2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಒಟ್ಟು ದೇಶಿಯ ಉತ್ಪಾದನೆ (ಜಿಡಿಪಿ) ಬೆಳವಣಿಗೆ ದರ 7.8ರಷ್ಟು ದಾಖಲಾಗಿದೆ. ಇದು ಆರ್ಬಿಐ ಹಾಗೂ ಆರ್ಥಿಕ ತಜ್ಞರು ಅಂದಾಜು ಮಾಡಿದ್ದಕ್ಕಿಂತ ಹೆಚ್ಚು. ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಭಾರತ ಈ ಪ್ರಮಾಣದ ಜಿಡಿಪಿ ದಾಖಲಿಸಿದ್ದು ಗಟ್ಟಿ ಬೆಳವಣಿಗೆ ಸಂಕೇತ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಈ ಬೆಳವಣಿಗೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. 'ಜಾಗತಿಕ ಅನಿಶ್ಚಿತತೆ, ಪ್ರಾದೇಶಿಕ ಸಂಘರ್ಷ ಮತ್ತು ಪೂರೈಕೆ ವ್ಯತ್ಯಯದ ನಡುವೆ ದೇಶ ಅಸಾಧಾರಣ ಸಾಧನೆ ಮಾಡಿದೆ' ಎಂದು ಅವರು ಬಣ್ಣಿಸಿದ್ದಾರೆ. ಇದೊಂದು ಪಿಆರ್ (ಸಾರ್ವಜನಿಕ ಸಂಪರ್ಕ) ಆರ್ಥಿಕತೆ ಎಂದು ಕಾಂಗ್ರೆಸ್ ಟೀಕಿಸಿದೆ.
ದೇಶದ ಆರ್ಥಿಕತೆ ಬೆಳೆಯುತ್ತಿದ್ದರೂ, ಅದರ ಪ್ರತಿಫಲ ಜನರ ಬದುಕಿನಲ್ಲಿ ಎಷ್ಟು ಕಾಣಿಸುತ್ತಿದೆ?
ಬದುಕು ಕೊಟ್ಟ ಕೈಗಡಿಯಾರ: ಬೀದಿ ಬದಿಯ ವ್ಯಾಪಾರಿ ಬಳಿಯಿವೆ ನೂರಾರು ವಿಂಟೇಜ್ ವಾಚ್ಜಿಡಿಪಿ ಬೆಳವಣಿಗೆಯ ನೈಜ ಚಿತ್ರಣ
ದೇಶದಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾದ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವೇ ಜಿಡಿಪಿ. ಸರಳವಾಗಿ ಹೇಳುವುದಾದರೆ, ದೇಶದ ಆರ್ಥಿಕತೆ ಎಷ್ಟು ದೊಡ್ಡದಾಗಿದೆ ಮತ್ತು ಅದು ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದನ್ನು ಅಳೆಯುವ ಪ್ರಮುಖ ಅಳತೆಗೋಲು ಜಿಡಿಪಿ. 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ದೇಶದ ಆರ್ಥಿಕ ಉತ್ಪಾದನೆ ಶೇ 7.8ರಷ್ಟು ಹೆಚ್ಚಾಗಿದೆ ಎಂದರ್ಥ. ಇದು ಒಟ್ಟಾರೆ ಆರ್ಥಿಕತೆಯ ಬೆಳವಣಿಗೆಯನ್ನು ತೋರಿಸುತ್ತದೆ. ದೇಶದ ಆರ್ಥಿಕತೆ ಇಷ್ಟು ಪ್ರಮಾಣದಲ್ಲಿ ಬೆಳೆದಿದೆ, ಆದರೆ ಜನಸಮಾನ್ಯರ ಆದಾಯವೂ ಬೆಳೆದಿದೆಯೇ? ಉದ್ಯೋಗಗಳು, ಸಂಬಳ ಹೆಚ್ಚಾಗಿವೆಯೇ? ಮನೆ ಖರ್ಚು ಕಡಿಮೆಯಾಗಿದೆಯೇ? ಜನರ ಖರೀದಿ ಸಾಮರ್ಥ್ಯ ಏರಿಕೆಯಾಗಿದೆಯೇ ಎಂಬುವುದನ್ನು ಗಮನಿಸಬೇಕಾಗಿದೆ.
ಮುಗಿಯದ ಸಾವಿನ ಲೆಕ್ಕ, ಕಾಣದ ಬದುಕಿನ ದಾರಿ... ಪ್ರವಾಹದ ಬಳಿಕ ನೇಪಾಳಯಾವುದರಲ್ಲಿ ಪ್ರಗತಿ?
