Dailyhunt Logo
  • Light mode
    Follow system
    Dark mode
    • Play Story
    • App Story
ಕರುನಾಡೋತ್ಸವ ಇಂದಿನ ವಿಶೇಷ ಲೇಖನಗಳು: ಸೋಮವಾರ, 02 ನವೆಂಬರ್ 2026

ಕರುನಾಡೋತ್ಸವ ಇಂದಿನ ವಿಶೇಷ ಲೇಖನಗಳು: ಸೋಮವಾರ, 02 ನವೆಂಬರ್ 2026

ಪ್ರಜಾವಾಣಿ ಬಳಗದ ಡಿಜಿಟಲ್‌ ವಿಭಾಗವು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಈ ಬಾರಿ ನವೆಂಬರ್‌ ತಿಂಗಳನ್ನು ಕನ್ನಡ, ಕರ್ನಾಟಕದ ವಿಚಾರದಲ್ಲಿನ ಮಹತ್ವದ ಹಾದಿ ದಾಖಲಿಸುವ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿಯೇ ವಿವಿಧ ವಿಷಯಗಳ ಮೇಲೆ, ತಜ್ಞರು, ಸಾಧಕರು, ಪ್ರಮುಖರ ಲೇಖನಗಳನ್ನು ಪ್ರಕಟಿಸುತ್ತಿದೆ...

ಕರುನಾಡೋತ್ಸವದಲ್ಲಿ ಇಂದಿನ ವಿಶೇಷ ಲೇಖನಗಳ ಪಟ್ಟಿ ಇಲ್ಲಿದೆ. ಸಂಪೂರ್ಣ ಮಾಹಿತಿಗಾಗಿ https://www.prajavani.net/karunadotsava ಭೇಟಿ ಕೊಡಿ

ಗೋಕಾಕ್ ಚಳವಳಿ: ಕನ್ನಡಕ್ಕೆ ಆನೆಬಲವಿತ್ತ ಹೋರಾಟ

ಕೇಂದ್ರ ಸರ್ಕಾರ ಆಗಾಗ 'ಹಿಂದಿ' ಭಾಷೆಯನ್ನು ದಕ್ಷಿಣದ ರಾಜ್ಯಗಳಲ್ಲಿ ಹೇರುವ ಯತ್ನ ನಡೆಸುವಾಗ ಕನ್ನಡದ ಡಿಂಡಿಮ ಸಹಜವಾಗಿಯೇ ಸದ್ದು ಮಾಡುತ್ತದೆ. ಆ ಪ್ರತಿರೋಧದ ಸದ್ದು ಮಾರ್ದನಿಸಿದಾಗೆಲ್ಲ ಕೇಂದ್ರ ಬೆದರುತ್ತದೆ. ಕನ್ನಡಕ್ಕೆ ಕುತ್ತು ಬಂದಾಗ ಹೀಗೊಂದು ಗಟ್ಟಿ ಧ್ವನಿ ಮೊಳಗುವುದಕ್ಕೆ ಒಂದು ರೋಮಾಂಚಕ ಹಿನ್ನೆಲೆ, ಇತಿಹಾಸವಿದೆ.

