ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ, ಆಳ ಅಗಲ, ಸಂಪಾದಕೀಯ, ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
BLO ಮನೆ ಭೇಟಿ ಕಡ್ಡಾಯ: SIR ನಿಯಮ ಉಲ್ಲಂಘನೆ ತಡೆಗೆ ಮುಖ್ಯ ಚುನಾವಣಾಧಿಕಾರಿ ಸೂಚನೆ

ರಾಜ್ಯದ ವಿವಿಧೆಡೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ನಿಯಮ ಉಲ್ಲಂಘನೆ ಮತ್ತು ಮತದಾರರ ಗುಂಪು ಸೇರಿಸಿ ಗಣತಿ ನಮೂನೆಗಳನ್ನು ಸಾಮೂಹಿಕವಾಗಿ ವಿತರಿಸುತ್ತಿರುವ ಪ್ರಕರಣಗಳು ವರದಿಯಾದ ಬೆನ್ನಲ್ಲೇ, ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ಕಡ್ಡಾಯವಾಗಿ ಮನೆಗಳಿಗೆ ತೆರಳಿ ಗಣತಿ ನಮೂನೆ ವಿತರಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಯು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಯೋಧ್ಯೆ ಬೆನ್ನಲ್ಲೇ ಬದರಿನಾಥದಲ್ಲೂ ದೇಣಿಗೆ ದುರುಪಯೋಗ ಆರೋಪ: ತನಿಖೆಗೆ ಆದೇಶ

ಅಯೋಧ್ಯೆಯ ರಾಮಮಂದಿರದ ದೇಣಿಗೆ ದುರುಪಯೋಗ ಆರೋಪಗಳ ಬೆನ್ನಲ್ಲೇ, ಬದರಿನಾಥ ದೇಗುಲದಲ್ಲೂ ಇಂತಹದೇ ಆರೋಪಗಳ ಕೇಳಿಬಂದಿದ್ದು, ಬದರಿನಾಥ-ಕೇದಾರನಾಥ ದೇಗುಲ ಸಮಿತಿ (ಬಿಕೆಟಿಸಿ) ತನಿಖೆಗೆ ಆದೇಶಿಸಿದೆ.
ಅಯೋಧ್ಯೆ ಬೆನ್ನಲ್ಲೇ ಬದರಿನಾಥದಲ್ಲೂ ದೇಣಿಗೆ ದುರುಪಯೋಗ ಆರೋಪ: ತನಿಖೆಗೆ ಆದೇಶಸಂಪುಟ ವಿಸ್ತರಣೆ ಕಸರತ್ತು ದೆಹಲಿಗೆ ಸಿಎಂ ಡಿಕೆಶಿ

ಸಚಿವ ಸ್ಥಾನದ ಆಕಾಂಕ್ಷಿ ಶಾಸಕರ ಒತ್ತಡ ತೀವ್ರವಾಗುತ್ತಿದ್ದು, ಸಂಪುಟ ವಿಸ್ತರಣೆಯ ಕಸರತ್ತನ್ನು ಅಂತ್ಯಗೊಳಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯತ್ತ ಪಯಣ ಬೆಳೆಸಲು ಸಿದ್ಧತೆ ನಡೆಸಿದ್ದಾರೆ. ಪಕ್ಷದ ಹೈಕಮಾಂಡ್ ನಾಯಕರ ಭೇಟಿಗೆ ಸಮ್ಮತಿಯ ನಿರೀಕ್ಷೆಯಲ್ಲಿದ್ದು, ಎರಡು ದಿನಗಳಲ್ಲಿ ದೆಹಲಿಗೆ ತೆರಳಿ, ನೂತನ ಸಚಿವರ ಪಟ್ಟಿ ಅಂತಿಮಗೊಳಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ಹೇಳಿವೆ.
ಸಂಪುಟ ವಿಸ್ತರಣೆ ಕಸರತ್ತು ದೆಹಲಿಗೆ ಸಿಎಂ ಡಿಕೆಶಿಸಂಪಾದಕೀಯ: ಕಾರ್ಮಿಕರ ಸುರಕ್ಷತೆಗಿಲ್ಲ ಒತ್ತು ಬಡಪಾಯಿಗಳ ಜೀವಕ್ಕೆ ಕುತ್ತು

ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿ ಮಾದಾಪಟ್ಟಣ ಬಳಿಯ ಕಲ್ಲು ಕ್ವಾರಿಯಲ್ಲಿ 7 ಕಾರ್ಮಿಕರು ಮೃತಪಟ್ಟಿರುವ ದುರಂತ ಆಕಸ್ಮಿಕ ಘಟನೆಯಷ್ಟೇ ಆಗಿರದೆ, ಕ್ವಾರಿ ಮಾಲೀಕರ ನಿರ್ಲಕ್ಷ್ಯ ಮತ್ತು ಆಡಳಿತ ವ್ಯವಸ್ಥೆಯ ಹೊಣೆಗೇಡಿತನದ ಫಲಿತವೂ ಆಗಿದೆ. ಕ್ವಾರಿಯಲ್ಲಿ ಕಾರ್ಯ ನಿರ್ವಹಿಸುವಾಗ ಬೃಹತ್ ಬಂಡೆಯೊಂದು ಬಿದ್ದು 7 ಕಾರ್ಮಿಕರು ಮೃತಪಟ್ಟಿದ್ದಾರೆ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅನಧಿಕೃತ ಗಣಿಗಾರಿಕೆ, ಸುರಕ್ಷತಾ ನಿಯಮಗಳ ಉಲ್ಲಂಘನೆ, ಸ್ಫೋಟಕಗಳ ಅಸುರಕ್ಷಿತ ಬಳಕೆ ಮತ್ತು ಬಂಡೆ ಕುಸಿತಗಳಿಂದ ಕಾರ್ಮಿಕರು ಪ್ರಾಣ ಕಳೆದುಕೊಂಡ ಘಟನೆಗಳು ಕಳೆದ ಎರಡು ದಶಕಗಳಲ್ಲಿ ಆಗಾಗ್ಗೆ ವರದಿಯಾಗುತ್ತಲೇ ಇವೆ.
ಸಂಪಾದಕೀಯ | ಕಾರ್ಮಿಕರ ಸುರಕ್ಷತೆಗಿಲ್ಲ ಒತ್ತು ಬಡಪಾಯಿಗಳ ಜೀವಕ್ಕೆ ಕುತ್ತುವಿಶ್ಲೇಷಣೆ | ಮಂದಿರ: ರಾಜಕಾರಣ ಮತ್ತು ಹೊಣೆ

ಅಯೋಧ್ಯೆಯ ರಾಮಮಂದಿರ ರಾಜಕೀಯ ಚಳವಳಿಯೊಂದರ ಉತ್ಪನ್ನ. ಆ ಕಾರಣದಿಂದಲೇ, ಅಲ್ಲಿ ನಡೆದಿದೆ ಎನ್ನಲಾದ 'ಕಾಣಿಕೆ ಕಳವು' ಆರೋಪಕ್ಕೆ ವಿಶೇಷ ಮಹತ್ವ. ಸಾರ್ವಜನಿಕ ನಂಬಿಕೆಯ ಅಣೆಕಟ್ಟೆಯಲ್ಲಿ ಮೂಡಿರುವ ಬಿರುಕನ್ನು ಸರಿಪಡಿಸುವ ಉತ್ತರದಾಯಿತ್ವವನ್ನು ಸಂಬಂಧಿಸಿದವರು ಹೊರಲೇಬೇಕಾಗಿದೆ..
ವಿಶ್ಲೇಷಣೆ | ಮಂದಿರ: ರಾಜಕಾರಣ ಮತ್ತು ಹೊಣೆನಟ ದರ್ಶನ್ ಅರ್ಜಿ ತಿರಸ್ಕರಿಸಿದ ಸುಪ್ರೀಂ: ಒಂದು ವರ್ಷದ ವರೆಗೆ ಜಾಮೀನು ನಿರ್ಬಂಧ