ಜಿಡಿಪಿಯ ಈ ಬೆಳವಣಿಗೆಗೆ ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳ ಕೊಡುಗೆ ದೊಡ್ಡದು. ಈ ವಲಯಗಳು ಶೇ 12.1ರಷ್ಟು ಬೆಳೆದಿವೆ. ಹೂಡಿಕೆ ಶೇ 11.9ರಷ್ಟು, ಖಾಸಗಿ ಬಳಕೆ ಶೇ 7.1ರಷ್ಟು ಮತ್ತು ರಫ್ತು ಶೇ 12ರಷ್ಟು ಏರಿಕೆಯಾಗಿದೆ. ಉತ್ಪಾದನಾ ವಲಯ ಶೇ 9.2ರಷ್ಟು ಹಾಗೂ ಸೇವಾ ವಲಯ ಶೇ 10ರಷ್ಟು ಬೆಳವಣಿಗೆ ಕಂಡಿವೆ. ಆದರೆ ಕೃಷಿ ಮತ್ತು ಸಂಬಂಧಿತ ವಲಯದ ಬೆಳವಣಿಗೆ ಶೇ 3.6ರಷ್ಟೇ. ದೇಶದ ದೊಡ್ಡ ಪ್ರಮಾಣದ ಜನರು ಇನ್ನೂ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ಒಟ್ಟಾರೆ ಜಿಡಿಪಿ ವೇಗವಾಗಿ ಬೆಳೆದರೂ, ಆ ಬೆಳವಣಿಗೆ ಗ್ರಾಮೀಣ ಜನರ ಆದಾಯಕ್ಕೆ ಅದೇ ವೇಗದಲ್ಲಿ ತಲುಪುತ್ತಿದೆಯೇ?
ಹಿಮಾಲಯದ ಪ್ರವಾಹವನ್ನು ಊಹಿಸುವುದು ಏಕೆ ಕಷ್ಟ? ವಿಜ್ಞಾನಿಗಳಿಗೆ ಸವಾಲುಗಳೇನು?ಬೆಳವಣಿಗೆ ಎಷ್ಟು ಉದ್ಯೋಗ ಸೃಷ್ಟಿಸುತ್ತಿದೆ?
ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗದ ನಡುವೆ ನೇರ ಸಂಬಂಧ ಇದೆ. ಹೂಡಿಕೆ ಹೆಚ್ಚಾದರೆ ಹೊಸ ಕಾರ್ಖಾನೆಗಳು, ಕಂಪನಿಗಳು ಮತ್ತು ಯೋಜನೆಗಳು ಬರಬೇಕು. ಇದು ಸಹಜವಾಗಿ ಉದ್ಯೋಗ ಸೃಜಿಸುತ್ತದೆ. ಕ್ರಮೇಣ ಜನರ ಆದಾಯವೂ ಏರಿಕೆಯಾಗಬೇಕು. ಆದಾಯ ಹೆಚ್ಚಿದರೆ ಹೆಚ್ಚಿದರೆ ಖರ್ಚು ಮತ್ತು ಬೇಡಿಕೆಯೂ ಹೆಚ್ಚಬೇಕು. ಹೀಗೆ ಆರ್ಥಿಕ ಬೆಳವಣಿಗೆ ಜನರ ಬದುಕಿಗೆ ತಲುಪುತ್ತದೆ. ಈ ವರ್ಷ ಜುಲೈನಲ್ಲಿ ದೇಶದ ನಿರುದ್ಯೋಗ ದರ ಶೇ 5.1ರಷ್ಟಿತ್ತು. ಕೆಲಸ ಮಾಡುವವರ ಪ್ರಮಾಣ ಶೇ 52.5ರಷ್ಟಿದ್ದರೆ, ಕೆಲಸ ಮಾಡಲು ಸಿದ್ಧರಿರುವವರ ಪ್ರಮಾಣ ಶೇ 55.4ರಷ್ಟಿತ್ತು. ಹೀಗಿರುವಾಗ ಬೆಳವಣಿಗೆ ಉದ್ಯೋಗ ಸೃಷ್ಟಿಸಿದೆಯೇ ಎನ್ನುವ ಪ್ರಶ್ನೆ ಎದುರಾಗುತ್ತದೆ.