ಸಮ್ಮೇಳನಾಧ್ಯಕ್ಷರು ಹೇಳಿದ್ದು: ಸಮ್ಮೇಳನ ಕೇವಲ ಸಾಹಿತಿಗಳ ಸಮಾವೇಶವಲ್ಲ; ಗುಂಡಪ್ಪ

ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಕವಿಗಳು, ಸಾಹಿತಿಗಳು, ವಿದ್ವಾಂಸರು ಒಂದೆಡೆ ಸೇರಿ ತಮ್ಮ ಸಾಹಿತ್ಯಕ ಸಾಧನೆಗಳನ್ನು ಹಂಚಿಕೊಳ್ಳುವ ವೇದಿಕೆಯಷ್ಟೇ ಅಲ್ಲ. ಕನ್ನಡ ಭಾಷೆಯ ಬೆಳವಣಿಗೆಗೆ ಬೇಕಾದ ಯೋಜನೆಗಳನ್ನು ರೂಪಿಸುವ, ಹೊಸ ಪೀಳಿಗೆಯಲ್ಲಿ ಓದುವ ಆಸಕ್ತಿ ಬೆಳೆಸುವ, ಕನ್ನಡದಲ್ಲಿ ಜ್ಞಾನಸಂಪತ್ತನ್ನು ಸೃಷ್ಟಿಸುವ ಮತ್ತು ಕನ್ನಡಿಗರ ನಡುವೆ ಒಗ್ಗಟ್ಟು ಮೂಡಿಸುವ ಸಂಸ್ಥೆಯಾಗಬೇಕು. ಸುಮಾರು 94 ವರ್ಷಗಳ ಹಿಂದೆಯೇ ಇಂತಹ ದೂರದೃಷ್ಟಿಯ ಚಿಂತನೆಗಳನ್ನು ಮಂಡಿಸಿದವರು ಡಿ.ವಿ. ಗುಂಡಪ್ಪ.

ಸಮ್ಮೇಳನಾಧ್ಯಕ್ಷರು ಹೇಳಿದ್ದು: ಸಮ್ಮೇಳನ ಕೇವಲ ಸಾಹಿತಿಗಳ ಸಮಾವೇಶವಲ್ಲ; ಗುಂಡಪ್ಪ

'ಕುಲುಮೆ' ಬರೆದಿದ್ದು ಏಕೆ? ತಮ್ಮ ಆತ್ಮಕಥೆಯ ಅಂತರಂಗ ಬಿಚ್ಚಿಟ್ಟ ರಹಮತ್ ತರೀಕೆರೆ

ರಹಮತ್ ತರೀಕೆರೆ ಅವರ ಬಾಳಕಥನ 'ಕುಲುಮೆ'. ಕುಟುಂಬ, ಬೀದಿ, ಊರು, ಸೀಮೆಗಳನ್ನು ಪ್ರತಿಫಲಿಸುವ ಕಥನವಿದು. ಇವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯವರು. ಬದುಕು ಕಲಿಸಿದ ಪಾಠ, ತಾವು ಕಂಡ ಜೀವನವನ್ನು 'ಕುಲುಮೆ'ಯಲ್ಲಿ ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಈ ಆತ್ಮಕಥೆ ಬರೆಯಬೇಕಿನಿಸಿದ್ದು ಏಕೆ ಎನ್ನುವ ಬಗ್ಗೆ 'ಪ್ರಜಾವಾಣಿ ಡಿಜಿಟಲ್‌' ಜತೆಗೆ ಹಂಚಿಕೊಂಡಿದ್ದು ಹೀಗೆ...

'ಕುಲುಮೆ' ಬರೆದಿದ್ದು ಏಕೆ? ತಮ್ಮ ಆತ್ಮಕಥೆಯ ಅಂತರಂಗ ಬಿಚ್ಚಿಟ್ಟ ರಹಮತ್ ತರೀಕೆರೆ

ಬುಡಕಟ್ಟು ಸಂಸ್ಕೃತಿಯ ಅಸ್ಮಿತೆ ಸಂಕೇತವಾಗಿ 'ಜುಂಜಪ್ಪ ಸ್ವಾಮಿ' ಕೋಲಾಟ ತಂಡ

ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲರ ಇತಿಹಾಸ ಸಾರುವ, ಪರಂಪರೆ ಮುಂದುವರಿಸುವ, ಹಿರಿಯರ ನೆನಪಿನಲ್ಲಿ ಕಟ್ಟಿದ 'ಕೋಲಾಟ ತಂಡ'ವು ಜಾನಪದ ಕಲೆಯನ್ನು ಇಂದಿಗೂ ಜೀವಂತವಾಗಿಸಿದೆ.

