlert: ಗಮನಿಸಿ, ಟೋಲ್‌ಗಳಲ್ಲಿ ಇಂದಿನಿಂದ ಕ್ಯಾಷ್ ಇಲ್ಲ; ಡಿಜಿಟಲ್ ಪಾವತಿ ಮಾತ್ರ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತನ್ನ ಟೋಲ್ ಪ್ಲಾಜಾಗಳಲ್ಲಿ ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿ ಮಾಡಲು ನಿರ್ಧರಿಸಿದೆ. ಏಪ್ರಿಲ್ 10ರಿಂದ ಟೋಲ್ ಶುಲ್ಕವನ್ನು ಇನ್ನು ಮುಂದೆ ಯುಪಿಐ ಅಥವಾ ಫಾಸ್ಟ್‌ಟ್ಯಾಗ್ ಮೂಲಕ ಮಾತ್ರ ಪಾವತಿಸಬೇಕು. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕೃತವಾಗಿ ಸೂಚಿಸಿದೆ.
Alert: ಗಮನಿಸಿ, ಟೋಲ್‌ಗಳಲ್ಲಿ ಇಂದಿನಿಂದ ಕ್ಯಾಷ್ ಇಲ್ಲ; ಡಿಜಿಟಲ್ ಪಾವತಿ ಮಾತ್ರಹೊರ್ಮುಜ್ ಮೂಲಕ ಸಾಗುವ ಹಡಗುಗಳಿಗೆ ಶುಲ್ಕ: ಇರಾನ್‌ನಿಂದ ಕೆಟ್ಟ ನಡೆ ಎಂದ ಟ್ರಂಪ್

'ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ತೈಲ ಟ್ಯಾಂಕರ್‌ಗಳಿಂದ ಇರಾನ್ ಶುಲ್ಕ ವಸೂಲಿ ಮಾಡುವ ಮೂಲಕ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುತ್ತಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ. 'ಹೊರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ತೈಲ ಟ್ಯಾಂಕರ್‌ಗಳಿಂದ ಇರಾನ್ ಶುಲ್ಕ ವಸೂಲಿ ಮಾಡುತ್ತಿದೆ ಎಂಬ ವರದಿಗಳಿವೆ. ಹಾಗೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು' ಎಂದು ಟ್ರಂಪ್ ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ 'ಟ್ರೂಥ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೊರ್ಮುಜ್ ಮೂಲಕ ಸಾಗುವ ಹಡಗುಗಳಿಗೆ ಶುಲ್ಕ: ಇರಾನ್‌ನಿಂದ ಕೆಟ್ಟ ನಡೆ ಎಂದ ಟ್ರಂಪ್ಕದನ ವಿರಾಮ ಮಾತುಕತೆ ಹೊತ್ತಲ್ಲಿ ಇಸ್ರೇಲ್ ಅನ್ನು ಕ್ಯಾನ್ಸರ್‌ಗೆ ಹೋಲಿಸಿದ ಪಾಕ್

ಅಮೆರಿಕ-ಇರಾನ್ ನಡುವಿನ ಕದನ ವಿರಾಮ ಕುರಿತಂತೆ ಮಾತುಕತೆ ಆರಂಭವಾಗುವ ಮೊದಲೇ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಇಸ್ರೇಲ್ ಕುರಿತಂತೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
'ಇಸ್ರೇಲ್ ಒಂದು ದುಷ್ಟ ಶಕ್ತಿ ಮತ್ತು ಮಾನವಕುಲಕ್ಕೆ ಶಾಪವಾಗಿದೆ. ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿರುವಾಗಲೇ ಲೆಬನಾನ್‌ನಲ್ಲಿ ನರಮೇಧ ನಡೆಯುತ್ತಿದೆ. ಮೊದಲು ಗಾಜಾ, ನಂತರ ಇರಾನ್...ಈಗ ಲೆಬನಾನ್‌ನಲ್ಲಿ ಇಸ್ರೇಲ್‌ನಿಂದ ಅಮಾಯಕ ನಾಗರಿಕರ ಕೊಲೆಯಾಗುತ್ತಿದೆ. ರಕ್ತಪಾತವು ಅವಿರತವಾಗಿ ಮುಂದುವರೆದಿದೆ' ಎಂದು ಖವಾಜಾ ಆಸಿಫ್ ದೂಷಿಸಿದ್ದಾರೆ.
ಕದನ ವಿರಾಮ ಮಾತುಕತೆ ಹೊತ್ತಲ್ಲಿ ಇಸ್ರೇಲ್ ಅನ್ನು ಕ್ಯಾನ್ಸರ್‌ಗೆ ಹೋಲಿಸಿದ ಪಾಕ್ಕದನ ವಿರಾಮ ಒಪ್ಪಂದದಿಂದ ಲೆಬನಾನ್ ಹೊರಗಿಟ್ಟು, ದಾಳಿ ಮುಂದುವರಿಸಿದ US, ಇಸ್ರೇಲ್