ಅದರ ಜೊತೆಗೆ ಸಿಗುತ್ತಿರುವ ಉದ್ಯೋಗ ಎಂತಹುದು ಎಂಬುದನ್ನೂ ನೋಡಬೇಕು. ಸ್ಥಿರ ಸಂಬಳ ಇದೆಯೇ? ಕೆಲಸದ ಭದ್ರತೆ ಇದೆಯೇ? ಸಾಮಾಜಿಕ ಭದ್ರತೆ ಇದೆಯೇ? ಕೆಲಸದಿಂದ ಬರುವ ಆದಾಯ ಕುಟುಂಬದ ಖರ್ಚನ್ನು ನಿಭಾಯಿಸಲು ಸಾಕಾಗುತ್ತಿದೆಯೇ? ಹೀಗಾಗಿ ಕೆಲಸ ಇದೆ ಎಂದರೆ ಆದಾಯ ಮತ್ತು ಜೀವನಮಟ್ಟ ಸುಧಾರಿಸಿದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲಸಕ್ಕಾಗಿ ದೂರದ ಊರುಗಳಿಗೆ ಗುಳೆ ಹೋಗುವ ಪ್ರಮೇಯವೂ ಎದುರಾಗುತ್ತಿರಲಿಲ್ಲ. ಕಾರ್ಮಿಕ ಬಲ ಸಮೀಕ್ಷೆ ಪ್ರಕಾರ ದಿನಗೂಲಿ ಕೆಲಸ ಮಾಡುವ ಮಹಿಳೆಯರ ಸರಾಸರಿ ದಿನದ ಗಳಿಕೆ ₹324; ಪುರುಷರದ್ದು ₹489. ಈ ಅಂತರವೂ ಉದ್ಯೋಗದ ಗುಣಮಟ್ಟ ಮತ್ತು ಆದಾಯದ ಪ್ರಶ್ನೆಯನ್ನು ಮುಂದೆ ತರುತ್ತದೆ. ಜಿಡಿಪಿ ಬೆಳವಣಿಗೆ ಉದ್ಯೋಗ ಮತ್ತು ಆದಾಯದ ಮೂಲಕ ಹೆಚ್ಚಿನ ಕುಟುಂಬಗಳಿಗೆ ತಲುಪಿದಾಗ ಮಾತ್ರ ಅದರ ಪರಿಣಾಮ ಜನರ ಬದುಕಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.
ಆದಾಯ ಸಾಲದೆ ಜನ ಸಾಲದ ಮೊರೆ ಹೋಗುತ್ತಿರುವುದು ಪ್ರವೃತ್ತಿ ಕೂಡ ಇತ್ತೀಚಿನ ದಿನಗಳಲ್ಲಿ ಕಾಣಿಸುತ್ತಿದೆ. ಆರ್ಬಿಐ ಅಂಕಿ-ಅಂಶಗಳ ಪ್ರಕಾರ, 2025ರ ಸೆಪ್ಟೆಂಬರ್ ವೇಳೆಗೆ ಕುಟುಂಬಗಳ ಸಾಲವು ಜಿಡಿಪಿಯ ಶೇ 45.5ಕ್ಕೆ ತಲುಪಿತ್ತು. ಸಾಮಾನ್ಯ ಖರ್ಚುಗಳಿಗೆ ಸಾಲ ಮಾಡುವ ಸಂಖ್ಯೆ ಏರಿಕೆಯಾಗುತ್ತಿದೆ. 2026ರ ಮಾರ್ಚ್ ವೇಳೆಗೆ ಚಿಲ್ಲರೆ ಸಾಲವು ಕುಟುಂಬಗಳ ಒಟ್ಟು ಸಾಲದ ಶೇ 58.4ರಷ್ಟಿದ್ದವು.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಜಿಡಿಪಿ ಏರಿಕೆಯ ಮತ್ತೊಂದು ಮುಖ: ಭಾರತೀಯರ ಬದುಕಿನ ನಿಜ ಚಿತ್ರ
ಒಂದು ಸಾಲಿನಲ್ಲಿಜಿಡಿಪಿಯ ಏರಿಕೆ ಆರ್ಥಿಕ ಪ್ರಗತಿಯ ಸೂಚಕವಾಗಿದ್ದರೂ, ಅದು ಸಾಮಾನ್ಯರ ಆದಾಯ, ಉದ್ಯೋಗ ಸೃಷ್ಟಿ ಮತ್ತು ಜೀವನಮಟ್ಟದ ಸುಧಾರಣೆಯನ್ನು ಪ್ರತಿಬಿಂಬಿಸುತ್ತಿದೆಯೇ ಎಂಬುದು ಪ್ರಶ್ನಾರ್ಹವಾಗಿದೆ.
ಪ್ರಮುಖ ಪ್ರಶ್ನೋತ್ತರ
ದೇಶದ ಜಿಡಿಪಿ ಬೆಳವಣಿಗೆ ದರ ಎಷ್ಟು ದಾಖಲಾಗಿದೆ?
2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇ 7.8ರಷ್ಟು ದಾಖಲಾಗಿದೆ, ಇದು ನಿರೀಕ್ಷೆಗಿಂತ ಉತ್ತಮ ಸಾಧನೆಯಾಗಿದೆ.
ಜಿಡಿಪಿ ಬೆಳವಣಿಗೆಯ ಲಾಭ ಸಾಮಾನ್ಯ ಜನರಿಗೆ ಸಿಗುತ್ತಿದೆಯೇ?