ಬುಡಕಟ್ಟು ಸಂಸ್ಕೃತಿಯ ಅಸ್ಮಿತೆ ಸಂಕೇತವಾಗಿ 'ಜುಂಜಪ್ಪ ಸ್ವಾಮಿ' ಕೋಲಾಟ ತಂಡ

ಮುಖ್ಯ ಕಾರ್ಯದರ್ಶಿ ಕನ್ನಡಾಭಿಮಾನ: ಹಿರಿಯ IAS ಅಧಿಕಾರಿ ಶಾಲಿನಿ ರಜನೀಶ್ ಸಂದರ್ಶನ

ಅಧಿಕಾರಿಯಾಗುವುದು ಒಂದು ಸಾಧನೆಯಾದರೆ, ಕೆಲಸ ಮಾಡುವ ರಾಜ್ಯದ ಭಾಷೆ ಕಲಿತು ಜನರೊಂದಿಗೆ ಬೆರೆಯುವುದು ಮತ್ತೊಂದು ವಿಶೇಷ ಸಾಧನೆ. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್. ಕನ್ನಡ ಮಾತೃಭಾಷೆಯಲ್ಲದಿದ್ದರೂ ಭಾಷೆಯ ಮೇಲೆ ಆಸಕ್ತಿ ಬೆಳೆಸಿಕೊಂಡು,ಕನ್ನಡದಲ್ಲಿಯೇ ಪುಸ್ತಕಗಳನ್ನು ಬರೆಯುವ ಮಟ್ಟಕ್ಕೆ ಬೆಳೆದಿರುವ ಅವರ ಪಯಣ ಭಾಷಾಭಿಮಾನ ಮತ್ತು ನಿರಂತರ ಕಲಿಕೆ ಸ್ಫೂರ್ತಿದಾಯಕವಾಗಿದೆ.

ಅಕ್ಷರ ಲೋಕದ ಆದಿಬೆಳಕು: ಕನ್ನಡದ ಪ್ರಾಚೀನತೆಯ ಅಮರ ಶಿಲಾಸಾಕ್ಷಿ 'ಹಲ್ಮಿಡಿ ಶಾಸನ'

ಬೇಲೂರು (ಹಾಸನ ಜಿಲ್ಲೆ): ತಾಲ್ಲೂಕಿನ ಹಲ್ಮಿಡಿ ಗ್ರಾಮವು ಕನ್ನಡ ಭಾಷೆಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಸುಮಾರು 15 ಶತಮಾನಗಳ ಹಿಂದಿನ ಕನ್ನಡ ಭಾಷೆಯ ಸ್ವರೂಪ, ಅಂದಿನ ಆಡಳಿತ ವ್ಯವಸ್ಥೆ, ವೀರ ಪರಂಪರೆ ಮತ್ತು ಸಾಂಸ್ಕೃತಿಕ ಬದುಕಿನ ಕುರಿತು ಮಹತ್ವದ ಮಾಹಿತಿ ನೀಡುವ ಹಲ್ಮಿಡಿ ಶಾಸನವು ಕರ್ನಾಟಕದ ಅಮೂಲ್ಯ ಐತಿಹಾಸಿಕ ಸಂಪತ್ತು. ಇದು ಕೇವಲ ಕಲ್ಲಿನ ಮೇಲಿನ ಬರಹವಲ್ಲ; ಕನ್ನಡ ಭಾಷೆಯ ದೀರ್ಘ ಪಯಣಕ್ಕೆ ಸಾಕ್ಷಿಯಾಗಿ ನಿಂತಿರುವ ಇತಿಹಾಸದ ಜೀವಂತ ದಾಖಲೆಯಾಗಿದೆ.