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಒಂದು ವರ್ಷದವರೆಗೆ ನಟ ದರ್ಶನ್ ಜಾಮೀನು ಪಡೆಯಲು ಅರ್ಹರಲ್ಲ ಎಂದು ಮೇ 15ರಂದು ನೀಡಿದ್ದ ಆದೇಶದ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್ ಪ್ರಕಾರ, ದರ್ಶನ್ ಅರ್ಜಿ ಇತ್ಯರ್ಥವಾಗಿದೆ. ಆದರೆ, ಅಲ್ಲಿ ಯಾವುದೇ ಲಿಖಿತ ಆದೇಶ ಲಭ್ಯವಿಲ್ಲ.
ನಟ ದರ್ಶನ್ ಅರ್ಜಿ ತಿರಸ್ಕರಿಸಿದ ಸುಪ್ರೀಂ: ಒಂದು ವರ್ಷದ ವರೆಗೆ ಜಾಮೀನು ನಿರ್ಬಂಧಖಮೇನಿ ಪಾರ್ಥಿವ ಶರೀರ 125 ದಿನ ಕಾಪಿಟ್ಟ ಇರಾನ್‌ಗೆ ಅಂತ್ಯಕ್ರಿಯೆ ಹೊತ್ತಲ್ಲಿ ಆತಂಕ

ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗೆ ರಾಜಧಾನಿ ಟೆಹರಾನ್‌ನಲ್ಲಿ ಸಿದ್ಧತೆ ಆರಂಭವಾಗಿದೆ. ಅಂತ್ಯಕ್ರಿಯೆಯ ವಿಧಿ-ವಿಧಾನಗಳು ಇಂದಿನಿಂದ (ಜುಲೈ 4ರಂದು) ಆರಂಭವಾಗಲಿದ್ದು, ಜುಲೈ 9ರಂದು ಮಷಾದ್ ನಗರದಲ್ಲಿ ಮುಕ್ತಾಯಗೊಳ್ಳಲಿವೆ.
ಖಮೇನಿ ಪಾರ್ಥಿವ ಶರೀರ 125 ದಿನ ಕಾಪಿಟ್ಟ ಇರಾನ್‌ಗೆ ಅಂತ್ಯಕ್ರಿಯೆ ಹೊತ್ತಲ್ಲಿ ಆತಂಕಮತ್ತೆ ಮಿಂಚಿದ ಮೆಸ್ಸಿ; ತನ್ನದೇ ಆಟಗಾರನ ಎಡವಟ್ಟಿನಿಂದ ಸೋತ ಕೇಪ್ ವರ್ಡ್

ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಕೇಪ್ ವರ್ಡ್ ತಂಡವನ್ನು 3 - 2 ಗೋಲುಗಳ ಅಂತರದಿಂದ ಮಣಿಸಿದ ಅರ್ಜೆಂಟೀನಾ, ಈ ಬಾರಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 'ಸೂಪರ್-16' ಹಂತಕ್ಕೆ ಪ್ರವೇಶಿಸಿತು.
FIFA: ಮತ್ತೆ ಮಿಂಚಿದ ಮೆಸ್ಸಿ; ತನ್ನದೇ ಆಟಗಾರನ ಎಡವಟ್ಟಿನಿಂದ ಸೋತ ಕೇಪ್ ವರ್ಡ್ಚರ್ಚೆ | ಆರ್‌ಎಸ್‌ಎಸ್‌ಗೆ ನೋಂದಣಿಯ ಹಂಗೇಕೆ?