ಜಿಡಿಪಿ ಏರಿಕೆಯಾಗುತ್ತಿದ್ದರೂ, ಉದ್ಯೋಗ ಸೃಷ್ಟಿ, ಸಂಬಳದ ಹೆಚ್ಚಳ ಮತ್ತು ಜನರ ಖರೀದಿ ಸಾಮರ್ಥ್ಯದಲ್ಲಿ ನಿರೀಕ್ಷಿತ ಸುಧಾರಣೆ ಕಂಡುಬರುತ್ತಿಲ್ಲ ಎಂಬುದು ಮುಖ್ಯ ಕಳವಳವಾಗಿದೆ.
ಕೃಷಿ ಕ್ಷೇತ್ರದ ಬೆಳವಣಿಗೆ ಏಕೆ ಸವಾಲಾಗಿದೆ?
ದೇಶದ ಬಹುತೇಕ ಜನರು ಅವಲಂಬಿಸಿರುವ ಕೃಷಿ ಮತ್ತು ಸಂಬಂಧಿತ ವಲಯದ ಬೆಳವಣಿಗೆ ಕೇವಲ ಶೇ 3.6ರಷ್ಟು ಮಾತ್ರ ಇದ್ದು, ಇದು ಗ್ರಾಮೀಣ ಜನರ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ.
ಕುಟುಂಬಗಳ ಸಾಲದ ಪ್ರಮಾಣ ಹೆಚ್ಚಾಗಲು ಕಾರಣವೇನು?
ಆದಾಯ ಸಾಲದ ಕಾರಣದಿಂದಾಗಿ ಸಾಮಾನ್ಯ ಜನರು ದಿನನಿತ್ಯದ ಖರ್ಚಿಗಾಗಿ ಸಾಲವನ್ನು ಅವಲಂಬಿಸುತ್ತಿದ್ದು, ಇದು ಆರ್ಥಿಕ ಅಸ್ಥಿರತೆಯ ಸಂಕೇತವಾಗಿದೆ.
ನಿಜವಾದ ಆರ್ಥಿಕ ಪ್ರಗತಿಯನ್ನು ಅಳೆಯುವುದು ಹೇಗೆ?
ಕೇವಲ ಜಿಡಿಪಿ ಅಂಕಿಅಂಶಗಳ ಬದಲಿಗೆ ಉದ್ಯೋಗದ ಗುಣಮಟ್ಟ, ಬಡತನ ನಿರ್ಮೂಲನೆ, ಶಿಕ್ಷಣ, ಆರೋಗ್ಯ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕಗಳ ಸುಧಾರಣೆಯೇ ನಿಜವಾದ ಪ್ರಗತಿಯ ಅಳತೆಗೋಲಾಗಿದೆ.
ಪ್ರಮುಖ ಅಂಕಿಅಂಶಗಳು
7.8%ಜಿಡಿಪಿ ಬೆಳವಣಿಗೆ ದರ5.1%ನಿರುದ್ಯೋಗ ದರ (ಜುಲೈ 2026)₹2,08,090ಭಾರತದ ಸರಾಸರಿ ತಲಾ ಆದಾಯ4.45%ಚಿಲ್ಲರೆ ಹಣದುಬ್ಬರ ದರ (ಜುಲೈ 2026)58.4%ಕುಟುಂಬಗಳ ಒಟ್ಟು ಸಾಲದಲ್ಲಿ ಚಿಲ್ಲರೆ ಸಾಲದ ಪಾಲು
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ವಿವೇಕ್ ತೋಂಟದಾರ್ಯ ವಿಶ್ಲೇಷಣೆ: ತೈಲದ ಮೇಲಿನ ಅವಲಂಬನೆ ಕಳಚಿದರೆ ಭಾರತಕ್ಕೇನು ಲಾಭ?ತಲಾ ಆದಾಯ ಏನಾಗಿದೆ?
ಉದ್ಯೋಗದ ಬಳಿಕ ಸಹಜವಾಗಿ ಎದುರಾಗುವ ಪ್ರಶ್ನೆ ಆದಾಯದ್ದು. ದೇಶದ ಆರ್ಥಿಕತೆ ಶೇ 7.8ರಷ್ಟು ಬೆಳೆದಿರುವಾಗ, ಈ ಬೆಳವಣಿಗೆಯ ಪ್ರತಿಫಲ ಜನರ ಆದಾಯದಲ್ಲೂ ಎಷ್ಟು ಕಾಣಿಸುತ್ತಿದೆ ಎಂಬುದು ಗಮನಿಸಬೇಕು. 2025-26ರಲ್ಲಿ ಭಾರತದ ತಲಾ ಆದಾಯ ಸರಾಸರಿ ₹ 2,08,090 ಇದೆ. ಅಂದರೆ ದಿನಕ್ಕೆ ಸುಮಾರು ₹570.