ಅಕ್ಷರ ಲೋಕದ ಆದಿಬೆಳಕು: ಕನ್ನಡದ ಪ್ರಾಚೀನತೆಯ ಅಮರ ಶಿಲಾಸಾಕ್ಷಿ 'ಹಲ್ಮಿಡಿ ಶಾಸನ'

ಕರುನಾಡೋತ್ಸವ: 'ನನಗೆ ಕನ್ನಡವೇ ದೇವರು' ವಾಟಾಳ್ ನಾಗರಾಜ್ ಮನದಾಳದ ಮಾತು

'ಜನರು ದೇವರನ್ನು ಕಾಣಲು ದೇವಸ್ಥಾನಗಳಿಗೆ ಹೋಗುತ್ತಾರೆ. ಬೇರೆ ಬೇರೆ ದೇವರುಗಳನ್ನು ಪೂಜಿಸುತ್ತಾರೆ. ಆದರೆ, ನಾನು ದೇವರಿಗಿಂತ ಹೆಚ್ಚಾಗಿ ಕನ್ನಡವನ್ನು ಪೂಜಿಸುತ್ತೇನೆ. ಕನ್ನಡವೇ ನನ್ನ ದೇವರು. 1959 ರಿಂದ ಆರಂಭವಾದ ನನ್ನ ಕನ್ನಡ ಪರವಾದ ಹೋರಾಟ ಇಂದಿಗೂ ನಿಂತಿಲ್ಲ' ಎಂದು ಪ್ರಜಾವಾಣಿ ಜೊತೆ ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ತಮ್ಮ ಕನ್ನಡದ ಪ್ರೀತಿಯನ್ನು ವ್ಯಕ್ತಪಡಿಸಿದರು.

ಸಾಗರದಾಚೆ ಕನ್ನಡದ ಕಂಪು: ಕತಾರ್‌ನಲ್ಲಿ ಕನ್ನಡತನದ ಬೆಳ್ಳಿ ಹಬ್ಬದ ಪಯಣ

ಕೊಲ್ಲಿ ರಾಷ್ಟ್ರ ಕತಾರ್‌ನಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ ಪ್ರಮುಖ ಸಂಘಟನೆ ಕರ್ನಾಟಕ ಸಂಘ ಕತಾರ್. ಕಳೆದ ಎರಡೂವರೆ ದಶಕಗಳಿಂದ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಉಳಿವು ಹಾಗೂ ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಸಂಘವು ಅನಿವಾಸಿ ಕನ್ನಡಿಗರ ಪಾಲಿಗೆ ಸಾಂಸ್ಕೃತಿಕ ನೆಲೆ ಮತ್ತು ಭಾವನಾತ್ಮಕ ಬಂಧದ ವೇದಿಕೆಯಾಗಿ ಬೆಳೆದಿದೆ.

ಕನ್ನಡ ಭಾಷೆ ತಮಿಳಿನಿಂದ ಬಂದದ್ದೇ: ಭಾಷಾ ವಿದ್ವಾಂಸ ಆಯಂಡ್ರಿವ್ ಒಲೆಟ್ ಹೇಳೋದೇನು?

ಇನ್ಫೊಸಿಸ್‌ ವಿಜ್ಞಾನ ಪ್ರತಿಷ್ಠಾನವು, ಮೂಲ-ಅನ್ವಯಿಕ ವಿಜ್ಞಾನ, ಮಾನವಿಕ ಶಾಸ್ತ್ರಗಳಲ್ಲಿ ಅವಿರತವಾಗಿ ದುಡಿದ ಆರು ವಿಜ್ಞಾನಿಗಳು ಮತ್ತು ಸಂಶೋಧಕರಿಗೆ 2025ನೇ ಸಾಲಿನ ಇನ್ಫೊಸಿಸ್‌ ಪ್ರಶಸ್ತಿಗಳನ್ನು ಪ್ರದಾನ ಮಾಡಿದೆ. ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಸಮಾಜ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಆಯಂಡ್ರಿವ್ ಒಲೆಟ್ ಅವರೂ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸದ್ಯ, ಷಿಕಾಗೊ ವಿಶ್ವವಿದ್ಯಾಲಯದಲ್ಲೇ ಪ್ರಾಧ್ಯಾಪಕಿಯಾಗಿರುವ ಸಾರಾ ಪಿಯರ್ಸ್ ಟೇಲರ್ ಜೊತೆ ಸೇರಿ 9ನೇ ಶತಮಾನದ ಕಾವ್ಯಮೀಮಾಂಸೆ 'ಕವಿರಾಜಮಾರ್ಗ' ಗ್ರಂಥದ ಅನುವಾದದಲ್ಲಿ ತೊಡಗಿರುವ ಒಲೆಟ್, ಪ್ರಶಸ್ತಿ ಸ್ವೀಕರಿಸುವ ಸಲುವಾಗಿ ಇದೇ ವರ್ಷ ಜನವರಿಯಲ್ಲಿ ಬೆಂಗಳೂರಿಗೆ ಬಂದಿದ್ದರು. ಆಗ 'ಪ್ರಜಾವಾಣಿ'ಯ ಸೋದರ ಪತ್ರಿಕೆ 'ಡೆಕ್ಕನ್ ಹೆರಾಲ್ಡ್‌'ಗೆ ಮಾತಿಗೆ ಸಿಕ್ಕ ಅವರು ಕನ್ನಡ, ಸಂಸ್ಕೃತ, ಪ್ರಾಕೃತ ಭಾಷೆಗಳ ನಂಟು ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಆಯ್ದ ಕೆಲವು ಅಂಶಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.