ಲೆಬನಾನ್ ಅನ್ನು ಕದನ ವಿರಾಮ ಒಪ್ಪಂದದ ಭಾಗವಾಗಿಸಲು ಇಸ್ರೇಲ್ ಹಾಗೂ ಅಮೆರಿಕ ನಿರಾಕರಿಸಿವೆ. ಅಮೆರಿಕವು ಇರಾನ್ ಜೊತೆಗೆ 14 ದಿನಗಳ ಮಟ್ಟಿಗೆ ಮಂಗಳವಾರ (ಏ.7) ಕದನ ವಿರಾಮ ಒಪ್ಪಂದ ಮಾಡಿಕೊಂಡಿದೆ. ಆದರೆ, ಇಸ್ರೇಲ್ ಸೇನೆ ಲೆಬನಾನ್ ಮೇಲೆ ದಾಳಿ ಮುಂದುವರಿಸಿದೆ.
ಕದನ ವಿರಾಮ ಒಪ್ಪಂದದಿಂದ ಲೆಬನಾನ್ ಹೊರಗಿಟ್ಟು, ದಾಳಿ ಮುಂದುವರಿಸಿದ US, ಇಸ್ರೇಲ್ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸಮರ್ಪಣೆ: ಪರಿಸರವಾದಿಗಳಿಂದ ತೀವ್ರ ಆಕ್ಷೇಪ

ಮಧ್ಯಪ್ರದೇಶದ ಸೆಹೋರ್‌ನಲ್ಲಿ ನಡೆದ ಬೃಹತ್ ಧಾರ್ಮಿಕ ಕಾರ್ಯಕ್ರಮದಲ್ಲಿ ನರ್ಮದಾ ನದಿಗೆ ಸುಮಾರು 11 ಸಾವಿರ ಲೀಟರ್ ಹಾಲನ್ನು ಸಮರ್ಪಣೆ ಮಾಡಲಾಗಿದೆ. ಬೆರುಂಡಾ ಪ್ರದೇಶದಲ್ಲಿರುವ ಸತ್‌ದೇವ್‌ನಲ್ಲಿರುವ ಪಾತಾಳೇಶ್ವರ ಮಹಾದೇವ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ನಡೆಯಿತು. 21 ದಿನಗಳ ಕಾಲ ನಡೆದ ಈ ಧಾರ್ಮಿಕ ಆಚರಣೆಯಲ್ಲಿ ನರ್ಮದಾ ನದಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಮುಕ್ತಾಯಗೊಂಡಿತು.
Assembly Elections: ಅಸ್ಸಾಂನಲ್ಲಿ ಶೇ 85, ಕೇರಳದಲ್ಲಿ ಶೇ 78ರಷ್ಟು ಮತದಾನ