ದಿನಕ್ಕೆ ₹570 ಆದಾಯದಲ್ಲಿ ಒಬ್ಬ ವ್ಯಕ್ತಿ ಆಹಾರ, ಮನೆ ಬಾಡಿಗೆ, ವಿದ್ಯುತ್, ಪ್ರಯಾಣ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಖರ್ಚುಗಳನ್ನು ನಿಭಾಯಿಸಬೇಕಾದರೆ ಎಷ್ಟು ಉಳಿಯುತ್ತದೆ? ಕುಟುಂಬದಲ್ಲಿ ಸಂಪಾದಿಸುವವರು ಒಬ್ಬರೇ ಆಗಿದ್ದರೆ ಪರಿಸ್ಥಿತಿ ಇನ್ನಷ್ಟು ಕಠಿಣವಾಗಬಹುದು.
ಮತ್ತೊಂದೆಡೆ, ₹570 ಎಂಬುದು ಪ್ರತಿಯೊಬ್ಬ ಭಾರತೀಯನ ಕೈಗೆ ಬರುವ ನಿಜವಾದ ಹಣವೂ ಅಲ್ಲ. ಕೆಲವರ ಆದಾಯ ಇದಕ್ಕಿಂತ ಹಲವು ಪಟ್ಟು ಹೆಚ್ಚಿರಬಹುದು; ಇನ್ನೂ ಕೆಲವರ ಆದಾಯ ಇದಕ್ಕಿಂತ ಬಹಳ ಕಡಿಮೆ ಇರಬಹುದು. ಹೀಗಾಗಿ ಸರಾಸರಿ ಆದಾಯ ಏರಿಕೆಯಾಗಿದೆ ಎಂಬ ಅಂಕಿ ಮಾತ್ರದಿಂದ ಸಾಮಾನ್ಯ ಕುಟುಂಬದ ಜೀವನಮಟ್ಟ ಸುಧಾರಿಸಿದೆ ಎಂದು ಹೇಳಲು ಸಾಧ್ಯವಿಲ್ಲ.
ಹೀಗಾಗಿ ಜಿಡಿಪಿ ಮತ್ತು ತಲಾ ಆದಾಯ ಹೆಚ್ಚಾಗಿದೆ ಎನ್ನುವುದರ ಜೊತೆಗೆ, ಸಾಮಾನ್ಯ ಕುಟುಂಬದ ಆದಾಯ ಎಷ್ಟು ಹೆಚ್ಚಾಗಿದೆ ಮತ್ತು ಆ ಹಣದಲ್ಲಿ ಜೀವನ ನಡೆಸುವುದು ಎಷ್ಟು ಸುಲಭವಾಗಿದೆ ಎಂಬುದನ್ನೂ ನೋಡಬೇಕು. ಆಗ ಮಾತ್ರ ಆರ್ಥಿಕ ಬೆಳವಣಿಗೆಯ ನಿಜವಾದ ಪರಿಣಾಮ ಅರ್ಥವಾಗುತ್ತದೆ.
ಹಿಮಾಲಯದಲ್ಲಿ ತಾಪಮಾನ ಏರಿಕೆ, ನೀರ್ಗಲ್ಲು ಕುಸಿತ: ನೇಪಾಳ ಪ್ರವಾಹದ ಎಚ್ಚರಿಕೆ ಏನು?ಬೆಲೆ ಏರಿಕೆಯ ಬಿಸಿ
ಜುಲೈ 2026ರಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಶೇ 4.45ರಷ್ಟಿತ್ತು. ಆಹಾರ ಬೆಲೆ ಏರಿಕೆ ಶೇ 5.52ಕ್ಕೆ ತಲುಪಿತ್ತು. ಗ್ರಾಮೀಣ ಪ್ರದೇಶದಲ್ಲಿ ಇದರ ಪ್ರಮಾಣ ಶೇ 5.79. ಇದರರ್ಥ ಗ್ರಾಮೀಣ ಕುಟುಂಬಗಳ ಆದಾಯ ಹೆಚ್ಚಾಗುತ್ತಿಲ್ಲ, ಆಹಾರ, ಇಂಧನ ಮತ್ತು ದಿನನಿತ್ಯದ ಅಗತ್ಯ ವಸ್ತುಗಳ ಮೇಲಿನ ಖರ್ಚು ಏರುತ್ತಿದೆ. ಆದಾಯ ಕಡಿಮೆ ಕುಟುಂಬಗಳಲ್ಲಿ ದುಡಿದ ಹಣದ ದೊಡ್ಡ ಭಾಗವೇ ಆಹಾರ ಮತ್ತು ಅಗತ್ಯ ವಸ್ತುಗಳಿಗೆ ಹೋಗುತ್ತದೆ. ಹೀಗಾದಾಗ ಸಹಜವಾಗಿ ಉಳಿತಾಯ ಕುಗ್ಗುತ್ತದೆ. ಜಿಡಿಪಿ ಬೆಳೆಯುತ್ತಿದ್ದರೂ ಕುಟುಂಬದ ಆದಾಯ ಅದೇ ವೇಗದಲ್ಲಿ ಹೆಚ್ಚಾಗದಿದ್ದರೆ ಬೆಲೆ ಏರಿಕೆಯ ಹೊಡೆತದಿಂದ ಆ ಬೆಳವಣಿಗೆಯ ಲಾಭ ಕಡಿಮೆಯಾಗುತ್ತದೆ. ಅದೇ ಕಾರಣಕ್ಕೆ ಜಿಡಿಪಿ ಬೆಳವಣಿಗೆಯ ಜೊತೆ ಜನರ ಆದಾಯ ಎಷ್ಟು ಹೆಚ್ಚಾಗಿದೆ ಎಂಬುದಷ್ಟೇ ಅಲ್ಲ, ಆ ಆದಾಯದಲ್ಲಿ ಅವರು ಎಷ್ಟು ವಸ್ತುಗಳನ್ನು ಖರೀದಿಸಬಲ್ಲರು ಎಂಬುದನ್ನೂ ನೋಡಬೇಕು.