ಕನ್ನಡ ಭಾಷೆ ತಮಿಳಿನಿಂದ ಬಂದದ್ದೇ: ಭಾಷಾ ವಿದ್ವಾಂಸ ಆಯಂಡ್ರಿವ್ ಒಲೆಟ್ ಹೇಳೋದೇನು?

ಕರುನಾಡೋತ್ಸವ 'ಪದ ಕಟ್ಟು' ಭಾಗ-2: ಇಂದಿನ ಸವಾಲು

ಕನ್ನಡದಲ್ಲಿ ನಾವು ದಿನನಿತ್ಯ ಬಳಸುವ ನೂರಾರು ಪದಗಳು ಸಂಸ್ಕೃತ, ಇಂಗ್ಲಿಷ್, ಉರ್ದು, ಪರ್ಷಿಯನ್, ಅರೇಬಿಕ್, ಪೋರ್ಚುಗೀಸ್ ಸೇರಿದಂತೆ ಹಲವು ಭಾಷೆಗಳಿಂದ ಬಂದಿವೆ. ಅವುಗಳಲ್ಲಿ ಕೆಲವು ಕನ್ನಡದ ಬಳಕೆಯಲ್ಲಿ ಎಷ್ಟು ಬೆರೆತುಹೋಗಿವೆಯೆಂದರೆ, ಅವು ಅನ್ಯಭಾಷೆಯ ಪದಗಳು ಎಂಬುದೇ ನಮಗೆ ನೆನಪಾಗುವುದಿಲ್ಲ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಒಂದಷ್ಟಾದರೂ ಪದಗಳಿಗೆ ಕನ್ನಡದ್ದೇ ಆದ ಪರ್ಯಾಯ ಪದಗಳನ್ನು ಕಟ್ಟುವ ಪುಟ್ಟ ಪ್ರಯತ್ನಕ್ಕೆ ಅಡಿ ಇಟ್ಟಿದೆ 'ಪ್ರಜಾವಣಿ ಡಿಜಿಟಲ್‌'.