ಅಸ್ಸಾಂ, ಕೇರಳ ಮತ್ತು ಪುದುಚೆರಿ ವಿಧಾನಸಭೆಗಳಿಗೆ ಗುರುವಾರ ಬಿರುಸಿನ ಮತದಾನ ನಡೆದಿದ್ದು, ಕೆಲವೆಡೆ ಸಣ್ಣಪುಟ್ಟ ಘರ್ಷಣೆ, ಪ್ರತಿಭಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿ ನಡೆದಿದೆ. ಅಸ್ಸಾಂನಲ್ಲಿ ಶೇ 85.49, ಕೇರಳದಲ್ಲಿ 78.13, ಪುದುಚೆರಿಯಲ್ಲಿ ಶೇ 89.87ರಷ್ಟು ಮತದಾನ ದಾಖಲಾಗಿದೆ.
Assembly Elections: ಅಸ್ಸಾಂನಲ್ಲಿ ಶೇ 85, ಕೇರಳದಲ್ಲಿ ಶೇ 78ರಷ್ಟು ಮತದಾನಅನುಭವ ಮಂಟಪ: ಹಣ ಕೊಟ್ಟು ಹುದ್ದೆ ಪಡೆಯಿರಿ...
ಕೆಪಿಎಸ್‌ಸಿ ಕಾರ್ಯಾಚರಿಸುವ ಉದ್ಯೋಗ ಸೌಧ'ಅಮೃತ ಮಹೋತ್ಸವ' ಸಂಭ್ರಮದಲ್ಲಿರುವ ಕೆಪಿಎಸ್‌ಸಿ, ಕಳೆದ ಏಳು ದಶಕಗಳಲ್ಲಿ ಹೆಚ್ಚು ಸುದ್ದಿಯಾಗಿರುವುದು, ಸದ್ದು ಮಾಡಿರುವುದು ವಿವಾದಗಳಿಂದಲೇ. ಈ ಸಾಂವಿಧಾನಿಕ ಸಂಸ್ಥೆ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಅಕ್ರಮ ನೇಮಕಗಳ ಆರೋಪಗಳಿಂದ ಈಗಾಗಲೇ ತನ್ನ ಘನತೆಯನ್ನು ಮಣ್ಣುಪಾಲು ಮಾಡಿಕೊಂಡಿದೆ. ಇದರ ಚರಿತ್ರೆಯನ್ನು ಕೆದಕಿದರೆ ಒಳಿತಿಗಿಂತ ಕೆಟ್ಟದ್ದೇ ಹೆಚ್ಚು ಕಾಣಿಸುತ್ತದೆ.
ಅನುಭವ ಮಂಟಪ: ಹಣ ಕೊಟ್ಟು ಹುದ್ದೆ ಪಡೆಯಿರಿ...KKR vs LSG: ಮುಕುಲ್ ಮಾಂತ್ರಿಕ ಆಟಕ್ಕೆ ಮಣಿದ ಕೆಕೆಆರ್

KKR vs LSG: ಮುಕುಲ್ ಮಾಂತ್ರಿಕ ಆಟಕ್ಕೆ ಮಣಿದ ಕೆಕೆಆರ್
ಹೊಸಮುಖ ಮುಕುಲ್ ಚೌಧರಿ (ಔಟಾಗದೇ 54;27ಎ) ಅವರ ಏಕಾಂಗಿ ಸಾಹಸದಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಐಪಿಎಲ್ ಪಂದ್ಯದಲ್ಲಿ ಗುರುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಮೂರು ವಿಕೆಟ್‌ಗಳ ರೋಚಕ ಜಯ ದಾಖಲಿಸಿತು.
KKR vs LSG: ಮುಕುಲ್ ಮಾಂತ್ರಿಕ ಆಟಕ್ಕೆ ಮಣಿದ ಕೆಕೆಆರ್ಗ್ಯಾಂಗ್ಸ್ ಆಫ್ ಯುಕೆ, ಟೆರರ್, ಪೀಟರ್ ಸೇರಿ ಇಂದು ಐದು ಸಿನಿಮಾಗಳು ತೆರೆಗೆ

ಐಪಿಎಲ್ ಕ್ರಿಕೆಟ್ ಹಬ್ಬ ಬಂದಾಗ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಾರೆ. ಆದರೆ ಈ ಬಾರಿ ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇಂದು (ಏ.10) ಐದು ಸಿನಿಮಾಗಳು ಬಿಡುಗಡೆಯಾಗಿವೆ.
ಗ್ಯಾಂಗ್ಸ್ ಆಫ್ ಯುಕೆ, ಟೆರರ್, ಪೀಟರ್ ಸೇರಿ ಇಂದು ಐದು ಸಿನಿಮಾಗಳು ತೆರೆಗೆ