₹22,006 ಕೋಟಿ ಸಾಲ, ₹6.5 ಕೋಟಿಗೆ ಇತ್ಯರ್ಥ: ಸುಭಾಷ್ ಚಂದ್ರ ಪ್ರಕರಣದ ಅಸಲಿ ಲೆಕ್ಕಜನರ ಖರ್ಚು ಹೆಚ್ಚಾಗಿದೆ. ಆದರೆ..
ಮೊದಲ ತ್ರೈಮಾಸಿಕದಲ್ಲಿ ಖಾಸಗಿ ಬಳಕೆ ಶೇ 7.1ರಷ್ಟು ಹೆಚ್ಚಾಗಿದೆ. ಇದು ದೇಶದಲ್ಲಿ ಸರಕು ಮತ್ತು ಸೇವೆಗಳ ಬೇಡಿಕೆ ಮುಂದುವರಿದಿದೆ ಎಂಬುದರ ಪ್ರತೀಕ. ಆದರೆ ಖರ್ಚು ಹೆಚ್ಚಾಗಿದೆ ಎಂದರೆ ಜನರ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದೇನೂ ಅಲ್ಲ. ಆದಾಯ ಹೆಚ್ಚಾದರೂ ಖರ್ಚು ಹೆಚ್ಚಬಹುದು. ಬೆಲೆ ಏರಿದರೂ ಅದೇ ಆಗುತ್ತದೆ. 2023-24ರ ಮನೆ ಬಳಕೆ ವೆಚ್ಚದ ಸಮೀಕ್ಷೆಯ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ ಒಬ್ಬ ವ್ಯಕ್ತಿಯ ಸರಾಸರಿ ಮಾಸಿಕ ಬಳಕೆ ವೆಚ್ಚ ₹4,122. ನಗರದಲ್ಲಿ ಅದು ₹6,996. ಆದರೆ ಗ್ರಾಮೀಣ ಪ್ರದೇಶದ ಅತ್ಯಂತ ಕಡಿಮೆ ಖರ್ಚು ಮಾಡುವ ಶೇ 5 ಮಂದಿಯ ಸರಾಸರಿ ಮಾಸಿಕ ಖರ್ಚು ಕೇವಲ ₹1,677. ನಗರದಲ್ಲಿ ಇದೇ ಗುಂಪಿನವರ ಖರ್ಚು ₹2,376. ಗ್ರಾಮೀಣದಲ್ಲಿ ಅತ್ಯಂತ ಹೆಚ್ಚು ಖರ್ಚು ಮಾಡುವ ಶೇ 5ರ ಜನರ ಮಾಸಿಕ ಖರ್ಚು ₹10,137. ನಗರದಲ್ಲಿ ಇದು ₹20,310. ಈ ವ್ಯತ್ಯಾಸವೇ ದೇಶದ ಸರಾಸರಿ ಅಂಕಿ ಮತ್ತು ಸಾಮಾನ್ಯ ಕುಟುಂಬದ ಬದುಕಿನ ನಡುವಿನ ಅಂತರವನ್ನು ತೋರಿಸುತ್ತದೆ. ಬಳಕೆ ಹೆಚ್ಚಾಗಿದೆ ಎಂಬುದಕ್ಕಿಂತ, ಯಾರ ಖರ್ಚು ಹೆಚ್ಚಾಗಿದೆ ಮತ್ತು ಅದಕ್ಕೆ ಬೇಕಾದ ಹಣ ಎಲ್ಲಿಂದ ಬರುತ್ತಿದೆ ಎಂಬುದೂ ಮುಖ್ಯ.