ಕರುನಾಡೋತ್ಸವ 'ಪದ ಕಟ್ಟು' ಭಾಗ-2: ಇಂದಿನ ಸವಾಲು

ಕರುನಾಡೋತ್ಸವ | ಡಾ.ಬಿ.ಎಲ್‌.ವೇಣು ಸರ್ಕಲ್‌; ಕನ್ನಡಾಭಿಮಾನದ ತಾಣ

ಹಿರಿಯ ಸಾಹಿತಿ, ಕಾದಂಬರಿಕಾರ ಬಿ.ಎಲ್‌.ವೇಣು ಅವರು ಚಿತ್ರದುರ್ಗದಲ್ಲಿ ವಿಹಾರ ಮಾಡುತ್ತಿದ್ದ ಸ್ಥಳ 'ಡಾ.ಬಿ.ಎಲ್‌.ವೇಣು' ವೃತ್ತವಾಗಿ ಪ್ರಸಿದ್ಧಿ ಪಡೆದಿದೆ. ಚಿತ್ರದುರ್ಗದ ಮುನಿಸಿಪಲ್‌ ಕಾಲೊನಿಯ ಮನೆಯಿಂದ ಗೆಳೆಯರ ಜೊತೆ ಹೊರಡುತ್ತಿದ್ದ ಅವರು ತುರುವನೂರು ರಸ್ತೆಯ ಮೂಲಕ ಗೋನೂರು ಸರ್ಕಲ್‌ವರೆಗೂ ವಾಕಿಂಗ್‌ ಮಾಡುತ್ತಿದ್ದರು. ಹಸಿರು ಪರಿಸರದಲ್ಲಿ ಓಡಾಡಿ ವಾಪಸ್‌ ಬರುತ್ತಿದ್ದರು. ಹಳೇ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಕೆಳಗಿರುವ ಈ ಜಾಗ ಈಗ ಡಾ.ಬಿ.ಎಲ್‌.ವೇಣು ಸರ್ಕಲ್‌ ಎಂಬ ಹೆಸರು ಪಡೆದಿದೆ. ಅವರ ಅಭಿಮಾನಿಗಳ, ಸಾರ್ವಜನಿಕರು ಒತ್ತಾಯದ ಮೇರೆಗೆ ನಗರಸಭೆ ಆ ಸ್ಥಳಕ್ಕೆ ನಾಮಕರಣ ಮಾಡಿ ಆದೇಶ ಹೊರಡಿಸಿದೆ. 2014ರಲ್ಲಿ ಬಿ.ಕಾಂತರಾಜ್‌ ಅವರು ಅಧ್ಯಕ್ಷರಾಗಿದ್ದಾಗ ನಾಮಕರಣ ಮಾಡಲಾಯಿತು. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌.ಆಂಜನೇಯ ಅವರ ಸಮ್ಮುಖದಲ್ಲಿ ವೃತ್ತವನ್ನು ಉದ್ಘಾಟನೆ ಮಾಡಲಾಯಿತು.

ಕರುನಾಡೋತ್ಸವ | ಡಾ.ಬಿ.ಎಲ್‌.ವೇಣು ಸರ್ಕಲ್‌; ಕನ್ನಡಾಭಿಮಾನದ ತಾಣ

ಕರುನಾಡೋತ್ಸವ | ಮೊಮ್ಮಕ್ಕಳ ಮೂಲಕ ಕನ್ನಡಾಭಿಮಾನ ಮೆರೆದ ಛಾಯಾಗ್ರಾಹಕ!

ಹೂವಿನಲ್ಲಿ ಅರಳಿದ ಕರ್ನಾಟಕದ ಭೂಪಟ, ಪುಟಾಣಿಗಳ ಮೈಮೇಲೆ ಕನ್ನಡದ ಬಾವುಟದ ಉಡುಪು; ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದ ರಾಜ್ಯೋತ್ಸವದ ವಿಶಿಷ್ಟ ಆಚರಣೆ..ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ಮೇಲಿನ ಅಭಿಮಾನವನ್ನು ಕೇವಲ ಮಾತುಗಳಿಗೆ ಸೀಮಿತಗೊಳಿಸದೆ, ತಮ್ಮದೇ ಆದ ವಿಶಿಷ್ಟ ಕಲ್ಪನೆಯ ಮೂಲಕ ಅಭಿವ್ಯಕ್ತಿಪಡಿಸಿರುವ ಸರಗೂರು ಪಟ್ಟಣದ ಛಾಯಾಗ್ರಾಹಕರೊಬ್ಬರು ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕರುನಾಡೋತ್ಸವ | ಮೊಮ್ಮಕ್ಕಳ ಮೂಲಕ ಕನ್ನಡಾಭಿಮಾನ ಮೆರೆದ ಛಾಯಾಗ್ರಾಹಕ!