ಸಂಘದ ಯಾವುದೇ ಶಾಖೆಯಲ್ಲಿ ಯಾವುದೇ ವ್ಯಾವಹಾರಿಕ ಕಾರ್ಯ ನಡೆಯುವುದಿಲ್ಲ. ಸಂಘದ ಶಾಖೆಗಳ ಮೂಲಕ ವಿವಿಧ ಆಯಾಮಗಳಲ್ಲಿ ಸದ್ಭಾವನೆಯಿಂದ ದೇಶಕ್ಕಾಗಿ ಕೆಲಸ ಮಾಡಲು ಬೇಕಾದ ವ್ಯಕ್ತಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ರೀತಿ ದೇಶದ ಬಗ್ಗೆ ಸದಾ ಒಳ್ಳೆಯದನ್ನು ಚಿಂತಿಸುವ, ಒಳ್ಳೆಯ ಕಾರ್ಯ ಮಾಡುವ ವ್ಯಕ್ತಿಗಳ ಸಮೂಹ ರಾಷ್ಟ್ರೀಯ ಸ್ವಯಂಸೇವಕ ಸಂಘ. ಇಂತಹ ಕಾರ್ಯ ಮಾಡುವುದಕ್ಕೆ ನೋಂದಣಿಯ ಅಗತ್ಯವೇನು ಎನ್ನುವುದು ಇದುವರೆವಿಗೂ ಯಾರಿಗೂ ತಿಳಿದುಬಂದಿಲ್ಲ. ಹಿಂದೆ ಯಾವ ಸರ್ಕಾರವೂ ನೋಂದಣಿ ಮಾಡಿಸುವಂತೆ ಆದೇಶಿಸಿಲ್ಲ..
ಚರ್ಚೆ | ಆರ್‌ಎಸ್‌ಎಸ್‌ಗೆ ನೋಂದಣಿಯ ಹಂಗೇಕೆ?ಚರ್ಚೆ | ಆರ್‌ಎಸ್‌ಎಸ್‌ನ ಪಲಾಯನವಾದ

ಪ್ರಧಾನಿ ನರೇಂದ್ರ ಮೋದಿ ಸ್ವತಃ ನಾಗ್ಪುರದ ಸಂಘದ ಕೇಂದ್ರ ಕಚೇರಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ; ಬಿಜೆಪಿ ತನ್ನದೇ ಅಧಿಕೃತ ಖಾತೆಯಲ್ಲಿ ತಾನು ಸಂಘದ ರಾಜಕೀಯ ಅಂಗ ಎಂದು ಬಿಂಬಿಸಿಕೊಂಡಿದೆ; ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು, ದೇಶದ ವಿದೇಶಾಂಗ ನೀತಿಯಲ್ಲಿ ಸಂಘದ ದೃಷ್ಟಿಕೋನವಿದೆ ಎಂದಿದ್ದಾರೆ; ಬಿಜೆಪಿಯ ಯಶಸ್ಸಿನ ಹಿಂದೆ ಸಂಘದ ಶ್ರಮವಿದೆ ಎಂದೂ ಭಾಗವತ್ ಹೇಳಿದ್ದಾರೆ. ಆಳುವ ಪಕ್ಷವನ್ನೂ, ದೇಶದ ನೀತಿಯನ್ನೂ ರೂಪಿಸುವ ಶಕ್ತಿ ತನಗಿದೆ ಎನ್ನುತ್ತಲೇ, ತಾನು ಬರೀ ಬೆಳಗಿನ ಕಸರತ್ತು-ಪ್ರಾರ್ಥನೆಯ ಸಂಸ್ಥೆ, ಲೆಕ್ಕ ಕೊಡುವಷ್ಟು ರಾಜಕೀಯವೂ ಅಲ್ಲ, ಸಾರ್ವಜನಿಕವೂ ಅಲ್ಲ ಎಂದು ಹೇಳುವುದು ಸಾಧ್ಯವಿಲ್ಲ..
ಚರ್ಚೆ | ಆರ್‌ಎಸ್‌ಎಸ್‌ನ ಪಲಾಯನವಾದ