ಹೀಗಾಗಿ ಜಿಡಿಪಿ ಬೆಳವಣಿಗೆಯ ಜೊತೆಗೆ ಜನರ ಆದಾಯ, ಬೆಲೆ ಏರಿಕೆ ಮತ್ತು ಖರ್ಚಿನ ಚಿತ್ರವನ್ನೂ ನೋಡಿದಾಗ ಮಾತ್ರ ಆರ್ಥಿಕ ಬೆಳವಣಿಗೆಯ ನಿಜವಾದ ಪರಿಣಾಮ ಅರ್ಥವಾಗುತ್ತದೆ.
ಕಥೆ, ಹಾಡು, ಅನಿಮೇಷನ್ ಮೂಲಕ ಕನ್ನಡ ಕಲಿಕೆ: ಅಮೆರಿಕದ ದಂಪತಿ ಕಟ್ಟಿದ 'ಶಾಲೆ'ಕೃಷಿ ಬೆಳವಣಿಗೆ ಇನ್ನೂ ನಿಧಾನ
ಜಿಡಿಪಿ ಶೇ 7.8ರಷ್ಟು ಬೆಳೆದಿದ್ದರೂ, ಎಲ್ಲಾ ವಲಯಗಳ ಬೆಳವಣಿಗೆ ಒಂದೇ ವೇಗದಲ್ಲಿಲ್ಲ. ಮೊದಲ ತ್ರೈಮಾಸಿಕದಲ್ಲಿ ಸೇವಾ ವಲಯ ಶೇ 10ರಷ್ಟು ಮತ್ತು ದ್ವಿತೀಯ ವಲಯ ಶೇ 8.6ರಷ್ಟು ಬೆಳೆದಿದ್ದರೆ, ಕೃಷಿ ಮತ್ತು ಸಂಬಂಧಿತ ವಲಯದ ಬೆಳವಣಿಗೆ ಶೇ 3.6ರಷ್ಟೇ. ದೇಶದ ದೊಡ್ಡ ಪ್ರಮಾಣದ ಕುಟುಂಬಗಳು ಇನ್ನೂ ಕೃಷಿಯ ಮೇಲೆ ಅವಲಂಬಿತವಾಗಿವೆ. ಕೃಷಿಯ ಉತ್ಪಾದನೆ ಮತ್ತು ಆದಾಯ ನಿಧಾನವಾಗಿ ಹೆಚ್ಚಾದರೆ, ಗ್ರಾಮೀಣ ಕುಟುಂಬಗಳ ಆದಾಯಕ್ಕೂ ಅದರ ಪರಿಣಾಮ ಬೀಳುತ್ತದೆ.
ಒಟ್ಟಾರೆ ಜಿಡಿಪಿ ವೇಗವಾಗಿ ಬೆಳೆಯುತ್ತಿದ್ದರೂ, ಕೃಷಿಯನ್ನು ಅವಲಂಬಿಸಿರುವ ಕುಟುಂಬಗಳಿಗೆ ಆ ಬೆಳವಣಿಗೆಯ ಲಾಭ ಅದೇ ವೇಗದಲ್ಲಿ ತಲುಪುತ್ತಿದೆಯೇ?
ಜಿಡಿಪಿಯಾಚೆ ಜನರ ಬದುಕಿನ ಚಿತ್ರ
ಜಿಡಿಪಿ ಬೆಳವಣಿಗೆ ಪ್ರಮಾಣದಷ್ಟೇ ಬಡತನ ಇಳಿಕೆಯಾಗಿದೆಯೇ? ಒಂದು ವೇಳೆ ಹಾಗಿದ್ದರೆ, ಆಹಾರ ಭದ್ರತೆ ಯೋಜನೆಯಡಿ ನೀಡುವ ದವಸ-ಧಾನ್ಯಗಳ ಪ್ರಮಾಣ ಏರಿಕೆಯಾಗುತ್ತಿದೆ. ಕರ್ನಾಟಕದಲ್ಲಿ ಸುಮಾರು 1 ಕೋಟಿ ಕುಟುಂಬಕ್ಕೆ ಇನ್ನೂ ಬಿಪಿಎಲ್ ಪಡಿತರ ಚೀಟಿ ಇದೆ. ಅದರ ಜೊತೆಗೆ ಮಾನವ ಅಭಿವೃದ್ಧಿಯಲ್ಲಿಯೂ ಭಾರತ ಪ್ರದರ್ಶನ ಗಮನಾರ್ಹವಾಗಿಲ್ಲ 2023ರಲ್ಲಿ 193 ದೇಶಗಳಲ್ಲಿ ಭಾರತ 130ನೇ ಸ್ಥಾನದಲ್ಲಿದೆ. 2026ರ ವಿಶ್ವ ಸಂತೃಪ್ತ ವರದಿಯಲ್ಲಿ ಭಾರತ 147 ದೇಶಗಳಲ್ಲಿ 116ನೇ ಸ್ಥಾನದಲ್ಲಿದೆ. 2025ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 123 ದೇಶಗಳ ಪೈಕಿ ಭಾರತ 102ನೇ ಸ್ಥಾನದಲ್ಲಿದೆ.