ಪ್ರಜಾವಾಣಿ ಕರುನಾಡೋತ್ಸವ | ಸಾಹಿತಿಗಳ ಊರು-ಮನೆಯ ಈಗಿನ ಸ್ಥಿತಿಗತಿ: ಶಿವರಾಮ ಕಾರಂತ

ಕರ್ನಾಟಕದ ಸಾಂಸ್ಕೃತಿಕ ನಕಾಶೆಯಲ್ಲಿ 'ಪುತ್ತೂರು' ಎಂದರೆ ಥಟ್ಟನೆ ನೆನಪಾಗುವುದು ಕಡಲ ತೀರದ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರ ಹೆಸರು. ವಿಜ್ಞಾನದ ನಿಷ್ಠೆ, ಕಲೆಯ ಒಲವು, ಪರಿಸರ ಕಾಳಜಿ ಮತ್ತು ಬಂಡಾಯದ ಬದುಕನ್ನು ಏಕಕಾಲಕ್ಕೆ ಸಮ್ಮಿಳಿತಗೊಳಿಸಿದ್ದ ಕಾರಂತರ ಬಹುಮುಖಿ ವ್ಯಕ್ತಿತ್ವದ ಹಿಂದೆ ಒಂದು ಸಾಕ್ಷಿಪ್ರಜ್ಞೆಯಂತಿತ್ತು ಪುತ್ತೂರಿನಲ್ಲಿ ಅವರು ಕಟ್ಟಿದ ನೆಲೆವೀಡು 'ಬಾಲವನ'. ಇದು ಬರಿಯ ಮನೆಯಾಗಿರಲಿಲ್ಲ, ಅದು ಅವರ ಬದುಕಿನ ಅಪ್ಪಟ ಪ್ರಯೋಗಶಾಲೆ.

ಪ್ರಜಾವಾಣಿ ಕರುನಾಡೋತ್ಸವ | ಸಾಹಿತಿಗಳ ಊರು-ಮನೆಯ ಈಗಿನ ಸ್ಥಿತಿಗತಿ: ಶಿವರಾಮ ಕಾರಂತ

AI ಯುಗದಲ್ಲಿ ಕನ್ನಡ ಭಾಷೆಯ ಮುಂದಿರುವ ಸವಾಲುಗಳು

ಯಾವುದೇ ಭಾಷೆಯ ಅಳಿವು, ಉಳಿವು ಆ ಭಾಷೆಯನ್ನು ಬಳಸುವ, ವಿನಿಯೋಗಿಸುವ, ಅಳವಡಿಸುವ, ಆಡುತ್ತಾ, ಹಾಡುತ್ತಾ, ಬರೆಯುತ್ತಾ, ಕೇಳುತ್ತಾ ಹಬ್ಬಿಸುವ ಪ್ರಕ್ರಿಯೆಯ ಮೇಲೆ ನಿಂತಿದೆ. ಈ ಯಾವ ಕ್ರಿಯೆಯೂ ಇಲ್ಲದಿರುವ ಭಾಷೆಗಳು ಅವಸಾನ ಹೊಂದಿರುವುದನ್ನು ನಾವೀಗಾಗಲೆ ನೋಡಿದ್ದೇವೆ. ಅವಸಾನದಂಚಿನಲ್ಲಿರುವ ಭಾಷೆಗಳೂ ಸಾಕಷ್ಟಿವೆ. ಮುಂದೊಮ್ಮೆ ಪರಿಶೀಲಿಸುವಾಗ ಲಿಪಿಯಿರುವ ಭಾಷೆಗಳನ್ನು ಕಂಡು ಇವೂ ಸಹ ಅಸ್ತಿತ್ವದಲ್ಲಿದ್ದವು ಅನ್ನಬಹುದೇನೊ. ಲಿಪಿಯಿಲ್ಲದ ಭಾಷೆಗಳನ್ನು ಕೇಳುವವರಾರು.

AI ಯುಗದಲ್ಲಿ ಕನ್ನಡ ಭಾಷೆಯ ಮುಂದಿರುವ ಸವಾಲುಗಳು

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೇ?