ಜಿಡಿಪಿ ವೇಗವಾಗಿ ಬೆಳೆಯುತ್ತಿದ್ದರೂ, ಬಡತನ, ಮಾನವ ಅಭಿವೃದ್ಧಿ, ಜನರ ಸಂತೃಪ್ತಿ ಮತ್ತು ಪೌಷ್ಟಿಕತೆಯ ಸೂಚಕಗಳು ಅದೇ ವೇಗದಲ್ಲಿ ಸುಧಾರಿಸುತ್ತಿವೆಯೇ?
ಈರುಳ್ಳಿ ಬೆಲೆ ಏರಿಕೆಯ ಒಳನೋಟ: ಉತ್ಪಾದನೆ, ಪೂರೈಕೆ ಮತ್ತು ಮಾರುಕಟ್ಟೆಯ ಲೆಕ್ಕನಿಜವಾದ ಚಿತ್ರ ಯಾವುದು?
ಶೇ 7.8 ಜಿಡಿಪಿ ಬೆಳವಣಿಗೆ ಬಲವಾದ ಆರ್ಥಿಕ ಬೆಳವಣಿಗೆ. ಹೂಡಿಕೆ ಹೆಚ್ಚಾಗಿದೆ, ಉತ್ಪಾದನೆ ಹೆಚ್ಚಾಗಿದೆ, ಸೇವಾ ವಲಯ ವೇಗವಾಗಿ ಬೆಳೆದಿದೆ, ದೇಶೀಯ ಬಳಕೆ ಮುಂದುವರಿದಿದೆ. ಆದರೆ ಅದೇ ಸಮಯದಲ್ಲಿ ಉದ್ಯೋಗದ ಗುಣಮಟ್ಟ, ಕಡಿಮೆ ಆದಾಯ, ಮಹಿಳೆಯರ ಕಡಿಮೆ ಉದ್ಯೋಗ ಪಾಲ್ಗೊಳ್ಳುವಿಕೆ, ಕೃಷಿಯ ನಿಧಾನ ಬೆಳವಣಿಗೆ, ಬೆಲೆ ಏರಿಕೆ, ಆದಾಯದ ಅಂತರ, ಮಕ್ಕಳ ಪೌಷ್ಟಿಕತೆ ಮತ್ತು ಮಾನವ ಅಭಿವೃದ್ಧಿಯಂತಹ ಸಮಸ್ಯೆಗಳು ಇನ್ನೂ ಉಳಿದಿವೆ.
ಆದರೆ ದೇಶದ ಆರ್ಥಿಕ ಪ್ರಗತಿಯನ್ನು ಅಳೆಯುವುದು ಜಿಡಿಪಿಯ ಅಂಕಿಯಿಂದ ಮಾತ್ರ ಸಾಧ್ಯವಿಲ್ಲ. ಉದ್ಯೋಗ ಎಷ್ಟು ಹೆಚ್ಚಾಗಿದೆ? ಆದಾಯ ಎಷ್ಟು ಏರಿದೆ? ಬೆಲೆ ಏರಿಕೆಯ ನಂತರವೂ ಕುಟುಂಬದ ಕೈಯಲ್ಲಿ ಎಷ್ಟು ಹಣ ಉಳಿಯುತ್ತಿದೆ? ಬಡತನ ಎಷ್ಟು ಕಡಿಮೆಯಾಗಿದೆ? ಜನರ ಆರೋಗ್ಯ, ಶಿಕ್ಷಣ, ಪೌಷ್ಟಿಕತೆ ಮತ್ತು ಜೀವನ ತೃಪ್ತಿ ಎಷ್ಟು ಸುಧಾರಿಸಿದೆ?
ಈ ಪ್ರಶ್ನೆಗಳ ಉತ್ತರವೇ ನಿಜವಾದ ಬೆಳವಣಿಗೆ.
ಆಧಾರ: ಅಂಕಿಅಂಶ ಮತ್ತು ಸಾಂಖ್ಯಿಕ ಸಚಿವಾಲಯ, ಪಿಐಬಿ, ಆರ್ಬಿಐ, ಪಿಟಿಐ, ವಿಶ್ವಬ್ಯಾಂಕ್, ಯುಎನ್ಡಿಪಿ, ವಿಶ್ವ ಸಂತೃಪ್ತಿ ವರದಿ ಹಾಗೂ ಜಾಗತಿಕ ಹಸಿವು ಸೂಚ್ಯಂಕ.
'ಅಕ್ಕ' ಸಮ್ಮೇಳನದಲ್ಲಿ ಕರ್ನಾಟಕದ ಸಿರಿಪೇಟೆ: ಪರಂಪರೆ, ಉದ್ಯಮ, ಅವಕಾಶಗಳ ಸಂಗಮ