ಕನ್ನಡ ಸಾಹಿತ್ಯ ಪರಿಷತ್ತನ್ನು ಅದರ ಸ್ಥಾಪನೆಯ ಮೂಲ ಉದ್ದೇಶಗಳಿಗೆ ಅನುಗುಣವಾಗಿ ಮುನ್ನಡೆಸುವ, ಕುಗ್ಗಿದ ಅದರ ಘನತೆಯನ್ನು ಮರುಸ್ಥಾಪಿಸುವ ಮಾತುಗಳು ಈಗ ಮತ್ತೆ ಮತ್ತೆ ಕೇಳಿ ಬರುತ್ತಿವೆ. ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಭಾವನೆ ಜನರಲ್ಲಿದೆ. ಆದರೆ ಅದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಆಗಿ ಉಳಿದಿದೆಯೇ? ಈ ಪ್ರಶ್ನಗೆ ಉತ್ತರ ಹೇಳುವವರು ಯಾರು?

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೇ?

ಕರುನಾಡೋತ್ಸವ: ಕರ್ನಾಟಕದ ಆನೆಗಳಿಗೆ ಹೆಚ್ಚ ಬೇಡಿಕೆ: ಸೆರೆ, ಪಳಗಿಸುವ ಕಲೆಯ ಹಿರಿಮೆ

ಕಾಡಾನೆಗಳ ಆವಾಸ ಮತ್ತು ಕಾರಿಡಾರ್‌ಗಳ ಸಂರಕ್ಷಣೆ, ಗ್ರಾಮಸ್ಥರಿಗೆ ಬೆಳೆ ಹಾನಿ ಪರಿಹಾರ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆಗಳು ಇವೆಲ್ಲವೂ ಕುಮ್ಕಿ ಆನೆಗಳ ಜೊತೆ ಜೊತೆಗೆ ಸಾಗಬೇಕು. ಏಕೆಂದರೆ ಕುಮ್ಕಿ ಆನೆ ಸಂಘರ್ಷವನ್ನು ತಾತ್ಕಾಲಿಕವಾಗಿ ತಗ್ಗಿಸಬಹುದು, ಆದರೆ ಶಾಶ್ವತ ಪರಿಹಾರ ಕಾಡು ಮತ್ತು ಜನರ ನಡುವಿನ ಸಮತೋಲನದಲ್ಲಿದೆ. ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಸಾಗುವ ಆನೆಯನ್ನು ನೋಡಿದವರಿಗೆ ಒಂದು ಪ್ರಶ್ನೆ ಸಹಜವಾಗಿ ಮೂಡುತ್ತದೆ. ಕಾಡಿನ ಈ ಬೃಹತ್ ಜೀವಿ ಮನುಷ್ಯನ ಮಾತಿಗೆ ಹೇಗೆ ಹೊಂದಿಕೊಂಡಿತು? ಇದರ ಹಿಂದೆ ಶತಮಾನಗಳ ಅನುಭವ, ತಾಳ್ಮೆ ಮತ್ತು ನಂಬಿಕೆಯ ಪರಂಪರೆ ಇದೆ. ಅದೇ ಕಾರಣಕ್ಕೆ ಇಂದು ಕರ್ನಾಟಕದ ಆನೆಗಳು ಮತ್ತು ಅವುಗಳನ್ನು ನಿರ್ವಹಿಸುವ ಕೌಶಲ್ಯ ಹೊರರಾಜ್ಯಗಳಲ್ಲೂ ಬೇಡಿಕೆ ಪಡೆದಿವೆ.

ಕರುನಾಡೋತ್ಸವ | ರಾಜ್ಯದ ಆನೆಗಳಿಗೆ ಹೆಚ್ಚು ಬೇಡಿಕೆ: ಸೆರೆ, ಪಳಗಿಸುವ ಕಲೆಯ ಹಿರಿಮೆ
Dailyhunt
Disclaimer: This content has not been generated, created or edited by Dailyhunt. Publisher: Prajavani